July 2023

ರಾಜ್ಯಾದ್ಯಂತ ಭಾರೀ ಮಳೆ| ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ| ಇನ್ನೆರಡು ದಿನವೂ ಮುಸಲಧಾರೆ

ಸಮಗ್ರ ನ್ಯೂಸ್: ಕಳೆದ ಎರಡು ವಾರದಿಂದ ರಾಜ್ಯದ ಹಲೆವೆಡೆ ಸತತವಾಗಿ ಮಳೆ ಆಗುತ್ತಿರುವುದುರಿಂದ ಜೀವನದಿಗಳಾದ ಕಾವೇರಿ, ಭೀಮಾ ಸೇರಿ ಪ್ರಮುಖ ನದಿಗಳ ನೀರಿನಮಟ್ಟದಲ್ಲಿ ದಿಢೀರ್ ಏರಿಕೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ, ಮಡಿಕೇರಿ, ಸಕಲೇಶಪುರ, ಚಿಕ್ಕಮಗಳೂರು, ಬೆಳಗಾವಿ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇನ್ನು ಕೆಲವು ದಿನ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ 11 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಪ್ರವಾಹ ಭೀತಿ ಇರುವ ಜಿಲ್ಲೆಗಳಲ್ಲಿ ಶಾಲಾ – […]

ರಾಜ್ಯಾದ್ಯಂತ ಭಾರೀ ಮಳೆ| ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ| ಇನ್ನೆರಡು ದಿನವೂ ಮುಸಲಧಾರೆ Read More »

ಚಿಕ್ಕಮಗಳೂರು ಪ್ರವಾಸಿಗರಿಗೆ ಮಹತ್ವದ ಸೂಚನೆ

ಸಮಗ್ರ ನ್ಯೂಸ್: ನೀವೇನಾದ್ರೂ ಚಿಕ್ಕಮಗಳೂರು ಪ್ರವಾಸ ಹೋಗುವ ನಿರ್ಧಾರ ಮಾಡಿದ್ರೆ ಅದನ್ನು ಮುಂದೂಡಿ. ಪ್ರವಾಸಿಗರಿಗೆ ಚಿಕ್ಕಮಗಳೂರು ಪೊಲೀಸ್ ವರೀಷ್ಠಾಧಿಕಾರಿ ಉಮಾಪ್ರಶಾಂತ್ ಮಹತ್ವದ ಸೂಚನೆ ಹೊರಡಿಸಿದ್ದು, ತಮ್ಮ ಪ್ರವಾಸವನ್ನು ಮುಂದೂಡುವಂತೆ ತಿಳಿಸಿದ್ದಾರೆ. ಕಾಫಿನಾಡು ಚಿಕ್ಕಮಗಳೂರಿನ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಅಲ್ಲಲ್ಲಿ ಗುಡ್ಡ ಕುಸಿತ, ಭೂಕುಸಿತ ಮುಂತಾದ ಪ್ರಾಕೃತಿಕ ವಿಕೋಪ ಸಂಭವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರವಾಸ ಬರದಂತೆ ಅವರು ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ.

ಚಿಕ್ಕಮಗಳೂರು ಪ್ರವಾಸಿಗರಿಗೆ ಮಹತ್ವದ ಸೂಚನೆ Read More »

ರಾಜ್ಯದಲ್ಲಿ ಅಬ್ಬರಿಸುತ್ತಿರುವ ಮುಂಗಾರು| ಹಲವು ಜಿಲ್ಲೆಗಳಲ್ಲಿ ಜು.25ರಂದು ಶಾಲಾ ಕಾಲೇಜುಗಳಿಗೆ ರಜೆ| ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ವಾರ್ತೆ: ದ.ಒಳನಾಡು, ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರೆದ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ (ಜು.25) ಶಾಲೆಗಳಿಗೆ ರಜೆ ನೀಡಲಾಗಿದೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಭಾರಿ ಮಳೆ ಹಿನ್ನೆಲೆ ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ನಾಳೆಯೂ ರಜೆ ಘೋಷಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆದೇಶ ಹೊರಡಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ

ರಾಜ್ಯದಲ್ಲಿ ಅಬ್ಬರಿಸುತ್ತಿರುವ ಮುಂಗಾರು| ಹಲವು ಜಿಲ್ಲೆಗಳಲ್ಲಿ ಜು.25ರಂದು ಶಾಲಾ ಕಾಲೇಜುಗಳಿಗೆ ರಜೆ| ಇಲ್ಲಿದೆ ಫುಲ್ ಡೀಟೈಲ್ಸ್ Read More »

ಕೊಡಗು: ಕಾಲು ಸೇತುವೆ ನೀರಿನಲ್ಲಿ ಮುಳುಗಡೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಂದ ಗ್ರಾಮದ ಬಸವೇಶ್ವರ ಕಾಲೋನಿಗೆ ಸಂಪರ್ಕ ಕಲ್ಪಿಸುವ ಕಾಲು ಸೇತುವೆಯು ಮಳೆಯ ಅಬ್ಬರಕ್ಕೆ ಮುಳುಗಡೆಯಾಗಿದೆ. ಗೋಣಿಕೊಪ್ಪಲು ಪೊಲೀಸ್ ಠಾಣಾಧಿಕಾರಿ ದೀಕ್ಷಿತ್ ಮತ್ತು ಸಿಬ್ಬಂದಿಗಳು, ಸ್ಥಳಕ್ಕೆ ಭೇಟಿ ನೀಡಿ ಎರಡು ಕಡೆ ಬ್ಯಾರಿಕೇಡ್ ಅಳವಡಿಸಿ, ನದಿಯ ಮತ್ತೊಂದು ಬದಿಯಲ್ಲಿರುವ ಕಾಲೋನಿಯ ನಿವಾಸಿಗಳಿಗೆ ಧೈರ್ಯ ತುಂಬಿ ಅವರಿಗೆ ಬೇಕಾದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಭರವಸೆ ನೀಡಿ ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊನ್ನಂಪೇಟೆ ತಾಲೂಕು ತಹಸಿಲ್ದಾರ್ ಎನ್.ಎಸ್.ಪ್ರಶಾಂತ್ ಹಾಗೂ

ಕೊಡಗು: ಕಾಲು ಸೇತುವೆ ನೀರಿನಲ್ಲಿ ಮುಳುಗಡೆ Read More »

ಕರ್ತೋಜಿ ಸಮೀಪ ಭೂ-ಕುಸಿತ| ಮಡಿಕೇರಿ-ಮಂಗಳೂರು ಹೆದ್ದಾರಿ ಸುಗಮ ಸಂಚಾರಕ್ಕೆ ಅನುವು

ಸಮಗ್ರ ನ್ಯೂಸ್: ಮಡಿಕೇರಿ -ಮಂಗಳೂರು ಹೆದ್ದಾರಿ ಮದೆ ಸಮೀಪದ ಕರತೋಜಿ ಬಳಿ ಹೆಚ್ಚಿನ ಮಳೆಯಿಂದಾಗಿ ಭೂ ಕುಸಿತದಿಂದ ಬೃಹತ್ ಮರ ರಸ್ತೆಗೆ ಬಿದ್ದ ಪರಿಣಾಮ ಬಂದ್ ಆಗಿದ್ದ ರಸ್ತೆಯನ್ನು ರಾತ್ರಿಯೇ ತೆರವುಗೊಳಿಸಿ ಸುಗಮ ಅನುವು ಮಾಡಿ ಕೊಡಲಾಯಿತು. ಈ ಸಂಧರ್ಭದಲ್ಲಿ ಉಪ ವಿಭಾಗಾಧಿಕಾರಿ ಡಾ.ಯತೀಶ್‌ ಉಲ್ಲಾಳ್, ತಹಶಿಲ್ದಾರರಾದ ಕಿರಣ್ ಗೌರಯ್ಯ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಭಿಯಂತರರು, ಅರಣ್ಯ ಇಲಾಖೆಯ ಸಿಬ್ಬಂದಿಯವರು, ಸ್ಥಳೀಯರ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಿ ಸುಗಮ ಸಾರಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಕರ್ತೋಜಿ ಸಮೀಪ ಭೂ-ಕುಸಿತ| ಮಡಿಕೇರಿ-ಮಂಗಳೂರು ಹೆದ್ದಾರಿ ಸುಗಮ ಸಂಚಾರಕ್ಕೆ ಅನುವು Read More »

ಸುಳ್ಯ: ಕೋಲ್ಚಾರಿನಲ್ಲಿ ಅಪಾಯಕಾರಿ ಮರಗಳ ತೆರವುಗೊಳಿಸಲು ತಹಶಿಲ್ದಾರ್ ಗೆ ಮನವಿ

ಸಮಗ್ರ ನ್ಯೂಸ್: ಸುಳ್ಯದಿಂದ ಕೋಲ್ಚಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿ ಇರುವ ಸುಮಾರು 40 ರಷ್ಟು ಅಪಾಯಕಾರಿ ಮರಗಳನ್ನು ತೆರವುಗೊಳಿಸಿ ಪ್ರಾಕೃತಿಕ ವಿಕೋಪದಿಂದ ಹಾನಿ ಸಂಭವಿಸದಂತೆ ಮುಂಜಾಗ್ರತಾ ಕಾರ್ಯವಾಗಬೇಕೆಂದು ಸುಳ್ಯ ತಹಶಿಲ್ದಾರವರಿಗೆ ಮನವಿ ಸಲ್ಲಿಸಲಾಯಿತು. ಈಗಾಗಲೇ ಸುರಿಯುತ್ತಿರುವ ವಿಪರೀತ ಮಳೆಗೆ ರಸ್ತೆಯ ಬದಿಯ ಮರ ಹಾಗೂ ಮಣ್ಣು ಕುಸಿದು ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಸಾಕಷ್ಟು ಮರಗಳು ರಸ್ತೆ ಮೇಲೆ ವಾಲಿಕೊಂಡಿದ್ದು ಬೀಳುವ ಸಾಧ್ಯತೆ ಹೆಚ್ಚಿದ್ದು ಹಾನಿ ಸಂಭವಿಸುವ ಮೊದಲು ಮುನ್ನೆಚ್ಚರಿಕೆ ವಹಿಸಿ ಸಂಬಂಧಪಟ್ಟ ಇಲಾಖೆಗೆ ಮರಗಳ ತೆರವಿಗೆ ಸೂಚಿಸಬೇಕಾಗಿ

ಸುಳ್ಯ: ಕೋಲ್ಚಾರಿನಲ್ಲಿ ಅಪಾಯಕಾರಿ ಮರಗಳ ತೆರವುಗೊಳಿಸಲು ತಹಶಿಲ್ದಾರ್ ಗೆ ಮನವಿ Read More »

ಭಾರೀ ಮಳೆ ಹಿನ್ನಲೆ| ನಾಳೆ(ಜು.25) ನಡೆಯಬೇಕಿದ್ದ ಮಂಗಳೂರು ವಿ.ವಿ ಪದವಿ ಪರೀಕ್ಷೆ ಮುಂದೂಡಿಕೆ

ಸಮಗ್ರ ನ್ಯೂಸ್: ಕೊಡಗು, ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ, ನಾಳೆ(ಜು.25) ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಕುರಿತು ವಿ.ವಿ ಪರೀಕ್ಷಾಂಗ ಪ್ರಕಟಣೆ ಹೊರಡಿಸಿದ್ದು, ಮುಂದೂಡಿದ ಪರೀಕ್ಷೆಗಳ ಪರಿಷ್ಕೃತ ದಿನಾಂಕವನ್ನು ಮರುನಿಗದಿಪಡಿಸಿ ಎಲ್ಲಾ ಸಂಯೋಜಿತ ಕಾಲೇಜುಗಳಿಗೆ ಶೀಘ್ರದಲ್ಲಿ ತಿಳಿಸಲಾಗುವುದು. ಈ ಹಿಂದೆ ಪ್ರಕಟಿಸಿದ ಉಳಿದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಈ ಮೂಲಕ ಪರೀಕ್ಷಾಂಗ ಕುಲಸಚಿವರು ತಿಳಿಸಿದ್ದಾರೆ.

ಭಾರೀ ಮಳೆ ಹಿನ್ನಲೆ| ನಾಳೆ(ಜು.25) ನಡೆಯಬೇಕಿದ್ದ ಮಂಗಳೂರು ವಿ.ವಿ ಪದವಿ ಪರೀಕ್ಷೆ ಮುಂದೂಡಿಕೆ Read More »

ಮದೆನಾಡಿನಲ್ಲಿ ಭೂ ಕುಸಿತ| ಮಾಣಿ – ಮೈಸೂರು ರಾ.ಹೆದ್ದಾರಿ ಸಂಚಾರ ಸಂಪೂರ್ಣ ಬಂದ್

ಸಮಗ್ರ ನ್ಯೂಸ್: ಮಾಣಿ – ಮೈಸೂರು ರಾ.ಹೆದ್ದಾರಿಯ ಮದೆನಾಡು ಸಮೀಪ ಕರ್ತೊಜಿಯಲ್ಲಿ ಮರಗಳ ಸಹಿತ ಭೂ ಕುಸಿತ ಉಂಟಾದ ಪರಿಣಾಮ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದರಿಂದಾಗಿ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಸೋಮವಾರ ಸಂಜೆ ವೇಳೆಗೆ ದೊಡ್ಡ ಮರವೊಂದು ರಸ್ತೆಗೆ ಮಣ್ಣು ಕುಸಿದು ಬಿದ್ದಿದೆ. ಇದೀಗ ರಸ್ತೆಯ ಒಂದು ಬದಿಯ ಮಣ್ಣನ್ನು ತೆರವುಗೊಳಿಸಲು ಅಧಿಕಾರಿಗಳು ಹರಸಾಹಸ ಮಾಡುತ್ತಿದ್ದಾರೆ. ಜೆಸಿಬಿ -ಹಿಟಾಚಿ ಬಳಸಿ ಮಣ್ಣು ತೆರವಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಂಪಾಜೆಯ ಗಡಿಕಲ್ಲು ತನಕ ವಾಹನಗಳು ಸರತಿ

ಮದೆನಾಡಿನಲ್ಲಿ ಭೂ ಕುಸಿತ| ಮಾಣಿ – ಮೈಸೂರು ರಾ.ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ Read More »

ಸುಳ್ಯದ ಕುಂಕುಂ ಫ್ಯಾಷನ್ ವಸ್ತ್ರ ಮಳಿಗೆಯಲ್ಲಿ ಮಾನ್ಸೂನ್ ಸ್ಪೆಷಲ್ ಆಫರ್| ಇನ್ನು ಕೆಲವೇ ದಿನಗಳು ಮಾತ್ರ

ಸಮಗ್ರ ನ್ಯೂಸ್: ಸುಳ್ಯದ ಹೆಸರಾಂತ ವಸ್ತ್ರ ಮಳಿಗೆ ಸುಳ್ಯದ ಕುಂಕುಂ ಫ್ಯಾಷನ್ ವಸ್ತ್ರ ಮಳಿಗೆಯಲ್ಲಿ ಮಾನ್ಸೂನ್ ವಿಶೇಷ ಆಫರ್ ಆಕರ್ಷಕವಾಗಿ ನಡೆಯುತ್ತಿದ್ದು, ಈ ತಿಂಗಳ ಕೊನೆಯವರೆಗೆ ನಡೆಯಲಿದೆ. ಉತ್ತಮ ವಸ್ತ್ರಗಳ ಅಮೋಘ ಸಂಗ್ರಹವೇ ಇಲ್ಲಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು. ಮದುವೆ ಹಾಗೂ ಪೂಜಾ ಕಾರ್ಯಕ್ರಮಗಳ ವಸ್ತ್ರಗಳ ಬೃಹತ್ ಸಂಗ್ರಹವೇ ಲಭ್ಯವಿದೆ. ಸಾರಿ ರೂ 75ರಿಂದ ಆರಂಭ, ನೈಟಿ ರೂ.130, ಲೆಗ್ಗಿನ್ಸ್ ರೂ.80, ಪ್ಲಾಝ ಪ್ಯಾಂಟ್ ರೂ.80, ಲೇಡಿಸ್ ಟಾಪ್ ರೂ.120, ರೆಡಿಮೇಡ್ ಬ್ಲೌಸ್ ರೂ.100, ದುಪ್ಪಟ

ಸುಳ್ಯದ ಕುಂಕುಂ ಫ್ಯಾಷನ್ ವಸ್ತ್ರ ಮಳಿಗೆಯಲ್ಲಿ ಮಾನ್ಸೂನ್ ಸ್ಪೆಷಲ್ ಆಫರ್| ಇನ್ನು ಕೆಲವೇ ದಿನಗಳು ಮಾತ್ರ Read More »

ಭಾರೀ ಮಳೆ ಹಿನ್ನಲೆ| ದ.ಕ ಜಿಲ್ಲೆಯಾದ್ಯಂತ ಶಾಲೆ, ಪಿಯು ಕಾಲೇಜುಗಳಿಗೆ ಜು.25ರಂದು ರಜೆ

ಸಮಗ್ರ ನ್ಯೂಸ್: ದ.ಕ. ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರಕಾರಿ, ಖಾಸಗಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ, ಕಾಲೇಜುಗಳಿಗೆ ಜು.25ರಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಘೋಷಿಸಿದ್ದಾರೆ.

ಭಾರೀ ಮಳೆ ಹಿನ್ನಲೆ| ದ.ಕ ಜಿಲ್ಲೆಯಾದ್ಯಂತ ಶಾಲೆ, ಪಿಯು ಕಾಲೇಜುಗಳಿಗೆ ಜು.25ರಂದು ರಜೆ Read More »