ಇಂದು ಅಯೋಧ್ಯೆಯಲ್ಲಿ ಬೃಹತ್ ದೀಪೋತ್ಸವ/ 24 ಲಕ್ಷ ದೀಪಗಳಿಂದ ಬೆಳಗಲಿದೆ ರಾಮ ಜನ್ಮಭೂಮಿ

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇಂದು ರಾತ್ರಿ ಬೃಹತ್ ದೀಪೋತ್ಸವ ನಡೆಯಲಿದ್ದು, 24 ಲಕ್ಷ ದೀಪಗಳಿಂದ ಸರಯೂ ನದಿ ತೀರ ಕಂಗೊಳಿಸಲಿದೆ. ಜಗತ್ತಿನಲ್ಲೇ ಪ್ರಥಮ ಬಾರಿ 24 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ರಾಮ ಜನ್ಮಭೂಮಿ ಗಿನ್ನಿಸ್ ದಾಖಲೆ ನಿರ್ಮಿಸಲು ಸಜ್ಜಾಗಿದೆ. ಅಯೋಧ್ಯೆಯ ಸರಯೂ ನದಿಯ ತೀರದ ಉದ್ದಕ್ಕೂ ದೀಪಗಳನ್ನು ಬೆಳಗಿಸಲಾಗುತ್ತದೆ.

Ad Widget ... ..

ರಾಮ್ ಮನೋಹರ್ ಲೋಹಿಯಾ ವಿಶ್ವವಿದ್ಯಾನಿಲಯವು ಈ ದೀಪೋತ್ಸವಕ್ಕೆ ಅದ್ಧೂರಿ ವ್ಯವಸ್ಥೆಯನ್ನು ಮಾಡಿದ್ದು, ಸರಯೂ ನದಿ ತೀರದ 51 ಘಾಟ್‍ಗಳಲ್ಲಿ 24 ಲಕ್ಷ ಮಣ್ಣಿನ ದೀಪಗಳನ್ನು ಅಳವಡಿಸಲಾಗಿದೆ. ಈ ಬೃಹತ್ ದೀಪೋತ್ಸವದಲ್ಲಿ 25 ಸಾವಿರ ಸ್ವಯಂಸೇವಕರು ಭಾಗವಹಿಸಲಿದ್ದು, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಜಾರ್ಖಂಡ್‍ನ ಆದಿವಾಸಿ ಜನಾಂಗದವರ ಸಮ್ಮುಖದಲ್ಲಿ ದೀಪಗಳನ್ನು ಬೆಳಗಿಸಲಿದ್ದಾರೆ. ಇದಕ್ಕಾಗಿ ಜಾರ್ಖಂಡ್‍ನ ಆದಿವಾಸಿ ಜನಾಂಗ ಬರಿಗಾಲಿನಲ್ಲಿ ಆಯೋಧ್ಯೆಗೆ ಬಂದಿದ್ದಾರೆ.

Ad Widget

ಮಣ್ಣಿನ ದೀಪಗಳ ಜೊತೆ ರಂಗವಲ್ಲಿ ಮತ್ತು ಹೂವುಗಳಿಂದ ಅಯೋಧ್ಯೆ ಅಲಂಕಾರಗೊಂಡಿದ್ದು, ದಾಖಲೆಯ ದೀಪೋತ್ಸವಕ್ಕೆ ಸಜ್ಜಾಗಿದೆ. ಇದರ ಜೊತೆಗೆ ಲೇಸರ್ ಶೋ ನಡೆಸಲು ಸಕಲ ಸಿದ್ಧತೆ ಮಾಡಲಾಗಿದೆ.

Leave a Comment

Your email address will not be published. Required fields are marked *