ರಾಜ್ಯದ ಜನರಿಗೆ ಮತ್ತೊಂದು ಶಾಕ್| ಟೊಮೆಟೊ ಬೆಲೆ ಹೆಚ್ಚಳ

ಸಮಗ್ರ ನ್ಯೂಸ್: ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ತರಕಾರಿ ಬೆಲೆಗಳು ಗಗನಕ್ಕೇರಿದೆ. ಅದರಲ್ಲೂ ಜನರು ಹೆಚ್ಚಾಗಿ ಬಳಸುವ ಟೊಮೆಟೊ ಬೆಲೆ ಹೆಚ್ಚಳವಾಗಿದೆ. ಮಳೆ ಹಾಗೂ ಬಿಸಿಲಿನ ತಾಪಮಾನದಿಂದ ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿದೆ.

Ad Widget ... ..

ಹೀಗಾಗಿ ಟೊಮೆಟೊ ಬೆಲೆ ಹೆಚ್ಚಾಗಿದ್ದು, ಈ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಪೆಟ್ರೋಲ್, ಡೀಸೆಲ್ ಬೆಲೆ ಹೊಡೆತದ ಮೇಲೆ ಟೊಮೆಟೊ ಬೆಲೆಯು ಹೊಡೆತ ಬಿದ್ದಿದೆ.

Ad Widget

ಅಕಾಲಿಕ ಮಳೆ ಹಾಗೂ ಬಿಸಿಲಿನ ತಾಪಮಾನ ಹೆಚ್ಚಾದ್ದರಿಂದ ಟೊಮೆಟೊ ಬೆಳೆ ನಾಶವಾಗುತ್ತಿದೆ. ಹೀಗಾಗಿ ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿರುವುದರಿಂದ ಬೆಲೆ ಏರಿಕೆಗೆ ಕಾರಣವಾಗಿದೆ. ವಾರದ ಹಿಂದೆಲ್ಲಾ ಒಂದು ಕೆಜಿ ಟೊಮೆಟೊಗೆ ಕೇವಲ 5 ರಿಂದ 10 ರೂಪಾಯಿಗೆ ಮಾರಾಟವಾಗುತ್ತಿತ್ತು. ಆದರೀಗ ಮಳೆ ಹೊಡೆತದಿಂದ ನಗರದಲ್ಲಿ ಟೊಮೆಟೊ ಕೆಜಿಗೆ 40 ರಿಂದ 45 ರೂಪಾಯಿಗೆ ಮಾರಾಟವಾಗುತ್ತಿದೆ.

Leave a Comment

Your email address will not be published. Required fields are marked *