ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆ| ಭಾಷಣ ಮಾಡುತ್ತಿರುವಾಗಲೇ ಗುಂಡಿಕ್ಕಿದ ದುಷ್ಕರ್ಮಿಗಳು

ಸಮಗ್ರ ನ್ಯೂಸ್ : ಜಪಾನ್ ನ ಮಾಜಿ ಪ್ರಧಾನಿ ಶಿಂಜೊ ಅಬೆಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಜಪಾನ್ ನ ನಾರಾ ನಗರದಲ್ಲಿ ನಡೆದಿದೆ.

. Ad Widget . Ad Widget . Ad Widget

ಜಪಾನ್ ನ ನಾರಾ ನಗರದಲ್ಲಿ ಮಾಜಿ ಪ್ರಧಾನಿ ಶಿಂಜೊ ಅಬೆಯನ್ನು ಗುಂಡಿಕ್ಕಿ ಹತ್ಯೆ ಯತ್ನಿಸಲಾಗಿದೆ ಎಂದು ವರದಿಯಾಗಿದೆ. ಭಾಷಣ ಮಾಡುವಾಗ ಮಾಜಿ ಪ್ರಧಾನಿ ಶಿಂಜೊ ಅಬೆ ಅವರನ್ನು ನಾರಾ ನಗರದಲ್ಲಿ ಗುಂಡಿಕ್ಕಿ ಕೊಂದಿದ್ದಾರೆ, ಸದ್ಯ ಶಂಕಿತ ಹಂತಕರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ ಎಂದು ಜಪಾನ್ ನ ಎನ್ ಎಚ್ ಕೆ ವಾರ್ತಾ ವಾಹಿನಿ ವರದಿ ಮಾಡಿದೆ.

. Ad Widget .

ಎರಡು ಅವಧಿಗೆ ಜಪಾನ್ ಪ್ರಧಾನಿಯಾಗಿದ್ದ ಅಬೆ ಭಾರತದೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಇಂದು ಜಪಾನ್ ಕಾಲಮಾನ 11.20ಕ್ಕೆ ನಾರಾದಲ್ಲಿ ದುಷ್ಕರ್ಮಿಗಳು ಅಬೆ ಎದೆಗೆ ಗುಂಡಿಕ್ಕಿದ್ದು ತೀವ್ರ ಗಾಯಗೊಂಡಿದ್ದ ಅವರನ್ನು ಏರ್ ಲಿಪ್ಟ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಬಗ್ಗೆ ಮೂಲಗಳು ವರದಿ ಮಾಡಿವೆ.

Leave a Comment

Your email address will not be published. Required fields are marked *