ಉಪ್ಪಿನಂಗಡಿ‌ ಬಳಿಯ ಕಲ್ಲೇರಿಯಲ್ಲಿ ಭೀಕರ ರಸ್ತೆ ಅಪಘಾತ| ಓರ್ವ ಸಾವು; ಈದ್ ಸಂಭ್ರಮದ ಮನೆಯಲ್ಲಿ ಸೂತಕ

ಸಮಗ್ರ ನ್ಯೂಸ್: ಭೀಕರ ರಸ್ತೆ ಅಪಘಾತಕ್ಕೆ ವ್ಯಕ್ತಿಯೋರ್ವರು ಬಲಿಯಾದ ಘಟನೆ ಉಪ್ಪಿನಂಗಡಿ ಸಮೀಪದ ಕಲ್ಲೇರಿಯಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಇಲ್ಲಿನ ಕಳಂಜಿಬೈಲ್ ನಿವಾಸಿ ಜಾಫರ್ (35) ಎಂದು ಗುರುತಿಸಲಾಗಿದೆ.

. Ad Widget . Ad Widget

ಈದುಲ್ ಫಿತರ್ ಸಂಭ್ರಮದಲ್ಲಿ ನೆಂಟರಿಷ್ಟರ ಮನೆಗೆ ತನ್ನೆರೆಡು ಮಕ್ಕಳ ಜತೆ ತೆರಳುತ್ತಿದ್ದ ಜಾಫರ್ ರವರ ಸ್ಕ್ಯೂಟರ್ ಗೆ ಎದುರಿನಿಂದ ಬಂದ ಕಾರೊಂದು ಢಿಕ್ಕಿ ಹೊಡೆದಿದ್ದು ಅಪಘಾತದ ರಭಸಕ್ಕೆ ಜಾಫರ್ ರವರ ಸ್ಕೂಟರ್ ಪೊದೆಗೆ ಹೋಗಿ ಬಿದ್ದಿದ್ದು ಜಾಫರ್ ರವರು ಸ್ಥಳದಲ್ಲೇ ಅಸು ನೀಗಿದ್ದಾರೆ. ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಬ್ಬದ ಸಂಭ್ರಮದಲ್ಲಿ ಈ ಅಪಘಾತ ನಿಜಕ್ಕೂ ಆಘಾತ ಮೂಡಿಸಿದೆ.

. Ad Widget . . Ad Widget . Ad Widget

Leave a Comment

Your email address will not be published. Required fields are marked *