ಸಮಗ್ರ ನ್ಯೂಸ್: ರಾಜ್ಯ ಸರ್ಕಾರದ ಅತ್ಯಂತ ಮಹತ್ಬಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿ. ಮನೆಯೊಡತಿಗೆ ಪ್ರತಿ ತಿಂಗಳು ಎರಡು ಸಾವಿರ ಹಣ ಘೋಷಿಸಿದಂತೆ ಈಗಾಗಲೇ ಕಳೆದೊಂದು ವಾರದಿಂದ ಹಣ ಅವರ ಬ್ಯಾಂಕ್ ಖಾತೆಗೆ ಡಿಬಿಟಿ ಮಾಡಲಾಗುತ್ತಿದೆ.
ರಾಜ್ಯಾದ್ಯಂತ ಇದರ ಪ್ರಮಾಣ ಶೇ.45ರಷ್ಟು ಇದ್ದರೆ ರಾಜಧಾನಿ ಬೆಂಗಳೂರಿನಲ್ಲಿಯೇ ಇದರ ಶೇಕಡಾ 20ರಷ್ಟು ತಲುಪಿಲ್ಲ. ಇನ್ನು ಹತ್ತು ದಿನದಲ್ಲಿ ಉಳಿದವರಿಗೆ ಹಣ ಜಮೆ ಆಗಲಿದೆ. ಇದರಲ್ಲಿ ಕ್ರಮವಾಗಿ ಬೆಂಗಳೂರು ನಗರ 380, ಗ್ರಾಮಾಂತರ ಜಿಲ್ಲೆಯ 478 ಮನೆಯೊಡತಿ ಬ್ಯಾಂಕ್ ಅಕೌಂಟ್ ಕೆವೈಸಿ, ಆಧಾರ್ ಲಿಂಕ್ ಆಗದ ಹಣ ಸಂದಾಯ ಮಾಡಲಾಗಿಲ್ಲ.
ನಿಮ್ಮ ಬ್ಯಾಂಕ್ ಖಾತೆ ಗೃಹಲಕ್ಷ್ಮಿ ಹಣ ಬಾರದೇ ಇರೋರು ಎರಡು ಸಾವಿರ ಹಣ ಜಮೆ ಆಗದೇ ಇರಲು ಕಾರಣವೇನು? ಡಿಬಿಡಿ ಸ್ಟೇಟಸ್ ಚೆಕ್ ಮಾಡೋದೇಗೆ? ಎಂಬ ಪ್ರಶ್ನೆಗೆ ಡಿಬಿಟಿ ಕರ್ನಾಟಕ ಆಪ್ ಮೂಲಕ ಡಿಬಿಡಿ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಸರ್ಕಾರ ಅವಕಾಶ ಮಾಡಿದೆ.
ನಿಮ್ಮ ಮೊಬೈಲ್ ಆಪ್ ನಲ್ಲಿ ಡಿಬಿಡಿ ಕರ್ನಾಟಕ ಆಪ್ ಡೌನ್ ಲೋಡ್ ಮಾಡಿ, ಆನಂತರ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ನಂಬರ್ ಕೊಟ್ರೆ ಒಟಿಪಿ ಬರುತ್ತೆ. ಆನಂತರ ಅನ್ನಭಾಗ್ಯ ಡಿಬಿಟಿ ಚೆಕ್ ಮಾಡಬೇಕಾದರೆ ಬಿಪಿಎಲ್ ಕಾರ್ಡ್ ಸಂಖ್ಯೆ ಹಾಕಿ ಪರಿಶೀಲಿಸಿ.
ಗೃಹಲಕ್ಷ್ಮಿ ಪರಿಶೀಲಿಸಲು ಅರ್ಜಿ ಸಂಖ್ಯೆ ಹಾಕಿದರೆ ಸ್ಟೇಟಸ್ ಸಿಗಲಿದೆ ಅನ್ನಭಾಗ್ಯ ಡಿಬಿಟಿ ಹಣ ಪರಿಶೀಲಿಸಲು ಈ ಆಪ್ ಬಳಕೆ ಆಗಲಿದೆ. ರಾಜ್ಯದಲ್ಲಿ ಇದುವರೆಗೆ 1.13 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳ ನೋಂದಣಿ ಆಗಿದೆ. ಇದರಲ್ಲಿ 44.52 ಲಕ್ಷ ಫಲಾನುಭವಿಗಳಿಗೆ ಎರಡು ಸಾವಿರ ಹಣ ಜಮೆ ಆಗಿದೆ.







