ಮಂಗಳೂರು: ಪಡಿತರ ಚೀಟಿಯಿಂದ ಮೃತರ ಹೆಸರು ತೆಗೆಯಲು ಸೂಚನೆ

ಸಮಗ್ರ ನ್ಯೂಸ್: ದ.ಕ. ಜಿಲ್ಲೆಯ ಕೆಲವೊಂದು ಕುಟುಂಬಗಳ ಸದಸ್ಯರು ಮೃತರಾಗಿದ್ದರೂ, ಅವರ ಹೆಸರು ಪಡಿತರದಲ್ಲಿ ತೆಗೆದು ಹಾಕಿರುವುದಿಲ್ಲ. ಈ ರೀತಿಯ 13,133 ಫಲಾನುಭವಿಗಳ ಹೆಸರು ಪಡಿತರ ಚೀಟಿಯಲ್ಲಿ ಉಳಿಸಿರುವುದು ಅಕ್ರಮವಾಗಿದೆ.

Ad Widget ... ..

ಅಂತಹ ಪಡಿತರ ಚೀಟಿದಾರರು ಮೃತಪಟ್ಟವರ ದಾಖಲಾತಿಯನ್ನು ತಾಲೂಕು ಕಚೇರಿಗೆ ಸಲ್ಲಿಸಿ ಪಡಿತರ ಚೀಟಿಯಿಂದ ಮೃತಪಟ್ಟವರ ಹೆಸರನ್ನು ತೆಗೆಸಬೇಕು. ಮೃತರಾದವರ ಹೆಸರನ್ನು ಚೀಟಿಯಿಂದ ತೆಗೆಯದೇ ಇರುವಂತವರನ್ನು ನಿಯಾಮಾನುಸಾರ ಅನರ್ಹಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.

Ad Widget

Leave a Comment

Your email address will not be published. Required fields are marked *