July 2023

ಮಲೆನಾಡು, ಕರಾವಳಿಯಲ್ಲಿ ಅಬ್ಬರಿಸುತ್ತಿರುವ ವರುಣ| ಹಲವೆಡೆ ಹಾನಿ; ತುಂಬಿ ಹರಿಯುತ್ತಿರುವ ಜೀವನದಿಗಳು

ಸಮಗ್ರ ನ್ಯೂಸ್: ಮಲೆನಾಡು ಜಿಲ್ಲೆಗಳಾದ ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಅಬ್ಬರದ ಮಳೆ ಮುಂದುವರಿದಿದೆ. ಕೊಡಗಿನಲ್ಲಿ ಭಾರೀ ಗಾಳಿ ಸಹಿತ ಸುರಿದ ಮಳೆಗೆ ಹಲವು ಕಡೆ ಮರ, ವಿದ್ಯುತ್‌ ಕಂಬಗಳು ರಸ್ತೆಗೆ ಉರುಳಿ ಬಿದ್ದು ಹಲವು ಗ್ರಾಮಗಳಲ್ಲಿ ಕತ್ತಲು ಆವರಿಸಿದೆ. ಮಡಿಕೇರಿ ತಾಲೂಕಿನ ಬಾಡಗ ಶಾಲೆ ಮೇಲೆ ವಿದ್ಯುತ್‌ ಕಂಬ ಉರುಳಿಬಿದ್ದರೂ ಆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬಾರದ ಹಿನ್ನೆಲೆಯಲ್ಲಿ ಸಂಭಾವ್ಯ ಅಪಾಯ ತಪ್ಪಿದೆ. ಹಾರಂಗಿ ಜಲಾಶಯ ಭರ್ತಿಯಾಗಲು ಇನ್ನು ಕೇವಲ 6 ಅಡಿ ಅಷ್ಟೇ ಬಾಕಿ ಇದ್ದು, […]

ಮಲೆನಾಡು, ಕರಾವಳಿಯಲ್ಲಿ ಅಬ್ಬರಿಸುತ್ತಿರುವ ವರುಣ| ಹಲವೆಡೆ ಹಾನಿ; ತುಂಬಿ ಹರಿಯುತ್ತಿರುವ ಜೀವನದಿಗಳು Read More »

Health tips: ಅಮೃತ ಬಳ್ಳಿ ಎಷ್ಟು ಪ್ರಯೋಜನಕಾರಿ ಗೊತ್ತಾ? | ಹಾಗಾದ್ರೆ ಇದನ್ನು ಪೂರ್ತಿ ಓದಿ

ಆಯುರ್ವೇದ ವೈದ್ಯರು ಈ ಬಳ್ಳಿಯನ್ನು ಅಮೃತ, ಗುಡೂಚಿ ಮುಂತಾದ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಕಿರುಬೆರಳಿನ ಗಾತ್ರದ ಆರು ಅಂಗುಲದಷ್ಟು ಉದ್ದದ ಕಾಂಡವನ್ನು ನೆಡುವುದರಿಂದ ಈ ಬಳ್ಳಿಯನ್ನು ಬೆಳೆಸಬಹುದು ಮತ್ತು ಇದನ್ನು ಕುಂಡಗಳಲ್ಲೂ ನೆಡಬಹುದಾಗಿದೆ. ಇದರ ಬಳ್ಳಿಯನ್ನು ಕಾಂಪೌಂಡ್, ಮಾಳಿಗೆ, ಮರಗಳ ಮೇಲೆ ಹಬ್ಬಿಸಬಹುದು. ಎಲ್ಲಾ ಋತುಗಳಲ್ಲಿ ಬೆಳೆಸಬಹುದಾದ ಅಮೃತಬಳ್ಳಿಗೆ ಕಾಲ-ಕಾಲಕ್ಕೆ ನೀರು ನೈಸರ್ಗಿಕ ಗೊಬ್ಬರ ಅವಶ್ಯಕವಾಗಿದ್ದು, ಸಾಧಾರಣವಾಗಿ ಇದಕ್ಕೆ ರೋಗ ಬಾಧೆಯಿಲ್ಲ. ಈ ಎಲೆಗಳನ್ನು ಬಳಸುವಾಗ ಸಾಕಷ್ಟು ಬಳಿತಿರಬೇಕು. ರುಚಿಯಲ್ಲಿ ಕಹಿ ಮತ್ತು ಒಗರಾಗಿರುವ ಈ ಬಳ್ಳಿಯ

Health tips: ಅಮೃತ ಬಳ್ಳಿ ಎಷ್ಟು ಪ್ರಯೋಜನಕಾರಿ ಗೊತ್ತಾ? | ಹಾಗಾದ್ರೆ ಇದನ್ನು ಪೂರ್ತಿ ಓದಿ Read More »

ಕೊಡಗು: ರಸ್ತೆ ದಾಟುವ ವೇಳೆ ಬಸ್ಸನ್ನು ಅಟ್ಟಿಸಿಕೊಂಡು ಬಂದ ಕಾಡಾನೆ!

ಸಮಗ್ರ ನ್ಯೂಸ್: ಹಾಡುಹಗಲೇ ಕಾಡಾನೆಯೊಂದು ಕೆಎಸ್ಆರ್ಟಿಸಿ ಬಸ್ ಅನ್ನು ಅಡ್ಡಗಟ್ಟಿ ಅಟ್ಟಿಸಿಕೊಂಡು ಬಂದ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ದೆವರಪುರದಲ್ಲಿ ಜು.22 ರಂದು ನಡೆದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗ್ಗೆ ಕೆಎಸ್ಆರ್ಟಿಸಿ ಬಸ್ ಅನ್ನು ಕಾಡಾನೆ ಅಟ್ಟಿಸಿಕೊಂಡು ಬಂದ ದೃಶ್ಯವು ಪ್ರಯಾಣಿಕರೋರ್ವರ ಮೊಬೈಲ್​ನಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಕಂಡಂತೆ ಕಾಡಾನೆ ರಸ್ತೆ ದಾಟುತ್ತಿದ್ದರಿಂದ ಚಾಲಕ ಸಮಯ ಪ್ರಜ್ಞೆ ಮೆರೆದು ಬಸ್ ನಿಲ್ಲಿಸಿದ್ದಾನೆ. ಆದರೆ, ಈ ವೇಳೆ ಆನೆ ಬಸ್ ಬಳಿಗೆ ಓಡೋಡಿ ಬಂದಿದ್ದು ಇದರಿಂದ

ಕೊಡಗು: ರಸ್ತೆ ದಾಟುವ ವೇಳೆ ಬಸ್ಸನ್ನು ಅಟ್ಟಿಸಿಕೊಂಡು ಬಂದ ಕಾಡಾನೆ! Read More »

ಜು.23-29ರವರೆಗಿನ ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: 2023ರ ಜುಲೈ 23 ರಿಂದ ಜುಲೈ 29ರ ವರೆಗಿನ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯೋಣ ಬನ್ನಿ… ಮೇಷ: ಅನಪೇಕ್ಷಿತ ಒತ್ತಡವು ವಾರದ ಆರಂಭದಲ್ಲಿ ಇರಬಹುದು. ಕೆಲಸದ ಹೊರೆ ಕಡಿಮೆ ಇರುವುದು. ಆದರೆ ಶಾರೀರಿಕ ಬಳಲಿಕೆ ಅನುಭವಿಸುವಿರಿ. ವಾಹನದಿಂದ ಈ ವಾರ ಸಂತೋಷವು ಸಿಗಲಿದೆ. ನಿಶ್ಚಲವಾದ ಸಂಪತ್ತು ನಿಮ್ಮ ಕೈ ಸೇರಬಹುದು. ಹೊಸ ಮನೆ ನಿರ್ಮಾಣಕ್ಕೆ ವಿಘ್ನಗಳು ಬರುವುದು. ನೀವು ನಿಜವಾದ ಸಂತೋಷವನ್ನು ಪಡೆಯುತ್ತೀರಿ. ಆರ್ಥಿಕವಾಗಿ, ಈ ವಾರ ತುಂಬಾ

ಜು.23-29ರವರೆಗಿನ ದ್ವಾದಶ ರಾಶಿಗಳ ವಾರಭವಿಷ್ಯ Read More »

ಭಾರೀ ಮಳೆಗೆ ಉಕ್ಕಿ‌ ಹರಿಯುತ್ತಿರುವ ಕುಮಾರಧಾರಾ| ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನಘಟ್ಟ ಮುಳುಗಡೆ

ಸಮಗ್ರ ನ್ಯೂಸ್: ಸುಬ್ರಹ್ಮಣ್ಯ ಪರಿಸರದಲ್ಲಿ ಹಾಗೂ ಘಟ್ಟ ಪ್ರದೇಶದಲ್ಲಿ ಬಾರೀ ಮಳೆಯಾಗುತ್ತಿರುವುದರಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ಸ್ನಾನಘಟ್ಟ ಶನಿವಾರ ಮುಳುಗಡೆಗೊಂಡಿದೆ. ಶುಕ್ರವಾರ ರಾತ್ರಿಯಿಂದಲೇ ಬಾರೀ ಮಳೆಯಾಗುತ್ತಿದೆ. ಘಟ್ಟ ಪ್ರದೇಶದಲ್ಲೂ ಬಾರೀ ಮಳೆಯಾಗುತ್ತಿರುವುದರಿಂದ ಕುಮಾರಧಾರ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳಗೊಂಡಿದೆ. ಕುಮಾರಧಾರ ಸ್ನಾನ ಘಟ್ಟ ಹಾಗೂ ಕಿಂಡಿ ಅಣೆಕಟ್ಟು ಮುಳುಗಡೆಯಾಗಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಭಕ್ತಾಧಿಗಳಿಗೆ ನೀರಿಗಿಳಿಯದಂತೆ ಸೂಚನೆ ನೀಡಲಾಗಿದೆ. ನದಿ ದಡದಲ್ಲಿ ಸಿಬ್ಬಂದಿಗಳ ನಿಯೋಜಿಸಲಾಗಿದೆ. ಎಚ್ಚರಿಕಾ

ಭಾರೀ ಮಳೆಗೆ ಉಕ್ಕಿ‌ ಹರಿಯುತ್ತಿರುವ ಕುಮಾರಧಾರಾ| ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನಘಟ್ಟ ಮುಳುಗಡೆ Read More »

ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ| ಮರು ತನಿಖೆ ನಡೆಸಲು ಸಿಎಂ‌ಗೆ ಬೆಳ್ತಂಗಡಿ ಶಾಸಕ‌ ಹರೀಶ್ ಪೂಂಜಾ ಮನವಿ

ಸಮಗ್ರ ನ್ಯೂಸ್: ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ಧರ್ಮಸ್ಥಳದ ಸೌಜನ್ಯಾ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಸಿದ್ದರಾಮಯ್ಯ ಅವರಿಗೆ ಲಿಖಿತ ದೂರು ನೀಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸೌಜನ್ಯಾ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ. 2012ರ ಅಕ್ಟೋಬರ್ 9ರಂದು ಬೆಳ್ತಂಗಡಿ ತಾಲೂಕಿನ ಉಜಿರೆಯ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರಕ್ಕೀಡಾಗಿ ಕೊಲೆಯಾಗಿದ್ದು, ಅದರ ವಿಚಾರವಾಗಿ ಹಲವು ತನಿಖೆ ನಡೆದು ತಮ್ಮ ನೇತೃತ್ವದ ಸರಕಾರ ಈ ಪ್ರಕರಣವನ್ನು

ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ| ಮರು ತನಿಖೆ ನಡೆಸಲು ಸಿಎಂ‌ಗೆ ಬೆಳ್ತಂಗಡಿ ಶಾಸಕ‌ ಹರೀಶ್ ಪೂಂಜಾ ಮನವಿ Read More »

ವಿಟ್ಲ: ಪೆರುವಾಯಿ ಕೋಳಿ ಅಂಕಕ್ಕೆ ಧಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್|ಯುವಕನ ಮೇಲೆ ಕಿಡಿಗೇಡಿಗಳಿಂದ ಹಲ್ಲೆ: ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಯುವಕನೊಬ್ಬನಿಗೆ ಯುವಕರ ತಂಡವೊಂದು ಹಲ್ಲೆ ನಡೆಸಿದ ಘಟನೆ ವಿಟ್ಲದ ಕಾವೇರಿ ಬಾರ್‌ನಲ್ಲಿ ನಿನ್ನೆ ರಾತ್ರಿ ನಡೆದಿದೆ. ಪೆರುವಾಯಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ವರುಣ್ ರೈ ಅಂತರಗುತ್ತು ನೇತೃತ್ವದಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕಕ್ಕೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಧಾಳಿ ಮಾಡಿದ್ದು ಈ ವಿಚಾರವಾಗಿ ನಿನ್ನೆ ರಾತ್ರಿ ಬಾರ್‌ನಲ್ಲಿ ಯುವಕರ ನಡುವೆ ಮಾತಿನ ಚಕಾಮಕಿ ಬೆಳೆದಿದೆ. ಹಲ್ಲೆಗೊಳಗಾದ ಸುರೇಶ್ ಗಂಭೀರ ಗಾಯಗೊಂಡಿದ್ದು ಕೂಡಲೇ ವಿಟ್ಲ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ

ವಿಟ್ಲ: ಪೆರುವಾಯಿ ಕೋಳಿ ಅಂಕಕ್ಕೆ ಧಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್|ಯುವಕನ ಮೇಲೆ ಕಿಡಿಗೇಡಿಗಳಿಂದ ಹಲ್ಲೆ: ಆಸ್ಪತ್ರೆಗೆ ದಾಖಲು Read More »

ಸ್ಟೋರಿ ಆಫ್ ಸೌಜನ್ಯ ಸಿನಿಮಾ ನಿರ್ಮಾಣಕ್ಕೆ ಸೌಜನ್ಯ ಕುಟುಂಬದ ವಿರೋಧ| ನಮ್ಮ ಹೋರಾಟ ಸಿನಿಮಾ ಮಾಡುವುದಕ್ಕೆ ಅಲ್ಲ ಎಂದ ವಿಠಲ ಗೌಡ

ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ವಿದ್ಯಾರ್ಥಿನಿ ಸೌಜನ್ಯನ ಕಥೆಯನ್ನು ಸಿನಿಮಾ ಮಾಡಲು ಸಿನಿಮಾ ತಂಡವೊಂದು ನಿರ್ಧರಿಸಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೆಸರು ನೋಂದಾಯಿಸಿದ ಬೆನ್ನಲ್ಲೇ ಸಿನಿಮಾವನ್ನು ನಿರ್ಮಾಣಕ್ಕೆ ಸೌಜನ್ಯ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸೌಜನ್ಯಳ ಮಾವ ವಿಠಲ ಗೌಡ, ನಮ್ಮ ಒಪ್ಪಿಗೆ ಪಡೆಯದೇ ಅವರು ಹೇಗೆ ಸಿನಿಮಾ ಮಾಡುತ್ತಾರೆ? ನಮ್ಮನ್ನು ದಾರಿ ತಪ್ಪಿಸುವುದಕ್ಕೆ ಹೀಗೆ ಮಾಡುತ್ತಿದ್ದಾರೆಯೇ? ನಮ್ಮ ಉದ್ದೇಶ ಸಿನಿಮಾ ಮಾಡುವುದು ಅಲ್ಲ. ನಮಗೆ ನ್ಯಾಯ ಸಿಗಬೇಕು ಅಷ್ಟೇ ಎಂದಿದ್ದಾರೆ.

ಸ್ಟೋರಿ ಆಫ್ ಸೌಜನ್ಯ ಸಿನಿಮಾ ನಿರ್ಮಾಣಕ್ಕೆ ಸೌಜನ್ಯ ಕುಟುಂಬದ ವಿರೋಧ| ನಮ್ಮ ಹೋರಾಟ ಸಿನಿಮಾ ಮಾಡುವುದಕ್ಕೆ ಅಲ್ಲ ಎಂದ ವಿಠಲ ಗೌಡ Read More »

ಬೆಸ್ಟ್ ಬೀದಿ ಬದಿ ತಿನಿಸುಗಳ ವರದಿ ಪ್ರಕಟಿಸಿದ ಟೇಸ್ಟ್ ಅಟ್ಲಾಸ್ ಸಂಸ್ಥೆ| ನಮ್ಮ “ಮೈಸೂರು ಪಾಕ್” ಗೆ ಎಷ್ಟನೇ ಸ್ಥಾನ ಗೊತ್ತೇ?

ಸಮಗ್ರ ನ್ಯೂಸ್: ಟೇಸ್ಟ್‌ ಅಟ್ಲಾಸ್‌ ಕಳೆದ ಕೆಲವು ದಿನಗಳ ಹಿಂದೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಂತೆ ಕರ್ನಾಟಕದ ಹೆಮ್ಮೆ ಮೈಸೂರು ಪಾಕ್‌ ವಿಶ್ವ ಅಗ್ರ ಸಿಹಿ ತಿನಿಸುಗಳ ಪಟ್ಟಿಯಲ್ಲಿ 14ನೇ ಸ್ಥಾನ ಪಡೆದಿದೆ. ಕುಲ್ಫಿ ಹಾಗೂ ಕುಲ್ಫಿ ಪಲೋಡಾ ಕ್ರಮವಾಗಿ 18 ಹಾಗೂ 32ನೇ ಸ್ಥಾನಗಳನ್ನು ಪಡೆದುಕೊಂಡಿವೆ. ವಿಶ್ವ ಅಗ್ರ ಸಿಹಿ ತಿನಿಸುಗಳ ಪೈಕಿ ಮೊದಲ ಐದು ಸ್ಥಾನದಲ್ಲಿ ಪೋರ್ಚುಗಲ್‌ನ ಪಾಸ್ತೆಲ್‌ ಡಿ ನಾಟಾ, ಇಂಡೋನೇಷ್ಯಾದ ಸೆರಾಬಿ, ಟರ್ಕಿಯ ಡೊಂಡುರ್ಮಾ, ದಕ್ಷಿಣ ಕೊರಿಯಾದ ಹೊಟೆಕ್‌, ಥಾಯ್ಲೆಂಡ್‌ನ ಪಾ

ಬೆಸ್ಟ್ ಬೀದಿ ಬದಿ ತಿನಿಸುಗಳ ವರದಿ ಪ್ರಕಟಿಸಿದ ಟೇಸ್ಟ್ ಅಟ್ಲಾಸ್ ಸಂಸ್ಥೆ| ನಮ್ಮ “ಮೈಸೂರು ಪಾಕ್” ಗೆ ಎಷ್ಟನೇ ಸ್ಥಾನ ಗೊತ್ತೇ? Read More »

Moral policing| ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ| ಹಿಂದೂ ಯುವತಿಯರ ಜೊತೆ ಬೀಚ್ ಗೆ ತೆರಳಿದ್ದ ವೈದ್ಯ ವಿದ್ಯಾರ್ಥಿ ಮೇಲೆ ಹಲ್ಲೆ

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ ಪ್ರಕರಣ ವರದಿಯಾಗಿದೆ. ಹಿಂದೂ ಯುವತಿಯರ ಜತೆಗೆ ಬೀಚ್‌ಗೆ ತೆರಳಿದ ಮಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯ ಮೇಲೆ ದುಷ್ಕರ್ಮಿಗಳ ತಂಡದಿಂದ ಹಲ್ಲೆ ನಡೆದಿದೆ. ಮಂಗಳೂರಿನ ಪ್ರತಿಷ್ಠಿತ ಎಜೆ ವೈದ್ಯಕೀಯ ಕಾಲೇಜಿನ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಕೋರ್ಸ್‌ನ ವಿದ್ಯಾರ್ಥಿಗಳು ಪಣಂಬೂರು ಬೀಚ್‌ಗೆ ವಿಹಾರಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ತಂಡವೊಂದು ಇವರನ್ನು ಹಿಂಬಾಲಿಸಿ ಬಂದಿದ್ದು, ಹಲ್ಲೆ ನಡೆಸಿದೆ. ಬೀಚ್‌ಗೆ 6 ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ವಿಹಾರಕ್ಕೆ ತೆರಳಿದ್ದರು. ತಂಡದಲ್ಲಿ 4 ಮಂದಿ ಹಿಂದೂ

Moral policing| ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ| ಹಿಂದೂ ಯುವತಿಯರ ಜೊತೆ ಬೀಚ್ ಗೆ ತೆರಳಿದ್ದ ವೈದ್ಯ ವಿದ್ಯಾರ್ಥಿ ಮೇಲೆ ಹಲ್ಲೆ Read More »