ಉಕ್ರೇನ್ ಬಿಕ್ಕಟ್ಟು; ಭಾರತೀಯ ವಿದ್ಯಾರ್ಥಿಗಳ‌ ರಕ್ಷಣೆಗೆ ಮುಂದಾದ ರಷ್ಯಾ| ಇದು ಮೋದಿ- ಪುಟಿನ್ ಮಾತುಕತೆ ಫಲಶ್ರುತಿ

Ad Widget . Ad Widget . Ad Widget . Ad Widget . Ad Widget . Ad Widget .

ಸಮಗ್ರ ನ್ಯೂಸ್: ಉಕ್ರೇನ್​ ವಿರುದ್ಧ ನಡೆಯುತ್ತಿರುವ ಯುದ್ಧದ ನಡುವೆಯೇ ರಷ್ಯಾದ ರಾಯಭಾರಿ ನಿಯೋಜಿತ ಡೇನಿಸ್​ ಅಲಿಪೋವ್​​ ಉಕ್ರೇನ್​ನ ಖಾರ್ಕಿವ್​, ಸುಮಿ ಹಾಗೂ ಇತರೆ ಯುದ್ಧ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಿವ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಅಲ್ಲದೇ ಉಕ್ರೇನ್,​ ಭಾರತೀಯ ವಿದ್ಯಾರ್ಥಿಗಳನ್ನು ತನ್ನ ಒತ್ತೆಯಾಳಾಗಿ ನೋಡುತ್ತಿದೆ ಎಂದು ರಷ್ಯಾ ಹೇಳಿದೆ. ಖಾರ್ಕಿವ್‌ನಿಂದ ಭಾರತೀಯ ವಿದ್ಯಾರ್ಥಿಗಳ ಗುಂಪನ್ನು ತುರ್ತಾಗಿ ಸ್ಥಳಾಂತರಿಸಲು ರಷ್ಯಾ ಪ್ರಯತ್ನಿಸುತ್ತಿದೆ. ಆದರೆ ಉಕ್ರೇನ್​ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳಂತೆ ನೋಡಿಕೊಳ್ತಿದೆ ಎಂದು ರಷ್ಯಾದ ವರದಿಗಳು ತಿಳಿಸಿವೆ.

ಸುದ್ದಿಗೋಷ್ಠಿಯಲ್ಲಿ ಈ ವಿಚಾರವಾಗಿ ಮಾತನಾಡಿದ, ರಷ್ಯಾದ ನಿಯೋಜಿತ ರಾಯಭಾರಿ ಡೆನಿಸ್ ಅಲಿಪೋವ್, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಯ ವಿಷಯದ ಬಗ್ಗೆ ರಷ್ಯಾ ಭಾರತದೊಂದಿಗೆ ಸಂಪರ್ಕದಲ್ಲಿದೆ ಮತ್ತು ಶೀಘ್ರದಲ್ಲೇ ಸುರಕ್ಷಿತ ಮಾರ್ಗವನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.

ಇದರ ಮಧ್ಯೆ ಖಾರ್ಕಿವ್ ನಲ್ಲಿರುವ ಭಾರತೀಯರ ರಕ್ಷಣೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಇದಾದ ಬಳಿಕ ರಷ್ಯಾ ಸೇನೆ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾಗಿದೆ.

ಆದರೆ ಉಕ್ರೇನ್ ರಷ್ಯಾದ ಆರೋಪವನ್ನು ತಳ್ಳಿಹಾಕಿದ್ದು, ನಾವು ಯಾರನ್ನೂ ಒತ್ತೆಯಾಳಾಗಿ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದೆ.

Leave a Comment

Your email address will not be published. Required fields are marked *