ಪಾಠಕ್ ಡೆವಲಪರ್ಸ್ ಮಾಲೀಕ ಶ್ರೀಹರಿ ಪಾಠಕ್ ಬಂಧನ| 17 ವಾರೆಂಟ್ ಜಾರಿಯಾಗಿದ್ದರೂ ತಲೆಮರೆಸಿಕೊಂಡಿದ್ದ ಆರೋಪಿ

ಸಮಗ್ರ ನ್ಯೂಸ್: ಮೈಸೂರಿನ ಪಾಠಕ್ ಡೆವಲಪರ್ಸ್ ನ ಮಾಲೀಕ ಶ್ರೀಹರಿ ಪಾಠಕ್ ರನ್ನ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

. Ad Widget . Ad Widget . Ad Widget

ಅಪಾರ್ಟ್ ಮೆಂಟ್ ನಲ್ಲಿ ಮನೆ ಕೊಡುವುದಾಗಿ ನಂಬಿಸಿ ಹಲವರಿಂದ ಮುಂಗಡ ಹಣ ಪಡೆದುಕೊಂಡು ವಂಚಿಸಿದ್ದ ಶ್ರೀಹರಿ ಫಾಠಕ್ ವಿರುದ್ದ ವಿವಿದ ಪೊಲೀಸ್ ಠಾಣೆಗಳಲ್ಲಿ ಹಾಗೂ ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಘನ ನ್ಯಾಯಾಲಯದಲ್ಲಿ ಜಾಮೀನು ಪಡೆದ ಆರೋಪಿ ನಂತರ ವಿಚಾರಣೆಗೆ ಹಾಜರಾಗಿರಲಿಲ್ಲ. ತಲೆ ಮರೆಸಿಕೊಂಡ ಆರೋಪಿಯನ್ನ ಬಂಧಿಸಿ ಹಾಜರುಪಡಿಸುವಂತೆ ಘನ ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿತ್ತು. 17 ಬಾರಿ ಬಂಧನದ ವಾರೆಂಟ್ ಹೊರಡಿಸಿದ್ದರೂ ಆರೋಪಿ ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ. ಸಿಸಿಬಿ ಪೊಲೀಸರು ಹಾಗೂ ಎನ್.ಆರ್.ಉಪವಿಭಾಗದಿಂದ ವಿಶೇಷ ತಂಡ ರಚಿಸಿದ ಪೊಲೀಸರು ಆರೋಪಿಯನ್ನ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

. Ad Widget .

Leave a Comment

Your email address will not be published. Required fields are marked *