ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಸಮಗ್ರ ನ್ಯೂಸ್ : ಅಂಕೋಲಾ ಮೂಲದ ಸಿದ್ದಿ ಜನಾಂಗದ ಮಹಿಳೆ ಉಡುಪಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ಮಕ್ಕಳಿಗೆ ಜನ್ಮನೀಡಿದ್ದು ತಾಯಿ- ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Ad Widget ... ..

ಹೆರಿಗೆ ನೋವು ಕಾಣಿಸಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆ ಅಂಕೋಲ ಮೂಲದ 27 ವರ್ಷದ ಮಹಿಳೆ ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು.

Ad Widget

ಡಾ.ಕವಿಶಾ ಭಟ್, ಡಾ.ರಜನಿ ಕಾರಂತ್, ಡಾ.ಸೂರ್ಯನಾರಾಯಣ, ಡಾ.ಗಣಪತಿ ಹೆಗಡೆ ಹಾಗೂ ಡಾ.ಮಹಾದೇವ ಭಟ್ ವೈದ್ಯರ ತಂಡ ಮಹಿಳೆಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದು, ತ್ರಿವಳಿ ಮಕ್ಕಳು ಜನಿಸಿವೆ. ಇದರಲ್ಲಿ ಎರಡು ಗಂಡು ಮಗು, ಇನ್ನೊಂದು ಹೆಣ್ಣು ಮಗು.

Leave a Comment

Your email address will not be published. Required fields are marked *