ಹುಬ್ಬಳ್ಳಿ: ಸೈಯದ್ ವೆಡ್ಸ್ ಸ್ನೇಹಾ; ಲವ್ ಜಿಹಾದ್ ಗೆ ಪುಲ್ ಸ್ಟಾಪ್| ಆತನೊಂದಿಗೇ ಬಾಳುವೆ ಎಂದ ಯುವತಿ

ಸಮಗ್ರ ನ್ಯೂಸ್:: ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಯುವತಿ, ‘ನಾನು ಮತ್ತೆ ಮನೆಗೆ ವಾಪಸ್ ಹೋಗುವುದಿಲ್ಲ. ಪತಿ ಜೊತೆಯೇ ಬದುಕುತ್ತೇನೆ. ನನ್ನ ಪಾಡಿಗೆ ಬಿಟ್ಟಬಿಡಿ’ ಎಂದು, ತಮ್ಮ ಅಂತರ ಧರ್ಮೀಯ ಪ್ರೇಮ ವಿವಾಹದ ಸುತ್ತ ಎದ್ದಿದ್ದ ‘ಲವ್ ಜಿಹಾದ್’ ಆರೋಪಕ್ಕೆ ತೆರೆ ಎಳೆದರು.

. Ad Widget . Ad Widget

ನಗರದ ಹಳೇ ಹುಬ್ಬಳ್ಳಿಯ ಮುಸ್ಲಿಂ ಯುವಕ ಇಬ್ರಾಹಿಂ ಸೈಯದ್ ಅವರನ್ನು ಉಣಕಲ್‌ನ ಹಿಂದೂ ಯುವತಿ ಸ್ನೇಹಾ ಢಮಾಮಘರ ಅವರು, ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಫೆ. 11ರಂದು ಮದುವೆಯಾಗಿದ್ದರು.

. Ad Widget . . Ad Widget . Ad Widget

ವಿಷಯ ತಿಳಿದು ಕುಟುಂಬದವರು, ಸ್ಥಳೀಯ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮುದಾಯ, ವಿಶ್ವ ಹಿಂದೂ ಪರಿಷತ್, ಹಿಂದೂ ಪರಿಷತ್ ಸಂಘಟನೆಗಳ ಕಾರ್ಯಕರ್ತರು ಇಲ್ಲಿನ ಉಪನಗರ ಠಾಣೆ ಎದುರು ಬುಧವಾರ ಎಂಟು ತಾಸು ಪ್ರತಿಭಟನೆ ನಡೆಸಿದ್ದರು. ಆದರೆ ಯುವತಿ ತಾನು ಕೈಹಿಡಿದ ಸೈಯದ್ ಜೊತೆಗೆ ಬಾಳುತ್ತೇನೆ ಎಂದು ಖಡಾಖಂಡಿತವಾಗಿ ಹೇಳಿದ್ದು, ಪೊಲೀಸರ ಮಧ್ಯಸ್ಥಿಕೆಯಲ್ಲಿ ಪ್ರಕರಣ ಇತ್ಯರ್ಥವಾಗಿದೆ.

Leave a Comment

Your email address will not be published. Required fields are marked *