ನಗರಸಭೆ ಮಾಜಿ ಅಧ್ಯಕ್ಷ ನ ಬರ್ಬರ ಹತ್ಯೆ| ಹೊಟ್ಟೆಗೆ ತಲವಾರು ಚುಚ್ಚಿದ ಹಂತಕರು

ಸಮಗ್ರ ನ್ಯೂಸ್: ನಗರಸಭೆ ಮಾಜಿ ಅಧ್ಯಕ್ಷರೊಬ್ಬರನ್ನು ಹಾಡಹಗಲೇ ಬರ್ಬರವಾಗಿ ಕೊಲೆ ಮಾಡಿ, ಹೊಟ್ಟೆಗೆ ತಲವಾರು ಚುಚ್ಚಿ ಅದನ್ನು ಹಂತಕರು ಹಾಗೇ ಬಿಟ್ಟು ಹೋಗಿರುವಂತಹ ಭೀಕರ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

Ad Widget ... ..

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಹಬಾದ್ ಪಟ್ಟಣದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಶಹಬಾದ್ ನಗರಸಭೆ ಮಾಜಿ ಅಧ್ಯಕ್ಷ, ನಗರಸಭೆಯ ಹಾಲಿ ಅಧ್ಯಕ್ಷೆಯ ಪತಿ ಗಿರೀಶ್ ಕಂಬಾನುರ್ ಅವರನ್ನು ಕೊಲೆ‌ ಮಾಡಲಾಗಿದೆ.

Ad Widget

ನಾಲ್ವರು ಯುವಕರು ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ದಾಳಿ ಮಾಡಿ, 15 ರಿಂದ 20 ಬಾರಿ ಇರಿದಿದ್ದಾರೆ. ಬಳಿಕ ತಲವಾರ್​ನಿಂದ ಎದೆಗೆ ಚುಚ್ಚಿ ಅದನ್ನು ಹಾಗೇ ಇಟ್ಟು ಹೋಗಿದ್ದಾರೆ. ಗಂಭೀರ ಗಾಯಗೊಂಡ ಗಿರೀಶ್​ ಅವರನ್ನು ತಕ್ಷಣ ಕಲಬುರಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಈ ವೇಳೆ ಅವರು ಮೃತಪಟ್ಟಿದ್ದಾರೆ.

ಈ ಕುರಿತು ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *