ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಬಗ್ಗೆ ಚರ್ಚೆ

ಸಮಗ್ರ ನ್ಯೂಸ್: ಭಾರಿ ಮಳೆಯ ನಡುವೆ ಅಡಿಕೆ ಮಾರುಕಟ್ಟೆಯಲ್ಲಿ ಏರಿಕೆಯ ಬಗ್ಗೆ ಚರ್ಚೆಯಾಗುತ್ತಿದೆ. ಮುಂದಿನ ವಾರದಿಂದ 10 ರೂಪಾಯಿಯಷ್ಟು ಏರಿಕೆ ಕಾಣಲಿದೆ.

. Ad Widget . Ad Widget

ಹಳೆ ಅಡಿಕೆ 550ರೂ ಆಸುಪಾಸಿನಲ್ಲಿ ಹಾಗೂ ಹೊಸ ಅಡಿಕೆ 445 ರೂ ಆಸುಪಾಸಿಗೆ ಏರಿಕೆ ಸಾಧ್ಯತೆ ಇದೆ. ಅಡಿಕೆ ಧಾರಣೆಯು ಕಳೆದ ಕೆಲವು ದಿನಗಳಿಂದ ಸ್ಥಿರತೆಯಲ್ಲಿತ್ತು.

. Ad Widget . . Ad Widget . Ad Widget

ಕ್ಯಾಂಪ್ಕೋ ಧಾರಣೆಯು ಹೊಸ ಅಡಿಕೆಗೆ 450 ರೂ ಗರಿಷ್ಠ ಧಾರಣೆ ಇದ್ದು 430 ರೂ. ಗೆ ಖರೀದಿ ನಡೆಯುತ್ತಿತ್ತು. ಹಳೆಯ ಅಡಿಕೆಧಾರಣೆಯು 550 ರೂ. ನಿಗದಿಯಾದರೂ 520 ರೂಪಾಯಿಗೆ ಖರೀದಿ ನಡೆಸಲಾಗುತ್ತಿತ್ತು.

ಖಾಸಗಿ ಧಾರಣೆಯೂ ಹೊಸ ಅಡಿಕೆಗೆ 430-432 ರೂಪಾಯಿ ಇದ್ದರೆ ಹಳೆ ಅಡಿಕೆ 520-525 ರೂಪಾಯಿವರೆಗೂ ಖರೀದಿಯಾಗುತ್ತಿತ್ತು.

ಇದೀಗ ಅಡಿಕೆ ಬೇಡಿಕೆ ವ್ಯಕ್ತವಾದರೂ ಮಾರುಕಟ್ಟೆಯಲ್ಲಿ ಅಡಿಕೆಯ ಕೊರತೆ ಕಾಡುತ್ತಿದೆ. ಹೀಗಾಗಿ ಧಾರಣೆ ಏರಿಕೆ ನೀರೀಕ್ಷೆ ಇದೆ.

ಇದೇ ವೇಳೆ ಅಸ್ಸಾಂ, ಮೇಘಾಲಯ ಸೇರಿದಂತೆ ಉತ್ತರದ ಭಾಗದಲ್ಲಿ ಭಾರೀ ಮಳೆಯ ಕಾರಣದಿಂದ ಅಡಿಕೆ ವಹಿವಾಟು ಬಹುಪಾಲು ದಕ್ಷಿಣದ ಕಡೆಗೆ ಮುಖ ಮಾಡಿದೆ.

Leave a Comment

Your email address will not be published. Required fields are marked *