ಪುತ್ತೂರು: ತವರು ಮನೆಗೆ ಹೋದ ತಾಯಿ ಮಗು ನಾಪತ್ತೆ

ಸಮಗ್ರ ನ್ಯೂಸ್: ತವರು ಮನೆಗೆ ಹೋಗಿದ್ದ ಮಹಿಳೆಯೊಬ್ಬರು ತನ್ನ ಮಗನೊಂದಿಗೆ ನಾಪತ್ತೆಯಾಗಿರುವ ಘಟನೆ ನಡೆದಿದೆ.

Ad Widget ... ..

ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಪುಳಿತ್ತಡಿ ನಿವಾಸಿ ನೆಲ್ಯಾಡಿ ಅಲ್ತಾ ಎಂಬವರ ಪತ್ನಿ ಇರ್ಶಾನಾ (25) ಹಾಗೂ ಅವರ ಒಂದೂವರೆ ವರ್ಷದ ಮಗ ಮೊಹಮ್ಮದ್ ಆದಿಲ್ ನಾಪತ್ತೆಯಾಗಿರುವ ಬಗ್ಗೆ ಸಂಪ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.

Ad Widget

ವಾರದ ಹಿಂದೆ ಇರ್ಶಾನಾ ಪುಳಿತ್ತಡಿಯಲ್ಲಿರುವ ತನ್ನ ತವರು ಮನೆಗೆ ಹೋಗಿದ್ದು, ಮದುವೆಗೆಂದು ಕೇರಳಕ್ಕೆ ತೆರಳಿದ್ದ ಆಕೆಯ ಪೋಷಕರು ಮೇ 20 ರಂದು ಮನೆಗೆ ಹಿಂದಿರುಗಿದಾಗ ಆಕೆ ತನ್ನ ಮಗನೊಂದಿಗೆ ನಾಪತ್ತೆಯಾಗಿದ್ದಳು.

ಈ ಸಂಬಂಧ ಇರ್ಷಾನ ತಂದೆ ಅಬ್ದುಲ್ ಲತೀಫ್ ನೀಡಿದ ದೂರಿನ ಮೇರೆಗೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *