ಮಂಗಳೂರು: ಬಿಗ್ ಬಾಸ್ ನಲ್ಲಿ ಡ್ರೋನ್ ಪ್ರತಾಪ್ ರನ್ನರ್ ಅಪ್ ಸ್ಥಾನ ಪಡೆದ ಹಿನ್ನೆಲೆ ಅರ್ಧ ಮೀಸೆ, ಗಡ್ಡ ಬೋಳಿಸಿಕೊಂಡ ಪ್ರತಾಪ್ ಅಭಿಮಾನಿ

ಸಮಗ್ರ ನ್ಯೂಸ್: ‘ಬಿಗ್ ಬಾಸ್ ಕನ್ನಡ ಸೀಸನ್ 10’ನ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ವಿನಯ್ ಗೌಡ, ಸಂಗೀತಾ ಶೃಂಗೇರಿ ಅವರಂಥ ಘಟಾನುಘಟಿ ಸ್ಪರ್ಧಿಗಳನ್ನು ಹಿಂದಿಕ್ಕಿದ ಡ್ರೋನ್ ಪ್ರತಾಪ್ ವಿನ್ ಆಗುತ್ತಾರೆ ಎಂದು ಸಾಕಷ್ಟು ಅಭಿಮಾನಿಗಳು ಭಾವಿ ಸಿದ್ದರು. ಆದರೆ, ರನ್ನರ್ ಅಪ್ ಆಗಿದ್ದು, ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಅಭಿಮಾನಿಯೂರ್ವ ಡ್ರೋನ್ ಪ್ರತಾಪ್ ಸೋತಿದ್ದಕ್ಕೆ ತನ್ನ ಅರ್ಧ ಮೀಸೆ ಹಾಗೂ ಗಡ್ಡವನ್ನು ಬೋಳಿಸಿದ್ದಾನೆ.

. Ad Widget . Ad Widget . Ad Widget

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಂಟ್ರ ಗ್ರಾಮದ ನಿವಾಸಿ ಝೈನುಲ್ ಆಬಿದ್ ಡ್ರೋನ್ ಪ್ರತಾಪ್ ಅಭಿಮಾನಿ. ಬಿಗ್ ಬಾಸ್ ಸೀಸನ್ 10 ರಲ್ಲಿ ಪ್ರತಾಪ್ ವಿನ್ನರ್ ಆಗುತ್ತಾರೆ ಎಂದು ಹೇಳಿಕೊಂಡಿದ್ದ. ಒಂದು ವೇಳೆ ಸೋತರೆ ಅರ್ಧ ಮೀಸೆ, ಗಡ್ಡ ತೆಗೆಯುವುದಾಗಿ ಹಾಗೂ ಜೊತೆಗೆ ಹಸಿಮೆಣಸಿನಕಾಯಿ ತಿನ್ನುವುದಾಗಿ ಚಾಲೆಂಜ್ ಹಾಕಿದ್ದ. ಇದರ ವಿಡಿಯೋವನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ.

. Ad Widget .

ಇದೀಗ ಪ್ರತಾಪ್ ರನ್ನರ್ ಅಪ್ ಆಗಿದ್ದರಿಂದ ಅಭಿಮಾನಿ ಝೈನುಲ್ ಆಬಿದ್ ನುಡಿದಂತೆ ನಡೆದುಕೊಂಡಿದ್ದು, ಅರ್ಧ ಮೀಸೆ ಹಾಗೂ ಗಡ್ಡವನ್ನು ಬೋಳಿಸಿ ಹಸಿಮೆಣಸಿನಕಾಯಿ ತಿಂದಿದ್ದಾನೆ. ಇದರ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾನೆ.

Leave a Comment

Your email address will not be published. Required fields are marked *