ಮೂಡಬಿದ್ರೆ: ಮೊಬೈಲ್ ಕೊಡಲಿಲ್ಲವೆಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

ಸಮಗ್ರ ನ್ಯೂಸ್: ತಾನು ಕೇಳಿದಾಗ ತಾಯಿ ಮೊಬೈಲ್‌ ಕೊಡಲಿಲ್ಲ ಎನ್ನುವ ಸಿಟ್ಟಿನಲ್ಲಿ ತಂದೆ-ತಾಯಿ ಹೊರಗೆ ಹೋಗಿದ್ದ ವೇಳೆ ಮಗಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡಬಿದಿರೆಯ ವಾಲ್ಪಾಡಿ ಗ್ರಾಮದ ನಾಗಂದಡ್ಡದಲ್ಲಿ ರವಿವಾರ ನಡೆದಿದೆ.

. Ad Widget . Ad Widget

ಇಲ್ಲಿನ ಉಮೇಶ್‌ ಪೂಜಾರಿ ಅವರ ಪುತ್ರಿ ಯುತಿ (15) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಆಕೆ ಅಳಿಯೂರು ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ.

. Ad Widget . . Ad Widget . Ad Widget

ರವಿವಾರ ಬೆಳಗ್ಗೆ ತಂದೆ ಕೂಲಿ ಕೆಲಸಕ್ಕೆಂದು ಹೊರಹೋಗಿದ್ದರು. ಸ್ವಲ್ಪ ಹೊತ್ತಿನ ಬಳಿಕ ತಾಯಿ ಮತ್ತು ಕಿರಿಯ ಮಗಳು ಶಿರ್ತಾಡಿಗೆ ಹೊರಟು ಹಿರಿಯ ಮಗಳು ಯುತಿಯನ್ನು ಕೂಡ ಬರಲು ಹೇಳಿದಾಗ ನನಗೆ ಬರೆಯಲು ಇದೆ. ನಾನು ಬರುವುದಿಲ್ಲ ಎಂದ ಅವಳು ತಾಯಿಯ ಕೈಯಲ್ಲಿದ್ದ ಮೊಬೈಲ್‌ ಕೊಡುವಂತೆ ಕೇಳಿದ್ದಳು. ಮೊಬೆ„ಲ್‌ ಈಗ ಕೊಡುವುದಿಲ, ಶಿರ್ತಾಡಿಯಿಂದ ವಾಪಸು ಬಂದ ಮೇಲೆ ಕೊಡುತ್ತೇನೆ ಎಂದು ಹೇಳಿ ತಾಯಿ ಹಾಗೂ ಕಿರಿಯ ಮಗಳು ಹೊರಟು ಹೋದರೆನ್ನಲಾಗಿದೆ.

ಮಧ್ಯಾಹ್ನ ಮನೆಗೆ ವಾಪಸಾದಾಗ ಮನೆಯಲ್ಲಿ ಮಗಳು ಇರಲಿಲ್ಲ. ಹುಡುಕಾಡಿದಾಗ ಅಪರಾಹ್ನ ಸುಮಾರು 4 ಗಂಟೆ ಹೊತ್ತಿಗೆ ಮನೆ ಹತ್ತಿರದ ಬಾವಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *