ಆನ್ ಲೈನ್ ಗೇಮಿಂಗ್ ನಲ್ಲಿ ₹ 1.5 ಕೋಟಿ ಗೆದ್ದ ಚಾಲಕ

ಸಮಗ್ರ ನ್ಯೂಸ್: ಆನ್‌ಲೈನ್ ಗೇಮಿಂಗ್ ಆಯಪ್‌(Online Gaming App) ನಲ್ಲಿ 49 ರೂಪಾಯಿ ಹೂಡಿಕೆ ಮಾಡಿದ ವ್ಯಕ್ತಿ, ರಾತ್ರೋರಾತ್ರಿ 1.5 ಕೋಟಿಗೆ ಒಡೆಯನಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Ad Widget ... ..

ಐಪಿಎಲ್​​ ಪ್ರಾರಂಭವಾಗುತ್ತಿದ್ದಂತೆ ಕ್ರಿಕೆಟ್ ಬೆಟ್ಟಿಂಗ್ ಕೂಡ ಪ್ರಾರಂಭವಾಗಿದೆ. ಇದರಲ್ಲಿ ಸಾಕಷ್ಟು ದುಡ್ಡು ಹಾಕಿ ಕೈ ಸುಟ್ಟು ಕೊಳ್ಳುವವರೇ ಹೆಚ್ಚು. ಆದರೆ ಇಲ್ಲೊಬ್ಬಆನ್‌ಲೈನ್ ಗೇಮಿಂಗ್ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿರುವ ಸುದ್ದಿ ಇದೀಗ ಭಾರೀ ವೈರಲ್​ ಆಗಿದೆ.

Ad Widget

ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಚಾಲಕನಾಗಿರುವ ಮಾನ್ಸುರಿ ಎಂಬಾತ ಭಾನುವಾರ ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್‌ನಲ್ಲಿ 49 ರೂಪಾಯಿ ಹೂಡಿಕೆ ಮಾಡಿದ್ದಾನೆ. ಇದರಲ್ಲಿ ಈತ ವರ್ಚುವಲ್ ಕ್ರಿಕೆಟ್ ತಂಡವನ್ನು ರಚಿಸಿ ಮೊದಲ ಸ್ಥಾನವನ್ನು ಪಡೆಯುವ ಮೂಲಕ 1.5 ಕೋಟಿ ರೂಪಾಯಿ ಗೆದ್ದಿದ್ದಾನೆ.

ಶಹಾಬುದ್ದೀನ್ ಮನ್ಸೂರಿ ಎಂದು ಗುರುತಿಸಲಾದ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಇಂತಹ ಆನ್‌ಲೈನ್ ಕ್ರಿಕೆಟ್ ಆಟಗಳಲ್ಲಿ ತಂಡಗಳನ್ನು ಕಟ್ಟುತ್ತಿದ್ದರೂ ಕೂಡ ಅದೃಷ್ಟ ಖುಲಾಯಿಸಿರಲ್ಲಿಲ್ಲ. ಆದರೆ ಭಾನುವಾರ ನಡೆದ ಕೋಲ್ಕತ್ತಾ ಮತ್ತು ಪಂಜಾಬ್ ನಡುವಿನ ಪಂದ್ಯ ಈತನ ಅದೃಷ್ಟವನ್ನೇ ಬದಲಾಯಿಸಿದೆ. ಅವರು ಗೆದ್ದ 1.5 ಕೋಟಿ ರೂಪಾಯಿಯಲ್ಲಿ ಅವರೀಗ ತಮ್ಮ ಆಯಪ್​ ವಾಲೆಟ್​ನಿಂದ 20 ಲಕ್ಷ ರೂಪಾಯಿ ವಿತ್​ಡ್ರಾ ಮಾಡಿಕೊಂಡಿದ್ದಾರೆ. ಅದರಲ್ಲಿ 6 ಲಕ್ಷ ರೂಪಾಯಿ ತೆರಿಗೆ ಕಡಿತಗೊಂಡು, 14 ಲಕ್ಷ ರೂಪಾಯಿ ಬ್ಯಾಂಕ್​ ಅಕೌಂಟ್​ಗೆ ಕ್ರೆಡಿಟ್ ಆಗಿದೆ.

ಸದ್ಯ ಮಧ್ಯಪ್ರದೇಶದ ಸೇಂದ್ವಾ ಎಂಬಲ್ಲಿ ಬಾಡಿಗೆ ಮನೆಯಲ್ಲಿರುವ ಈಗ ಬಂದಿರುವ ಹಣದಲ್ಲಿ ಮೊದಲೊಂದು ಮನೆ ಕಟ್ಟುತ್ತೇನೆ ಎಂದು ಹೇಳಿದ್ದಾರೆ. ಹಾಗೇ, ಉಳಿದ ಹಣದಲ್ಲಿ ಯಾವುದಾದರೂ ಒಂದು ಸ್ವಂತ ಉದ್ಯಮ ಶುರು ಮಾಡುವುದಾಗಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *