ರಾಜ್ಯದಲ್ಲಿ ಶನಿವಾರದಿಂದ ಮದ್ಯ ಮಾರಾಟ ಬಂದ್.!

ಸಮಗ್ರ ನ್ಯೂಸ್: ರಾಜ್ಯ ಸರ್ಕಾರ ಮದ್ಯ ಪೂರೈಕೆ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸದಿದ್ದರೆ ಜುಲೈ 9ರ ಶನಿವಾರದಿಂದ ಮದ್ಯ ಮಾರಾಟ ಬಂದ್ ಮಾಡಲಾಗುವುದು ಎಂದು ಮದ್ಯ ಮಾರಾಟಗಾರರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಸ್.ಗುರುಸ್ವಾಮಿ ಎಚ್ಚರಿಸಿದ್ದಾರೆ.

Ad Widget ... ..

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯ ಖರೀಸಲು ಬೇಕಾಗಿರುವ ಪ್ರಕ್ರಿಯೆಯಲ್ಲಿ ಹತ್ತಾರು ಗೊಂದಲಗಳಿವೆ. ಹೀಗಾಗಿ ಸಕಾಲದಲ್ಲಿ ಮದ್ಯ ಪೂರೈಕೆಯಾಗುತ್ತಿಲ್ಲ ಹೀಗಾಗಿ ಬಾರ್ ಮಾಲೀಕರು ಸಂಕಷ್ಟ ಅನುಭವಿಸುವಂತಾಗಿದೆ. ನಮ್ಮನ್ನು ಹೀಗೇಕೆ ಗೋಳು ಹೊಯ್ದುಕೊಳ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

Ad Widget

ಈ ಹಿಂದಿನ ವ್ಯವಸ್ಥೆಯಲ್ಲಿ ಕೆ ಎಸ್ ಬಿ ಸಿ ಎಲ್ ಅಕೌಂಟ್ ಗೆ ಹಣ ಜಮೆ ಮಾಡಿದರೆ ಬೇಕಾದ ಮದ್ಯ ಸುಲಭವಾಗಿ ಸಿಗುತ್ತಿತ್ತು. ಅಲ್ಲದೆ ಬಿಲ್ಲಿಂಗ್ ವ್ಯವಸ್ಥೆ ಮ್ಯಾನ್ಯುವಲ್ ಆಗಿ ಇತ್ತು. ಆದರೆ ಏಪ್ರಿಲ್ 4ರಿಂದ ಹೊಸ ಪದ್ಧತಿ ಆರಂಭವಾಗಿದ್ದು ಇದರ ಹಿಂದೆಯೇ ಸಮಸ್ಯೆಗಳು ಪ್ರಾರಂಭವಾಯಿತು. ವೆಬ್ ಇಂಡೆಂಟಿಂಗ್ ವ್ಯವಸ್ಥೆ ಜಾರಿಯಾದಾಗಿನಿಂದ ಎಲ್ಲವನ್ನೂ ಹಿಂದಿನ ದಿನವೇ ಪೂರ್ಣಗೊಳಿಸಬೇಕು. ಆದರೆ ಇದ್ಯಾವುದು ಸುವ್ಯವಸ್ಥಿತವಾಗಿ ಸಾಗುತ್ತಿಲ್ಲ.ಲಾಗಿನ ಅವಧಿ , ಸರ್ವರ್ ಸಮಸ್ಯೆ ಹೀಗೆ ಸಮಸ್ಯೆಗಳ ಸರಮಾಲೆಯಿಂದ ಸಗಟು ಮದ್ಯ ಖರೀದಿದಾರರಿಗೇ ಸಂಕಷ್ಟ ಎದುರಾಗಿದೆ. ಇಂದು ಮುಂಜಾನೆಯಿಂದ ಇಡೀ ಪ್ರಕ್ರಿಯೆಯೇ ಸ್ಥಗಿತಗೊಂಡಿದೆ. ಮುಂದಿನ 24 ಗಂಟೆಗಳ ಒಳಗೆ ಮದ್ಯ ಖರೀದಿ ಇಂಡೆಂಟಿಂಗ್ ವ್ಯವಸ್ಥೆಯನ್ನು ಗಂಟೆಯೊಳಗೆ ಸರಿಪಡಿಸಬೇಕು. ಇಲ್ಲವಾದಲ್ಲಿ ಮದ್ಯ ಮಾರಾಟವನ್ನು ನಿಲ್ಲಿಸಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Comment

Your email address will not be published. Required fields are marked *