ಕೈಯಲ್ಲಲ್ಲ, ಬೆನ್ನಲ್ಲಿ ಕ್ಯಾಚ್ ಹಿಡಿದು ತಂಡ ಗೆಲ್ಲಿಸಿದ ವಿಕೆಟ್ ಕೀಪರ್| ಹೀಗೂ ಕ್ರಿಕೆಟ್ ಆಡ್ಬೂದು..!

ಸಮಗ್ರ ನ್ಯೂಸ್: 2023ರ ಐಸಿಸಿ ವಿಶ್ವಕಪ್‌’ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತವಾಗಿ ಆಟವಾಡಿ, ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದರು. ಈ ಮೂಲಕ ಅಸಾಧ್ಯವಾದ ಜಯವನ್ನು ಸಾಧಿಸಿದ್ದರು.

Ad Widget ... ..

ಈ ಪಂದ್ಯದ ಸಂದರ್ಭದಲ್ಲಿ ಗ್ಲೆನ್ ಮ್ಯಾಕ್ಸ್‌’ವೆಲ್ ಕಾಲಿಗೆ ಗಾಯವಾಗಿತ್ತು. ಆದರೆ ತಂಡದ ಗೆಲುವಿಗಾಗಿ ಹೋರಾಡಿದ ಅವರು ಛಲ ಬಿಡದೆ ಮೈದಾನದಲ್ಲಿ ದೃಢವಾಗಿ ನಿಂತರು. ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಪವಾಡವೇ ಸರಿ. ಇದೀಗ ಇಂತಹದ್ದೇ ಸನ್ನಿವೇಶ ಫೀಲ್ಡಿಂಗ್’ನಲ್ಲಿ ನಡೆದಿದೆ.

Ad Widget

ಸದ್ಯ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಿಕೆಟ್ ಕೀಪರ್ ಕ್ಯಾಚ್ ಹಿಡಿದ ರೀತಿ ಕ್ರಿಕೆಟ್ ಇತಿಹಾಸದಲ್ಲೇ ಅಭಿಮಾನಿಗಳು ಕಂಡಿರದ ದೃಶ್ಯವಾಗಿದೆ.

ಕೆಪಿಎಲ್ ಮತ್ತು ಕೆಸಿಎಲ್ ತಂಡಗಳ ನಡುವಿನ ಪಂದ್ಯದ ವಿಡಿಯೋ ಇದಾಗಿದೆ. ಈ ಪಂದ್ಯದಲ್ಲಿ ಫೀಲ್ಡಿಂಗ್ ತಂಡದ ವಿಕೆಟ್ ಕೀಪರ್ ಕ್ಯಾಚ್ ಹಿಡಿದಿದ್ದು ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದೆ. ವಿಕೆಟ್ ಕೀಪರ್ ಕ್ಯಾಚ್ ಒಂದನ್ನು ಕೈಯಿಂದಲ್ಲ, ಬೆನ್ನಿಂದ ಹಿಡಿದಿದ್ದಾರೆ.

ವಿಕೆಟ್ ಕೀಪರ್ ಒಂದು ಬದಿಗೆ ನೆಗೆದು ಕ್ಯಾಚ್ ಹಿಡಿಯಲು ಪ್ರಯತ್ನಿಸಿದಾಗ, ಆಯತಪ್ಪಿ ಕೆಳಗೆ ಬಿದ್ದರು. ಆದರೆ ಅಚ್ಚರಿ ಎಂಬಂತೆ ಚೆಂಡು ವಿಕೆಟ್ ಕೀಪರ್ ಬೆನ್ನಿನ ಮೇಲೆ ಬಿದ್ದು ನಿಂತಿತು. ಅದನ್ನು ವಿಕೆಟ್ ಕೀಪರ್ ಕೈಯಿಂದ ತಡೆದು ಹಿಡಿದರು ಇದು ಕ್ರಿಕೆಟ್ ಇತಿಹಾಸದಲ್ಲಿಯೇ ಮೊದಲು. ಅಂದಹಾಗೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ.

Leave a Comment

Your email address will not be published. Required fields are marked *