ಕೈ ನಾಯಕನ ಪುತ್ರನ ಬರ್ತ್‌ ಡೇ ಪಾರ್ಟಿ‌ಯಲ್ಲಿ ಗಲಾಟೆ| ಊಟ ಕೊಟ್ಟಿಲ್ಲವೆಂದು‌ ಸಿಬ್ಬಂದಿಗೆ ಥಳಿಸಿದ‌‌ ಯುವಕರ ತಂಡ

ಸಮಗ್ರ ನ್ಯೂಸ್: ಕೈ ನಾಯಕರೊಬ್ಬರ ಪುತ್ರನ ಬರ್ತಡೇ ಪಾರ್ಟಿಗಾಗಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿರುವ ವಿಲೇಜ್ ರೆಸ್ಟೋರೆಂಟ್ ಗೆ ಬಂದಿದ್ದ 20ಕ್ಕೂ ಅಧಿಕ ಮಂದಿಯ ಗುಂಪು ಊಟ ಕೊಡಲು ನಿರಾಕರಿಸಿದರು ಎಂಬ ಕಾರಣಕ್ಕೆ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Ad Widget ... ..

ನ.20 ರಂದು ಇವರು ವಿಲೇಜ್ ರೆಸ್ಟೋರೆಂಟ್ ಗೆ ರಾತ್ರಿ 11:30 ರ ವೇಳೆಗೆ ತೆರಳಿದ್ದರು ಎನ್ನಲಾಗಿದ್ದು, ಈಗಾಗಲೇ ತಡವಾಗಿದೆ. ಹೀಗಾಗಿ ಊಟ ನೀಡಲು ಸಾಧ್ಯವಾಗುವುದಿಲ್ಲ ಎಂದು ರೆಸ್ಟೋರೆಂಟ್ ಸಿಬ್ಬಂದಿ ತಿಳಿಸಿದರು ಎಂದು ಹೇಳಲಾಗಿದೆ. ಇದರಿಂದ ಆಕ್ರೋಶ ಕಂಡ ಯುವಕರ ಗುಂಪು ಥಳಿಸಲು ಆರಂಭಿಸಿದೆ.

Ad Widget

ಅಲ್ಲದೆ ರೆಸ್ಟೋರೆಂಟ್ ನಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಲಾಗಿದ್ದು, ಜೊತೆಗೆ ಸ್ಥಳದಲ್ಲಿದ್ದ ಯುವತಿಯ ಮೇಲೂ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ರೆಸ್ಟೋರೆಂಟ್ ಸಿಬ್ಬಂದಿ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದರೂ ಸಹ ಸಕಾಲಕ್ಕೆ ಆಗಮಿಸಿಲ್ಲ ಎಂದು ದೂರಲಾಗುತ್ತಿದೆ. ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Leave a Comment

Your email address will not be published. Required fields are marked *