ಸಮಗ್ರ ನ್ಯೂಸ್: ಕಾರ್ಕಳದಲ್ಲಿ ನಡೆದ ವಿಜಯ ಸಂಕಲ್ಪ ಬೈಕ್ ರ್ಯಾಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಸುನೀಲ್ ಕುಮಾರ್ ಹೆಲ್ಮೆಟ್ ಧರಿಸದೆ ಮುಸ್ಲಿಂ ಮಾಲೀಕತ್ವ ಬೈಕ್‌ನಲ್ಲಿ ಸಂಚಾರ ನಡೆಸಿ, ಸಂಚಾರಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ.
ಮುಂಬರುವ ವಿಧಾನ ಸಭಾ ಚುನಾವಣೆಗೆ ಮತದಾರರನ್ನು ಸೆಳೆಯಲು ಕಾರ್ಕಳ ನಗರದಲ್ಲಿ ವಿಜಯ ಸಂಕಲ್ಪ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು. ಬೈಕ್ ಜಾಥಾ ಭಾಗಿಯಾದವರು ಯಾರು ಹೆಲ್ಮೆಟ್ ಧರಿಸಿರಲಿಲ್ಲ. ಕಾರ್ಯಕರ್ತರು ಅಲ್ಲದೇ ಸಚಿವ ಸುನೀಲ್ ಕುಮಾರ್ ಸಹ ಹೆಲ್ಮೆಟ್ ಧರಿಸಿರಲಿಲ್ಲ. ಅಷ್ಟೆ ಅಲ್ಲದೇ ಅವರು ಬಳಸಿ ಬೈಕ್ ಮುಸ್ಲಿಂ ಮಾಲೀಕತ್ವ ಎಂದು ಬಹಿರಂಗವಾಗಿದೆ. ಈ ಬೆನ್ನಲ್ಲೇ ನೆಟ್ಟಿಗರು ಸಿಟ್ಟಿಗೆದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಕಿಡಿಕಾರಿದ್ದಾರೆ.
ಇತ್ತೀಚಿಗೆ ಕರಾವಳಿ ಭಾಗದಲ್ಲಿ ಧರ್ಮದಂಗಲ್ ಕಿಚ್ಚು ಹಚ್ಚಿದ್ದ ವಿಚಾರವನ್ನು ಪ್ರಸ್ತಾಪ ಮಾಡುವ ಮೂಲಕ ಸಚಿವ ಸುನೀಲ್ ಕುಮಾರ್ ಕಿಚಾಯಿಸಿದ್ದು, ಮುಸ್ಲಿಮರ ಜೊತೆ ವ್ಯವಹಾರ ಮಾಡಬಾರದು, ಜಾತ್ರೆಗಳಲ್ಲಿ ಅಂಗಡಿ ಹಾಕಲು ಅವಕಾಶ ಕೊಡಬಾರದು ಎಂದೆಲ್ಲ ಕಾರ್ಯಕರ್ತರಿಗೆ ಹೇಳುತ್ತೀರಿ. ಆದರೆ ನೀವು ಮಾತ್ರ ಮುಸ್ಲಿಮರ ಜೊತೆ ಸಂಬಂಧ ಇಟ್ಟುಕೊಳ್ಳುತ್ತೀರಿ. ಮುಸ್ಲಿಮರ ಬೈಕ್ ಉಪಯೋಗಿಸಿದ್ದು ತಪ್ಪಲ್ವಾ? ಎಂದು ಪ್ರಶ್ನಿಸಿದ್ದಾರೆ.






