ಕುಕ್ಕೆ: ಸರ್ಪಸಂಸ್ಕಾರ ಸೇವಾ ದರ ಪರಿಷ್ಕರಣೆ| ಭಕ್ತಾದಿಗಳಿಗೆ ತಟ್ಟಿದ ದರ ಏರಿಕೆ‌ ಬಿಸಿ

ಸಮಗ್ರ ನ್ಯೂಸ್: ಪ್ರಸಿದ್ದ ನಾಗಾರಾಧನಾ ಪುಣ್ಯತಾಣ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಅಧೀನದ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಸೇವೆಗಳಲ್ಲಿ ಒಂದಾದ ಸರ್ಪಸಂಸ್ಕಾರ ಸೇವಾ ದರವನ್ನು ಪರಿಷ್ಕರಿಸಲಾಗಿದೆ. ಇನ್ನು ಮುಂದೆ ನಡೆಸಲ್ಪಡುವ ‌ಸೇವೆಗಳಿಗೆ 4200 ರೂ ಪರಿಷ್ಕೃತ ದರವನ್ನು ನಿಗದಿಪಡಿಸಲಾಗಿದ್ದು, ಭಕ್ತಾದಿಗಳಿಗೆ ದರ ಏರಿಕೆ‌ ಬಿಸಿ ತಟ್ಟಿದೆ.

. Ad Widget . Ad Widget . Ad Widget

ಕರ್ನಾಟಕ ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಶ್ರೀ ದೇವಳದಲ್ಲಿ ಸರ್ಪದೋಷ ನಿವಾರಣೆಗಾಗಿ
ನಡೆಸುವ ಸರ್ಪಸಂಸ್ಕಾರ ಸೇವೆಯ ಸೇವಾ ದರವನ್ನು ಧಾರ್ಮಿಕ ದತ್ತಿ
ಆಯುಕ್ತ ರ ಆದೇಶದಂತೆ 3,200.00 ರಿಂದ 4,200.00 ಕ್ಕೆ ಹೆಚ್ಚಿಸಿ ಪರಿಷ್ಕರಿಸಲಾಗಿದೆ. ಭಕ್ತಾದಿಗಳು ಸಹಕರಿಸಬೇಕಾಗಿ ಶ್ರೀ ದೇವಳದಿಂದ ಪ್ರಕಟಣೆ ಮೂಲಕ ವಿನಂತಿಸಲಾಗಿದೆ.

. Ad Widget .

Leave a Comment

Your email address will not be published. Required fields are marked *