ಎಣ್ಣೆ ನಶೆಯಲ್ಲಿದ್ದವರನ್ನು ಕಂಟ್ರೋಲ್ ಮಾಡಲು ಪೊಲೀಸರ ಹರಸಾಹಸ…!

ಸಮಗ್ರ ನ್ಯೂಸ್: ಹೊಸ ವರ್ಷನೇ ಹಾಗೇ ಜನರನ್ನ ಹೇಗೆ ಸೆಳೆಯುತ್ತೊ ಕಾಣೆ. ಬೆಂಗಳೂರಲ್ಲಂತು ಹೊಸ ವರ್ಷ ಭರ್ಜರಿಯಾಗಿ ನಡಿತು. ಯುವಕ- ಯುವತಿಯರ ಮೋಜು,ಮಸ್ತಿನಲ್ಲಿ ಪೊಲೀಸರು ಸುಸ್ತೋ ಸುಸ್ತೋ.

Ad Widget ... ..

ಬೆಂಗಳೂರಿನ ಬಾರ್‌, ಪಬ್​​ಗಳಲ್ಲಿ ಪಾರ್ಟಿ ಜೋರಾಗಿತ್ತು. ಕೋರಮಂಗಲ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ ಸೇರಿದಂತೆ ಎಲ್ಲೆಡೆ ಪಾರ್ಟಿ. ಈ ಸಂಭ್ರಮದಲ್ಲಿ ಯುವಕ, ಯುವತಿಯರು ಕುಡಿದು ತೂರಾಡುತ್ತಿದ್ದದ್ದು ಕಂಡು ಬಂತು. ಕುಡಿದು ಪ್ರಜ್ಞೆ ತಪ್ಪಿದ ಯುವತಿಯರನ್ನ ಪೊಲೀಸರು ಸೇಫ್ಟಿ ಹೈಲ್ಯಾಂಡ್‌ಗೆ ರವಾನಿಸಿದರು. ಇನ್ನು ಕೆಲವರು ರಸ್ತೆ ಬದಿಯೇ ತಲೆ ಹಿಡಿದುಕೊಂಡು ಕುಳಿತಿರುವ ದೃಶ್ಯಗಳು ಕಂಡು ಬಂದವು. ಓರ್ವ ಯುವತಿಯನ್ನು ಆಟೋದಲ್ಲಿ ಕೂರಿಸಿದ್ರೂ ಸುಮ್ಮನಾಗದೇ ಜೋರಾಗಿ ಕೂಗಾಡಿದ್ದಾಳೆ. ಈ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದವರ ಮೇಲೆ ಮೊಬೈಲ್ ಎಸೆದಿದ್ದಾಳೆ. ನಂತರ ಪೊಲೀಸರು ಜೋರಾಗಿ ಗದರಿದ್ದರಿಂದ ಸುಮ್ಮನಾಗಿದ್ದಾಳೆ.

Ad Widget

ಕೋರಮಂಗಲದಲ್ಲಿ ಎಣ್ಣೆ ನಶೆಯಲ್ಲಿದ್ದ ಯುವತಿಯನ್ನು ಕಂಟ್ರೋಲ್ ಮಾಡಲು ಪೊಲೀಸರು ಹರಸಾಹಸಪಡಬೇಕಾಯ್ತು. ನಾಲ್ಕು ಜನ ಮಹಿಳಾ ಸಿಬ್ಬಂದಿ ಯುವತಿಯನ್ನು ಆಟೋದಲ್ಲಿ ಕರೆದೊಯ್ದು ಸೇಫ್ಟಿ ಹೈಲ್ಯಾಂಡ್‌ಗೆ ರವಾನಿಸಿದರು. ಇನ್ನು ಬ್ರಿಗೇಡ್ ರಸ್ತೆಯಲ್ಲಿ ಗೆಳತಿ ಜೊತೆ ಅಸಭ್ಯವಾಗಿ ನಡೆದುಕೊಂಡ ಯುವಕನಿಗೆ ಪ್ರಿಯಕರ ಹಿಗ್ಗಾಮುಗ್ಗ ಥಳಿಸಿದ್ದಾನೆ. ನಂತರ ಮಧ್ಯ ಪ್ರವೇಶಿಸಿದ ಪೊಲೀಸರು ಯುವಕನನ್ನು ವಶಕ್ಕೆ ಪಡೆದುಕೊಂಡು ಪರಿಸ್ಥಿತಿ ತಿಳಿಗೊಳಿಸಿದರು.

ಬೆಂಗಳೂರಿನ ಬ್ರಿಗೇಡ್ ರೋಡ್‌ನ ಒಪೆರಾ ಸರ್ಕಲ್ ಬಳಿ ಪಾರ್ಟಿವೇಳೆ ಪಿಟ್ಸ್‌ ನಿಂದ ಯುವತಿಯೋರ್ವಳು ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಂತರ ಸ್ಥಳಕ್ಕೆ ಬಂದ ಪೊಲೀಸರು ಜನರನ್ನ ಚದುರಿಸಿ ಯುವತಿಯನ್ನ ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ರವಾನಿಸಿದರು.

ಕೋರಮಂಗಲ ಪಬ್‌ನಲ್ಲಿ ಯುವಕನೊಬ್ಬ ಕನ್ನಡ ಸಾಂಗ್ಸ್ ಹಾಕಿಲ್ಲ ಅಂತಾ ಕುಡಿದ ಮತ್ತಿನಲ್ಲಿ ಫುಲ್ ಕಿರಿಕ್ ಮಾಡಿದ್ದಾನೆ. ಪೊಲೀಸರು ಆತನನ್ನು ಸಮಾಧಾನ ಪಡಿಸಲು ಹರಸಾಹಸ ಪಟ್ಟಿದ್ದಾರೆ.

Leave a Comment

Your email address will not be published. Required fields are marked *