ರೈಲ್ವೇ ಅಂಡರ್ ಪಾಸ್ ಗೋಡೆಗೆ ಟೊಮೆಟೊ ತುಂಬಿದ ಲಾರಿ ಡಿಕ್ಕಿ ; ಚಾಲಕನಿಗೆ ಗಂಭೀರ ಗಾಯ

ಸಮಗ್ರ ನ್ಯೂಸ್ : ಚಿಕ್ಕಬಳ್ಳಾಪುರ ತಾಲ್ಲೂಕಿನ ಜಾತವಾರ ಬಳಿಯ ಹೊಸಹಳ್ಳಿ ರೈಲ್ವೇ ಅಂಡರ್ ಪಾಸ್‌ ಗೋಡೆಗೆ ಟೊಮೆಟೊ ಲಾರಿ ಡಿಕ್ಕಿ ಹೊಡೆದು ಡಿಕ್ಕಿಯ ರಭಸಕ್ಕೆ ಟೊಮೆಟೊ ತುಂಬಿದ್ದ ಲಾರಿ ಉರುಳಿ ಬಿದ್ದಿದೆ. ಚಾಲಕನಿಗೆ ಗಂಭೀರ ಗಾಯವಾಗಿದೆ.

. Ad Widget . Ad Widget . Ad Widget .

ಲಾರಿ ಉರುಳಿ ಬಿದ್ದ ಪರಿಣಾಮ ಟೊಮೆಟೊ ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಚಿಂತಾಮಣಿಯಿಂದ ಟೊಮೆಟೊ ತುಂಬಿಸಿಕೊಂಡು ಬರುತ್ತಿದ್ದ ಲಾರಿ ಇದಾಗಿದ್ದು, ರಾತ್ರಿ ವೇಳೆ ಹಂಪ್ಸ್‌ನಲ್ಲಿ ಲಾರಿ ನಿಯಂತ್ರಣ ತಪ್ಪಿದ ಪರಿಣಾಮ ಲಾರಿ ರೈಲ್ವೇ ಅಂಡರ್ ಪಾಸ್‌ ಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ರಸ್ತೆ ತಿರುವು ಹಾಗೂ ಹಂಪ್ಸ್ ಇರುವ ಬಗ್ಗೆ ಯಾವುದೇ ನಾಮಪಲಕಗಳಿಲ್ಲದಿರುವುದೇ ಈ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ.

ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Comment

Your email address will not be published. Required fields are marked *