July 2023

ಭಾರೀ ಮಳೆ ಹಿನ್ನೆಲೆ| ನಾಳೆ (ಜು.26) ಎಲ್ಲಾ ಶಾಲೆ, ಪ.ಪೂ ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ರೆಡ್‌ ಅಲರ್ಟ್‌ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆ, ಪ.ಪೂ ಕಾಲೇಜುಗಳಿಗೆ ಜು.26ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಧಾರಾಕಾರ ಮಳೆಯಿಂದ ಸೋಮವಾರ ಮತ್ತು ಮಂಗಳವಾರ (ಜು. 24 ಮತ್ತು 25ರಂದು) ರಜೆ ಘೋಷಿಸಲಾಗಿತ್ತು. ಇದೀಗ ಕರಾವಳಿಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬುಧವಾರ ಮೂರನೇ ದಿನವೂ ರಜೆ ನೀಡಿದ್ದಾರೆ.

ಭಾರೀ ಮಳೆ ಹಿನ್ನೆಲೆ| ನಾಳೆ (ಜು.26) ಎಲ್ಲಾ ಶಾಲೆ, ಪ.ಪೂ ಕಾಲೇಜುಗಳಿಗೆ ರಜೆ ಘೋಷಣೆ Read More »

ಜುಲೈ 31ಕ್ಕೆ ಬೆಂಗಳೂರಿನಲ್ಲಿ NIANP ಉದ್ಯೋಗ ಸಂದರ್ಶನ|ಉತ್ತಮ ಅವಕಾಶ ಆಸಕ್ತರು ಪಾಲ್ಗೊಳ್ಳಿ

ಸಮಗ್ರ ನ್ಯೂಸ್: ಇದೇ ಜುಲೈ 31, 2023ರಂದು NIANP Recruitment ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯ ವಿಜ್ಞಾನ ಸಂಸ್ಥೆ(ICAR- National Institute of Animal Nutrition and Physiology)ಯಲ್ಲಿ 2 ಫೀಲ್ಡ್​ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಈ ಕೂಡಲೇ ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಿ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಹುದ್ದೆ ಫೀಲ್ಡ್​ ಅಸಿಸ್ಟೆಂಟ್ಒಟ್ಟು ಹುದ್ದೆ

ಜುಲೈ 31ಕ್ಕೆ ಬೆಂಗಳೂರಿನಲ್ಲಿ NIANP ಉದ್ಯೋಗ ಸಂದರ್ಶನ|ಉತ್ತಮ ಅವಕಾಶ ಆಸಕ್ತರು ಪಾಲ್ಗೊಳ್ಳಿ Read More »

ಉಡುಪಿ: ಶೌಚಾಲಯದಲ್ಲಿ ಕ್ಯಾಮರಾ ಇಟ್ಟು ವಿಡಿಯೋ ಚಿತ್ರೀಕರಣ ಮಾಡಲಾಗಿತ್ತಾ? ಎಸ್ಪಿ ಅಕ್ಷಯ್ ಹಾಕೆ ಹೇಳಿದ್ದೇನು?

ಸಮಗ್ರ ನ್ಯೂಸ್: ಕೆಲ ದಿನಗಳ ಹಿಂದೆ ಇಲ್ಲಿನ ಖಾಸಗಿ ಕಾಲೇಜೊಂದರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟು ವಿಡಿಯೋ ಚಿತ್ರೀಕರಣ ಮಾಡಿದ ಘಟನೆಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಿಗೆ ಉಡುಪಿ ಎಸ್ ಪಿ ಅಕ್ಷಯ್ ಹಾಕೆ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕೂಡಾ ನಮ್ಮ ಗಮನಕ್ಕೆ ಬಂದಿಲ್ಲ. ಹೀಗಾಗಿ ಸಾರ್ವಜನಿಕರು ಊಹಾಪೋಹದ ಮಾಹಿತಿಗಳನ್ನು ನಂಬಬಾರದು ಎಂದಿದ್ದಾರೆ. ಎಸ್ ಪಿ ಹೇಳಿದ್ದೇನು?: ಘಟನೆಗೆ ಸಂಬಂಧಪಟ್ಟಂತೆ ಹಲವಾರು ವಿಡಿಯೋಗಳನ್ನು ಮಾಡಿ ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂದು ಸುದ್ದಿಯಾಗುತ್ತಿದೆ. ಆದರೆ ಇಲ್ಲಿಯ

ಉಡುಪಿ: ಶೌಚಾಲಯದಲ್ಲಿ ಕ್ಯಾಮರಾ ಇಟ್ಟು ವಿಡಿಯೋ ಚಿತ್ರೀಕರಣ ಮಾಡಲಾಗಿತ್ತಾ? ಎಸ್ಪಿ ಅಕ್ಷಯ್ ಹಾಕೆ ಹೇಳಿದ್ದೇನು? Read More »

ಸುಳ್ಯ ತಾ.ಪಂ. ಇಓ ಭವಾನಿ ಶಂಕರ್ ವರ್ಗಾವಣೆ| ನೂತನವಾಗಿ ರಾಜಣ್ಣ ಕರ್ತವ್ಯಕ್ಕೆ

ಸಮಗ್ರ ನ್ಯೂಸ್: ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭವಾನಿಶಂಕರ್ ಎನ್ ವರ್ಗಾವಣೆ. ಸುಳ್ಯಕ್ಕೆ ನೂತನವಾಗಿ ಬಂಟ್ವಾಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣರವರನ್ನು ನೇಮಕಗೊಳಿಸಲು ರಾಜ್ಯ ಸರ್ಕಾರ ಆದೇಶ.

ಸುಳ್ಯ ತಾ.ಪಂ. ಇಓ ಭವಾನಿ ಶಂಕರ್ ವರ್ಗಾವಣೆ| ನೂತನವಾಗಿ ರಾಜಣ್ಣ ಕರ್ತವ್ಯಕ್ಕೆ Read More »

ಕಬಕ: ಕಾರು-ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ| ನಾಲ್ವರು ಗಂಭೀರ

ಸಮಗ್ರ ನ್ಯೂಸ್: ಮಾಣಿ- ಮೈಸೂರು ಹೆದ್ದಾರಿಯ ಮಿತ್ತೂರು ಸಮೀಪದ ಪರ್ಲೋಟ್ಟು ಎಂಬಲ್ಲಿ ಕಾರು ಮತ್ತು ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ ಜು.25 ರಂದು ಸಂಭವಿಸಿದೆ. ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಮುಂಬೈ ಮೂಲದ ಪ್ರಯಾಣಿಕರು, ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದಾಗ ಪುತ್ತೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸಹಿತ ನಾಲ್ವರು ಗಾಯಗೊಂಡಿದ್ದು, ಪುತ್ತೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಘಟನಾ ಸ್ಥಳಕ್ಕೆ

ಕಬಕ: ಕಾರು-ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ| ನಾಲ್ವರು ಗಂಭೀರ Read More »

ಹುಣಸೂರು:ವಾಹನ ಡಿಕ್ಕಿ ಪಾದಾಚಾರಿ ಸಾವು

ಸಮಗ್ರ ನ್ಯೂಸ್: ವಾಹನ ಡಿಕ್ಕಿ ಹೊಡೆದ ಪರಿಣಾಮ ತೀವ್ರಗಾಯಗೊಂಡಿದ್ದ ವೃದ್ದರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಣಸೂರು ನಗರದ ನರಸಿಂಹಸ್ವಾಮಿ ತಿಟ್ಟಿನ ಬಳಿ ನಡೆದಿದೆ. ಎಚ್.ಡಿ. ಕೋಟೆ ಪಟ್ಟಣದ ನಿವಾಸಿ ಪುಟ್ಟಸ್ವಾಮಿ (65) ಮೃತ ವ್ಯಕ್ತಿ. ವೃದ್ದ ಪುಟ್ಟಸ್ವಾಮಿಯವರು ಶನಿವಾರ ಸಂಜೆ ಎಚ್.ಡಿ. ಕೋಟೆಯಿಂದ ಸಾರಿಗೆ ಸಂಸ್ಥೆ ಬಸ್ ನಲ್ಲಿ ಹುಣಸೂರಿಗೆ ಬಂದು ನಗರದ ನರಸಿಂಹಸ್ವಾಮಿ ತಿಟ್ಟು ಬಡಾವಣೆಯಲ್ಲಿರುವ ಅವರ ತಮ್ಮನ ಮಗಳ ಮನೆಗೆ ನಡೆದು ಹೋಗುತ್ತಿದ್ದರು. ವೇಳೆ ಹೆದ್ದಾರಿಯಲ್ಲಿ ಬಂದ ಅಪರಿಚಿತ ವಾಹನ ಡಿಕ್ಕಿಕೊಡೆದ ಪರಿಣಾಮ ತಲೆ,

ಹುಣಸೂರು:ವಾಹನ ಡಿಕ್ಕಿ ಪಾದಾಚಾರಿ ಸಾವು Read More »

ಬೆಂಗಳೂರಿನಲ್ಲಿ ಕಾಣಿಸಿಕೊಂಡ ಸ್ವರ್ಗದ ಬಾಗಿಲು!!

ಸಮಗ್ರ ನ್ಯೂಸ್: ಜಿಟಿ ಜಿಟಿ ಮಳೆ, ಮೋಡ ಕವಿದ ವಾತಾವರಣವಿದ್ದು, ನಿನ್ನೆ ರಾತ್ರಿ ಆಕಾಶದಲ್ಲಿ ಆಕರ್ಷಣೆ ನೆರಳು ಕಾಣಿಸಿಕೊಂಡಿದೆ. ಆಕಾಶದಲ್ಲಿ ಕಾಣಿಸಿಕೊಂಡ ಆಕರ್ಷಣೆ ನೆರಳಿಗೆ ಸ್ವಗದ ಬಾಗಿಲಿನಂತೆ ಕಾಣಿಸುತ್ತಿದೆ ಎಂದು ವಿಡಿಯೋವನ್ನು ಟ್ವಿಟರ್​ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಆನೇಕರು ಇದು ಸ್ವರ್ಗದ ಬಾಗಿಲು ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಅಚ್ಚರಿ ಪಟ್ಟಿದ್ದಾರೆ. “ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ ಬಳಿ ನಿನ್ನೆ ರಾತ್ರಿ ಆಕಾಶದಲ್ಲಿ ನಿಗೂಢ ನೆರಳು ಕಾಣಿಸಿಕೊಂಡಿದೆ. ಬೇರೆ ಯಾರಾದರೂ ನೋಡಿದ್ದೀರಾ? ಇದು ಏನಾಗಿರಬಹುದು? ಕಟ್ಟಡದ ನೆರಳಾ? ಹಾಗಿದ್ದಲ್ಲಿ,

ಬೆಂಗಳೂರಿನಲ್ಲಿ ಕಾಣಿಸಿಕೊಂಡ ಸ್ವರ್ಗದ ಬಾಗಿಲು!! Read More »

ಹೈನುಗಾರರೇ ಎಚ್ಚರ; ರಾಸುಗಳಲ್ಲಿ ಕಾಣಿಸಿಕೊಂಡಿದೆ ಮತ್ತೊಂದು ‌ಮಾರಕ‌ ಕಾಯಿಲೆ!!

ಸಮಗ್ರ ನ್ಯೂಸ್: ರಾಜ್ಯದ ರೈತಮಿತ್ರರು ಎಚ್ಚರವಾಗಿರಿ. ಹೈನುಗಾರರೇ ನೀವು ಈ ವಿಷವನ್ನು ತಪ್ಪದೆ ಓದಬೇಕು. ಈಗ ಹಲವಾರು ಜಾನುವಾರುಗಳಲ್ಲಿ ಒಟೈಟಿಸ್‍ ಕಾಯಿಲೆ ಹೈನುಗಾರರಿಗೆ ತಲೆನೋವಾಗಿ ಪರಿಣಮಿಸಿದೆ. ಹೈನುಗಾರರು ಎಚ್ಚರ ವಹಿಸದಿದ್ದರೆ ಜಾನುವಾರುಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ರೋಗ ಲಕ್ಷಣಗಳೇನು?ಪ್ರಾರಂಭದಲ್ಲಿ ಹಸುವಿನ ಕಿವಿ ಸೋರಲು ಪ್ರಾರಂಭ ಆಗುತ್ತದೆ. ಬಳಿಕ ಅದಕ್ಕೆ ತಲೆ‌ ನೋವು ಕಾಣಿಸಿಕೊಂಡು ಸೊರಗುತ್ತದೆ. ಇದಾದ ಮೇಲೆ ಮೂಗು, ಬಾಯಿ, ಕಿವಿ ಕೂಡ ಸೋರಲು ಪ್ರಾರಂಭ ಆಗುತ್ತದೆ. ಕಳೆದ ವರ್ಷ ಇದೇ ವೈರಲ್ ಕಾಯಿಲೆಯನ್ನು ವಿಜ್ಞಾನಿಗಳು MCF

ಹೈನುಗಾರರೇ ಎಚ್ಚರ; ರಾಸುಗಳಲ್ಲಿ ಕಾಣಿಸಿಕೊಂಡಿದೆ ಮತ್ತೊಂದು ‌ಮಾರಕ‌ ಕಾಯಿಲೆ!! Read More »

ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಗಳ ನಡುವೆ ವಿಡಿಯೋ ಕಾನ್ಫರೆನ್ಸ್| ಕಾರಣ!?

ಸಮಗ್ರ ನ್ಯೂಸ್: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಹಾನಿ ಸಂಭವಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಂದ ವಿವರವಾದ ವರದಿ ಕೋರಿದ್ದಾರೆ. ಮಂಗಳವಾರ ಎಲ್ಲ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಲಿದ್ದಾರೆ. ರಾಜ್ಯದ ಬಹುತೇಕ ಭಾಗಗಳಲ್ಲಿ, ವಿಶೇಷವಾಗಿ ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವು ಕಡೆಗಳಲ್ಲಿ ವಸತಿ ಪ್ರದೇಶಗಳು ಜಲಾವೃತವಾಗಿವೆ. ಈ ಹಿನ್ನೆಲೆಯಲ್ಲಿ ಸಿಎಮ ಸಿದ್ದರಾಮಯ್ಯ ಎಲ್ಲಾ ಜಿಲ್ಲಾಧಿಕಾರಿಗಳ

ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಗಳ ನಡುವೆ ವಿಡಿಯೋ ಕಾನ್ಫರೆನ್ಸ್| ಕಾರಣ!? Read More »

ದಿಢೀರ್ ಧಾರಣೆ ಹೆಚ್ಚಿಸಿಕೊಂಡ ಕರಿಚಿನ್ನ| ಎರಡೇ ದಿನದಲ್ಲಿ ₹ 18ರಷ್ಟು ಏರಿಕೆ ಕಂಡ ಕಾಳುಮೆಣಸು!!

ಸಮಗ್ರ ನ್ಯೂಸ್: ಮಾರುಕಟ್ಟೆಯ ಕರಿಚಿನ್ನ ಎಂದೇ ಕರೆಯಲ್ಪಡುವ ಕಾಳುಮೆಣಸು ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಎರಡು ದಿನಗಳ ಅಂತರದಲ್ಲಿ ಲಾಂಗ್ ಜಾಪ್ ಹೊಡೆದಿರುವ ಪೆಪ್ಪರ್ ಕೆಜಿಗೆ 18 ರೂಪಾಯಿ ಹೆಚ್ಚಾಗಿದೆ. .ಗಾರ್ಬಲ್ಡ್ ಕಾಳುಮೆಣಸು ಪ್ರತಿ ಕೆಜಿಗೆ 540 ರೂ. ಹಾಗೂ ಅನ್ ಗಾರ್ಬಲ್ಡ್ ಗೆ 520ರೂ.ಗೆ ಏರಿಕೆಯಾಗಿದೆ. ಕಳೆದ ಕೆಲವು ವಾರಗಳಿಂದ ಯಥಾ ಸ್ಥಿತಿಯಲ್ಲಿದ್ದ ಪೆಪ್ಪರ್ ಬೆಲೆಯಲ್ಲಿ ದಿಢೀರ್ ಏರಿಕೆ ಕಾಣಿಸಿದ್ದು, ಕೃಷಿಕರು ಫುಲ್ ಖುಷ್ ಆಗಿದ್ದಾರೆ. ಹವಾಮಾನ ಬದಲಾವಣೆ ಕಾರಣ ಮುಂದಿನ ವರ್ಷ ಕೇರಳ

ದಿಢೀರ್ ಧಾರಣೆ ಹೆಚ್ಚಿಸಿಕೊಂಡ ಕರಿಚಿನ್ನ| ಎರಡೇ ದಿನದಲ್ಲಿ ₹ 18ರಷ್ಟು ಏರಿಕೆ ಕಂಡ ಕಾಳುಮೆಣಸು!! Read More »