ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕು ಬಾಡಗರಕೇರಿ ಶ್ರೀ ಮೃತ್ಯುಂಜಯ ದೇವಾಲಯದಲ್ಲಿ ಅಯೋಧ್ಯೆಯ ಶ್ರೀ ರಾಮನ ಅಕ್ಷತೆಯನ್ನು ನಾಡಿನ ಜನತೆಗೆ ವಿತರಿಸುವ ಕಾರ್ಯಕ್ರಮದ ಅನ್ವಯ ಈ ಭಾಗದ ಹಿಂದೂ ಸಂಘಟನೆಯ ಪ್ರಮುಖರು ಕಳೆದ ಒಂದು ವಾರಗಳ ಕಾಲ ದೇವಾಲಯದಲ್ಲಿ ಅಕ್ಷತೆ ಹಾಗೂ ಕಳಶವನ್ನು ಇಟ್ಟು ಇಂದು ಮೃತ್ಯುಂಜಯನಿಗೆ ಅಭಿಷೇಕ ಹಾಗೂ ವಿಶೇಷ ಪೂಜೆಯನ್ನು ನೆರವೇರಿಸಿದರು. ನಂತರ ಗ್ರಾಮದ ಎಲ್ಲ ಮನೆಗಳಿಗೆ ಅಕ್ಷತೆಯನ್ನು ವಿತರಿಸುವ ವ್ಯವಸ್ಥೆಯನ್ನು ಸಜ್ಜುಗೊಳಿಸಿದರು.
ಸಂಘ ಪರಿವಾರದ ಪ್ರಮುಖರು ಹಾಗು ಬಿಜೆಪಿಯ ಸ್ಥಳೀಯ ಬೂತ್ ಅಧ್ಯಕ್ಷ ಕಾಯಪಂಡ ಮದು ಮೋಟಯ್ಯ, ಪಂಚಾಯತ್ ಅಧ್ಯಕ್ಷ ಅಮ್ಮತೀರ ರಾಜೇಶ್, ಸದಸ್ಯ ಮಲ್ಲೇಂಗಡ ರೀನ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.




























