ಸಮಗ್ರ ನ್ಯೂಸ್: ಉಕ್ರೇನ್ ನಲ್ಲಿ ಸಿಲುಕಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿ ಅನೀಶ್ ಜಯಂತ್ ಎಂಬವರು ಹಂಗೇರಿ ಗಡಿ ಮೂಲಕ ಭಾರತಕ್ಕೆ ಸುರಕ್ಷಿತವಾಗಿ ಆಗಮಿಸಿದ್ದಾರೆ. ಸರ್ಕಾರದ ಸಹಾಯವಿಲ್ಲದೇ ಸ್ನೇಹಿತರ ಜೊತೆ ಗಡಿ ತಲುಪಿದ್ದ ಅನೀಶ್ ಇದೀಗ ದೆಹಲಿಗೆ ಆಗಮಿಸಿದ್ದು, ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ವಿದ್ಯಾರ್ಥಿ ಅನೀಶ್ , ಉಕ್ರೇನ್ ನಿಂದ ವಾಪಸ್ ಆಗಿರುವುದು ಖುಷಿ ತಂದಿದೆ ಆದರೆ, ಅಲ್ಲಿಯ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ನಾವು ವೆಸ್ಟರ್ನ್ ಸೈಡ್ ಅಲ್ಲಿ ಇರುವುದರಿಂದ ಬಂದಿದ್ದೇವೆ, ಈಸ್ಟರ್ನ್ ಭಾಗದಲ್ಲಿರುವ ವಿದ್ಯಾರ್ಥಿಗಳು ನರಕ ಅನುಭವಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಕೇಂದ್ರ ಸರಕಾರ ಅಲ್ಲಿ ಏನೂ ಮಾಡ್ತಾ ಇಲ್ಲ, ಉಕ್ರೇನ್ ಗೆ ಕಾಲು ಕೂಡಾ ಇಡ್ತಾ ಇಲ್ಲ. ಗಡಿ ತಲುಪಿರುವ ವಿದ್ಯಾರ್ಥಿಗಳನ್ನು ಮಾತ್ರ ದೇಶಕ್ಕೆ ವಾಪಸ್ ಕರ್ಕೊಂಡು ಬರ್ತಾ ಇದ್ದಾರೆ. ಗಡಿಗೆ ಬರದೇ ಇರುವ ವಿದ್ಯಾರ್ಥಿಗಳನ್ನು ಅಲ್ಲೇ ಸಾಯಿರಿ ಎಂದು ಅವರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಡಿಗೆ ಬಂದ ವಿದ್ಯಾರ್ಥಿಗಳಿಗೆ ಮಾತ್ರ ಕೇಂದ್ರ ಸರಕಾರ ವಿಮಾನದ ವ್ಯವಸ್ಥೆ ಮಾಡುತ್ತಿದೆ, ಗಡಿಯಲ್ಲಿ ಭಾರತದ ಯಾವುದೇ ಭಾರತದ ರಾಯಭಾರಿ ಕಚೇರಿಯ ಪ್ರತಿನಿಧಿಗಳು ಇಲ್ಲ. ಗಡಿಯಲ್ಲಿ ಬಸ್ ಮೇಲೆ ಇರುವ ನಮ್ಮ ರಾಷ್ಟ್ರ ಧ್ವಜವನ್ನು ನೋಡಿ ಬಸ್ ಗಳನ್ನು ಬಿಡ್ತಾ ಇದ್ದಾರೆ. ಕೇಂದ್ರ ಸರ್ಕಾರ ಬರುತ್ತೆ ಅಂತ ನಂಬಿ ಕೂತಿದ್ರೆ ನಮ್ಮ ಜೀವ ಹೋಗ್ತಿತ್ತು. ನಾವು ಅಲ್ಲಿ ವಿದ್ಯಾರ್ಥಿ ಒಕ್ಕೂಟಗಳ ಸಹಕಾರದಿಂದ ಬಸ್ ವ್ಯವಸ್ಥೆ ಮಾಡಿ ನಾವೇ ಖರ್ಚು ಮಾಡಿ ಗಡಿಗೆ ಬಂದೆವು. ಈಸ್ಟರ್ನ್ ಸೈಡ್ ನಲ್ಲಿರುವ ವಿದ್ಯಾರ್ಥಿಗಳಿಗೆ ರೈಲು ಮೂಲಕ ಗಡಿಗೆ ‘ನೀವೇ ಬನ್ನಿ’ ಎಂದು ರಾಯಭಾರಿ ಕಚೇರಿಯಿಂದ ವಾಯ್ಸ್ ಮೆಸೇಜ್ ಕಳುಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖುದ್ದು ಭಾರತೀಯ ರಾಯಭಾರಿ ಉಕ್ರೇನ್ ಬಿಟ್ಟು ಹೋಗಿದೆ. ಭಾರತ ಸರ್ಕಾರ ಇಲ್ಲಿರುವ ಅಧಿಕಾರವನ್ನು ಅಲ್ಲಿ ತೋರಿಸುತ್ತಿಲ್ಲ. ಆದರೆ, ನಾವು ಭಾರತಕ್ಕೆ ಬಂದ ಬಳಿಕ ನಾವೇ ಮಾಡಿದ್ದೇವೆ ಅಂತ ಕೇಂದ್ರ ಸಚಿವರು ಬಂದು ‘ಶೋ- ಆಫ್’ ಮಾಡ್ತಿದ್ದಾರೆ ಎಂದು ವಿದ್ಯಾರ್ಥಿ ಅನೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.








ಯುಕ್ರೇನಿಂದ ಸೇಫಾಗಿ ಕರ್ಕೊಂಡು ಬಂದ ಭಾರತಕ್ಕೆ ಬಯ್ತಾನಲ್ಲ… ಏನ್ ಮಾಡಬೇಕು ಇವನನ್ನ..?
https://youtu.be/FmM3q5UgMV0
ಮತ್ತೆ ಉಕ್ರೇನ್‌ಗೇ ಬಿಟ್ಟು ಬನ್ನಿ 😡😡😡