ಗೋವಾ: 12ರ ರಷ್ಯನ್ ಬಾಲೆಯ ಅತ್ಯಾಚಾರ; ಗದಗ ಮೂಲದ ಆರೋಪಿ ಅರೆಸ್ಟ್

ಸಮಗ್ರ ನ್ಯೂಸ್: ಪ್ರವಾಸಕ್ಕೆಂದು ಬಂದಿದ್ದ 12 ವರ್ಷದ ರಷ್ಯನ್ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ಗದಗ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

. Ad Widget . Ad Widget

ರಷ್ಯಾದಿಂದ ಗೋವಾಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿ ಮೇಲೆ ಮೇ.6 ರಂದು ಅತ್ಯಾಚಾರ ನಡೆದಿದ್ದು, ಮೇ 9ರಂದು ಬಾಲಕಿ ತಾಯಿ ಪೊಲೀಸರಿಗೆ ದೂರು ನೀಡಿದ್ದರು.

. Ad Widget . . Ad Widget . Ad Widget

ಕೃತ್ಯದ ಬಳಿಕ ಆರೋಪಿ ನಾಪತ್ತೆಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಗೋವಾ ಪೊಲೀಸರು ಇದೀಗ ಆರೋಪಿಯನ್ನು ಗದಗದಲ್ಲಿ ಬಂಧಿಸಿದ್ದಾರೆ. ಗೋವಾ ಮಕ್ಕಳ ಕಾಯ್ದೆಯ 8ನೇ ವಿಧಿ ಹಾಗೂ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ಅಗತ್ಯ‌ ವಸ್ತುಗಳನ್ನು ಖರೀದಿಸಲೆಂದು ತಾನು ರೆಸಾರ್ಟ್ ಹೊರಗೆ ಹೋದಾಗ ರೆಸಾರ್ಟ್ ನ ಈಜುಕೊಳದಲ್ಲಿ ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಅಲ್ಲದೇ ಹೋಟೆಲ್ ರೂಮ್ ನಲ್ಲಿಯೂ ಕೊಠಡಿ ಸಹಾಯಕ ತನ್ನ ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ದೂರು ದಾಖಲಿಸಿದ್ದರು.

Leave a Comment

Your email address will not be published. Required fields are marked *