ಸೋಷಿಯಲ್ ಮೀಡಿಯಾದಲ್ಲಿನ ಉದ್ಯೋಗ ಜಾಹೀರಾತು ನಂಬಿದವನಿಗೆ ದೋಖಾ| ಬಂಟ್ವಾಳದ ಯುವಕನಿಗೆ 9.79 ಲಕ್ಷ ಉಂಡೆನಾಮ

ಸಮಗ್ರ ನ್ಯೂಸ್: ಸೋಷಿಯಲ್‌ ಮೀಡಿಯಾದಲ್ಲಿ ಬರುವ ಜಾಹಿರಾತುಗಳನ್ನು ನಂಬಿ ಕೆಲಸಕ್ಕೆ ಅರ್ಜಿ ಹಾಕುವ ಹುಷಾರ್‌ ಆಗಿರುವುದು ಮುಖ್ಯವಾಗಿದೆ. ಕರಾವಳಿಯ ಯುವಕನೊಬ್ಬ ಇಂತಹ ಜಾಲಕ್ಕೆ ಬಲಿಯಾಗಿ ಲಕ್ಷಾಂತರ ಹಣವನ್ನು ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.

Ad Widget ... ..

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ನಿವಾಸಿ ಯುವನೊಬ್ಬ ವರ್ಕಫ್ರಮ್‌ ಹೋಂನಲ್ಲಿ ಕಂಪನಿಯ ಉದ್ಯೋಗದಲ್ಲಿದ್ದು, ಮತ್ತೊಂದು ಹೊಸ ಉದ್ಯೋಗ ಪಡೆಯುವ ಆಸೆಯಲ್ಲಿ ಆತ ಫೇಸ್​​ಬುಕ್ ಕಂಡ ​ ಜಾಹಿರಾತು ನಂಬಿ ಅದಕ್ಕೆ ವಾಟ್ಸ್‌ಆಪ್‌ ಮೂಲಕ ಸಂಪರ್ಕಿಸಿದ್ದಾನೆ.

Ad Widget

ಆರೋಪಿ ಕೆಲಸದ ಫಾರ್ಮ್​​ನ್ನು ತುಂಬುವಂತೆ ಸಂತ್ರಸ್ತನಿರಿಗೆ ಕಳುಹಿಸಿದ್ದಾರೆ. ಯುವಕನಿಂದ ವಿವಿಧ ಬ್ಯಾಂಕ್​ ಅಕೌಂಟ್​​ಗಳಿಗೆ ವೀಸಾ ಕೆಲಸಕ್ಕಾಗಿ ಹಣ ಹಾಕಿಸಿಕೊಂಡಿದ್ದಾನೆ. ಕಸ್ಟಮ್ಸ್ ಕ್ಲಿಯರೆನ್ಸ್ ಮತ್ತು ಇತರ ಬದಲಾವಣೆಗಾಗಿ ಎಟಿಎಂ ಮೂಲಕ, ಫೋನ್​ ಪೇ ಮೂಲಕ ಹಣ ಹಾಕಿಸಿಕೊಂಡಿದ್ದು ಬರೊಬ್ಬರಿ 9.79 ಲಕ್ಷ ರೂ. ಪಡೆದು ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಈ ವಂಚನೆ ಬಗ್ಗೆ ಸಿಇಎನ್​ ಪೊಲೀಸ್​ ಠಾಣೆಯಲ್ಲಿ ​ಐಟಿ ಕಾಯ್ದೆಯ ಸೆಕ್ಷನ್ 66 (ಡಿ) ಮತ್ತು ಐಪಿಸಿಯ ಸೆಕ್ಷನ್ 419 ಮತ್ತು 420 ರ ಅಡಿಯಲ್ಲಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ.

Leave a Comment

Your email address will not be published. Required fields are marked *