ಮಾನವೀಯತೆ ಮೆರೆದ ಸಿಎಂ ಬೊಮ್ಮಾಯಿ| ದಿ.ಗುರುಲಿಂಗಸ್ವಾಮಿ ಪತ್ನಿಗೆ ಗ್ರೂಪ್ ಸಿ‌ ಹುದ್ದೆಯ ಕೃಪೆ

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮಾಧ್ಯಮ ಸಂಯೋಜಕರಾಗಿ ನೇಮಕಗೊಂಡಿದ್ದ ಹಿರಿಯ ಪತ್ರಕರ್ತ ಗುರುಲಿಂಗಸ್ವಾಮಿಯವರು ಅವರು ಕೆಲ ದಿನಗಳ ಹಿಂದೆ ದಿಢೀರ್ ಹೃದಯಾಘಾತಗೊಂಡು ನಿಧನರಾಗಿದ್ದರು.

Ad Widget ... .. Ad Widget .

ಇಂತಹ ಅವರ ಅಕಾಲಿಕ ನಿಧನದಿಂದಾಗಿ ಕಂಗಾಲಾಗಿದ್ದ ಕುಟುಂಬಕ್ಕೆ ಮಾನವೀಯತೆ ನೆಲೆಯಲ್ಲಿ, ಮೃತ ಗುರುಲಿಂಗಸ್ವಾಮಿ ಪತ್ನಿಗೆ ಗ್ರೂಪ್-ಸಿ ಹುದ್ದೆಯನ್ನು ನೀಡಿ ಆದೇಶಿಸಿದ್ದಾರೆ.

Ad Widget

ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಮುಖ್ಯಮಂತ್ರಿಯವರ ಸಚಿವಾಲಯಕ್ಕೆ 115 ಗ್ರೂಪ್-ಸಿ ಗುತ್ತಿಗೆ ಹುದ್ದೆಗಳನ್ನು ನೇಮಕಕ್ಕೆ ಆದೇಶಿಸಲಾಗಿತ್ತು. ಈ ಹುದ್ದೆಗಳಲ್ಲಿ ಒಂದು ಹುದ್ದೆಯ ನೇಮಕಾತಿ ಬಾಕಿ ಉಳಿದಿತ್ತು. ಆ ಹುದ್ದೆಗೆ ಶ್ರೀಮತಿ ದೀಪ ಗುರುಲಿಂಗಸ್ವಾಮಿ ಹೆಚ್ ಬಿ ನೇಮಕ ಮಾಡಲು ಸರ್ಕಾರವು ತೀರ್ಮಾನಿಸಿದೆ ಎಂದಿದ್ದಾರೆ.

Leave a Comment

Your email address will not be published. Required fields are marked *