ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ ಮತ್ತೊಂದು ಗಾಜಿನ ಸೇತುವೆ| ಪ್ರವಾಸೋದ್ಯಮ ಇಲಾಖೆಯಿಂದ ಹೊಸ ಯೋಜನೆಗೆ ತಯಾರಿ
ಸಮಗ್ರ ನ್ಯೂಸ್: ಪಶ್ಚಿಮ ಘಟ್ಟದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರವಾಸೋದ್ಯಮ ಇಲಾಖೆಯು ಗಾಜಿನ ಸೇತುವೆ ನಿರ್ಮಾಣ ಮಾಡಲು ನಿರ್ಧರಿಸಿದೆ. ಮಳೆ ಬೀಳಲು ಆರಂಭಿಸಿದರೆ ಸಾಕು ಕಾಫಿನಾಡಿಗೆ ಪ್ರವಾಸ ಹೊರಡುವುದು ಸಹಜ. ಆದರೆ, ಹೀಗೆ ಹೊರಟವರು ಬಹುತೇಕರು ಮುಳ್ಳಯ್ಯನಗರಿಗೆ ಹೋಗುತ್ತಾರೆ. ಆದ್ದರಿಂದ ಪ್ರವಾಸೋದ್ಯಮ ಇಲಾಖೆ ಅಂತಹದ್ದೇ ಇನ್ನೊಂದು ಬ್ಯೂಟಿಫುಲ್ ಪ್ರವಾಸಿ ತಾಣವನ್ನು ಪರಿಚಯಿಸುವ ಕೆಲಸಕ್ಕೆ ಮುಂದಾಗಿದೆ. ಅದುವೇ ಪಶ್ಚಿಮ ಘಟ್ಟದ ಆರಂಭಿಕ ಪಾಯಿಂಟ್ ಎನಿಸಿಕೊಂಡಿರುವ “ರಾಣಿ ಝರಿ ವೀವ್ ಪಾಯಿಂಟ್”. ರಾಣಿ ಝರಿಯು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿಗೆ, […]










