ಮೆಟ್ರೋದಲ್ಲಿ ಸರ್ಕಸ್/ ನಾಲ್ವರಿಗೆ ದಂಡ

ಸಮಗ್ರ ನ್ಯೂಸ್: ಹಸಿರು ಲೈನ್ ಮೆಟ್ರೋದಲ್ಲಿ ಯಲಚೇನಹಳ್ಳಿಗೆ ಹೋಗುತ್ತಿದ್ದಾಗ ಕೆಲವು ವಿದ್ಯಾರ್ಥಿಗಳು ಹುಚ್ಚಾಟ ನಡೆಸಿದ್ದು. ಅವರಿಗೆ ಮೆಟ್ರೋ ಸಿಬ್ಬಂದಿ ದಂಡ ಹಾಕಿದ ಘಟನೆ ನಡೆದಿದೆ.

. Ad Widget . Ad Widget . Ad Widget .

ರಾತ್ರಿ ಸುಮಾರು 11 ಗಂಟೆಗೆ ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ, ನಿಲ್ಲುವಾಗ ಹಿಡಿಯುವ ಹ್ಯಾಂಡಲ್‌ಗಳನ್ನು ಬಳಸಿ ಅದರಲ್ಲಿ ಸರ್ಕಸ್ ಮಾಡಿದ್ದರು. ರೋಲಿಂಗ್ ವ್ಯಾಯಾಮ ಮಾಡಿದ ನಾಲ್ವರು ವಿದ್ಯಾರ್ಥಿಗಳ ವರ್ತನೆಗೆ ಸಹಪ್ರಯಾಣಿಕರು ಆಗಲೇ ಕಿಡಿ ಕಾರಿದ್ದರು. ಆದರೆ, ವಿದ್ಯಾರ್ಥಿಗಳು ತಮ್ಮ ಉದ್ಧಟತನ ಮುಂದುವರಿಸಿದ್ದರು.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಈ ನಡುವೆ, ಪ್ರಯಾಣಿಕರು ಈ ಸರ್ಕಸ್‌ನ ವಿಡಿಯೊ ಮಾಡಿ ಯಲಚೇನಹಳ್ಳಿಯ ಮೆಟ್ರೋ ನಿಲ್ದಾಣದಲ್ಲಿದ್ದ ಸೆಕ್ಯೂರಿಟಿ ಸ್ಟಾಫ್‌ಗೆ ನೀಡಿದ್ದರು. ಮೆಟ್ರೋ ಪ್ರಾಪರ್ಟಿ ಡ್ಯಾಮೇಜ್ ಮಾಡಿದ ವಿದ್ಯಾರ್ಥಿಗಳಿಗೆ 7500 ದಂಡ ವಿಧಿಸಿದ್ದಲ್ಲದೆ, ಮೆಟ್ರೋದಲ್ಲಿ ಈ ರೀತಿಯ ವರ್ತನೆ ತೋರದಂತೆ ಎಚ್ಚರಿಕೆ ನೀಡಲಾಗಿದೆ.

Leave a Comment

Your email address will not be published. Required fields are marked *