ಮಂಗಳೂರು: ಬೆಂಗ್ರೆ ಬಂದರಿನಲ್ಲಿ ಮೀನುಗಾರಿಕಾ ಬೋಟ್ ಬೆಂಕಿಗಾಹುತಿ

ಸಮಗ್ರ ನ್ಯೂಸ್: ಆಕಸ್ಮಿಕ ಬೆಂಕಿಗೆ ಮೀನುಗಾರಿಕಾ ಬೋಟೊಂದು ಸಂಪೂರ್ಣವಾಗಿ ಭಸ್ಮವಾದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬೆಂಗ್ರೆ ಮೀನುಗಾರಿಕಾ ಬಂದರಿನಲ್ಲಿ ಅ. 10ರಂದು ಮುಂಜಾನೆ 4.30ಕ್ಕೆ ಸಂಭವಿಸಿದೆ.

. Ad Widget . Ad Widget . Ad Widget .

ಬೋಟ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಆವರಿಸಿ ಕೋಟ್ಯಾಂತರ ಮೌಲ್ಯದ ವಸ್ತು ನಾಶವಾಗಿದೆ. ಬೆಂಕಿ ಬಂದರಿನಲ್ಲಿ ಲಂಗರು ಹಾಕಿರುವ ಇನ್ನಷ್ಟು ಬೋಟ್ ಗಳಿಗೆ ಹರಡುವ ಮುನ್ಸೂಚನೆ ದೊರೆತ ಹಿನ್ನಲೆಯಲ್ಲಿ ಸ್ಥಳೀಯರು ಬೆಂಕಿ ತಗುಲಿದ ಬೋಟನ್ನು ಬಂದರಿನಿಂದ ನದಿ ಕಡೆಗೆ ಕೊಂಡೊಯ್ದಿದ್ದಾರೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಸ್ಥಳೀಯರ ಮುನ್ನೆಚರಿಕೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಅರುಣ್ ಎಂಬವರು ಈ ಬೋಟ್ ಅನ್ನು ನಡೆಸುತ್ತಿದ್ದರು. ಕದ್ರಿ ಮತ್ತು ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.

Leave a Comment

Your email address will not be published. Required fields are marked *