ಆಭರಣ ಕೊಳ್ಳಲು ಇದು ರೈಟ್ ಟೈಮ್| ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ

ಸಮಗ್ರ ನ್ಯೂಸ್: ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಈ ಸಂದರ್ಭದಲ್ಲಿ ಚಿನ್ನ ಖರೀದಿಸಬೇಕೆಂಬ ಲೆಕ್ಕಾಚಾರ ಹೊಂದಿದ್ದವರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಗುರುವಾರದಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.

Ad Widget ... ..

ಹತ್ತು ಗ್ರಾಂ ಚಿನ್ನದ ದರದಲ್ಲಿ 650 ರೂಪಾಯಿಗಳಷ್ಟು ಇಳಿಕೆ ಕಂಡು ಬಂದಿದ್ದು, 58,950 ರೂಪಾಯಿಗಳಿಗೆ ಮಾರಾಟವಾಗಿದೆ. ಹಾಗೆಯೇ ಬೆಳ್ಳಿ ಬೆಲೆಯಲ್ಲೂ ಕೆಜಿಗೆ 1,000 ರೂಪಾಯಿ ಕಡಿಮೆಯಾಗಿದ್ದು, 73,100 ರೂಪಾಯಿಗಳಿಗೆ ಮಾರಾಟವಾಗಿದೆ.

Ad Widget

ಅಂತರರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಏರಿಳಿತವಾಗುತ್ತಿದ್ದು, ಇದೀಗ ಇಳಿಕೆ ಕಂಡು ಬಂದಿರುವ ಕಾರಣ ಭಾರತೀಯ ಮಾರುಕಟ್ಟೆಯಲ್ಲೂ ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ.

Leave a Comment

Your email address will not be published. Required fields are marked *