ಸಮಗ್ರ ನ್ಯೂಸ್: ಅರಂತೋಡು ಮರ್ಕಂಜ ಎಲಿಮಲೆ ರಸ್ತೆಯಲ್ಲಿ ವೈ.ಎಂ.ಕೆ.ಚಡಾವು ಬಳಿ ಅಡ್ತಲೆ ನಿವಾಸಿಗಳು ಅಳವಡಿಸಿದ್ದ ಚುನಾವಣಾ ಬಹಿಷ್ಕಾರದ ಬ್ಯಾನರನ್ನು ಕಿಡಿಗೇಡಿಗಳು ನದಿಗೆ ಎಸೆದಿದ್ದು, ಅದೇ ಜಾಗದಲ್ಲಿ ಗ್ರಾಮಸ್ಥರು ಮತ್ತೆ ಬ್ಯಾನರ್ ಅಳವಡಿಸಿದ್ದಾರೆ.
ಈ ರಸ್ತೆಯ ಮೂಲಕ ಅಂದು ಮುಖ್ಯಮಂತ್ರಿಗಳು ರಸ್ತೆಯಲ್ಲಿ ಸುಳ್ಯಕ್ಕೆ ಬರುವವರಿದ್ದರು. ಈ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಬ್ಯಾನರ್ ತೆಗಿದಿದ್ದಾರೆಂದು ಖಂಡಿಸಿ ಅಡ್ತಲೆಯ ನಾಗರಿಕರು ಬ್ಯಾನರ್ ಕಿತ್ತೆಸೆದವರಿಗೆ ಶಿಕ್ಷೆ ನೀಡುವಂತೆ ದೈವದ ಮೊರೆ ಹೋಗಿದ್ದರು. ಆ.7 ರಂದು ಪುನಃ ರಸ್ತೆಯ ಫಲಾನುಭವಿಗಳು ವೈ.ಎಂ.ಕೆ. ಬಳಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ.






