ಮಂಗಳೂರು: ಬ್ರೇಕ್ ಪೆಡಲ್ ಗೆ ಸಿಕ್ಕಿಹಾಕಿಕೊಂಡ ನೀರಿನ ಬಾಟಲ್| ನಿಯಂತ್ರಣ ತಪ್ಪಿದ‌ ಕಾರಿನಿಂದಾಗಿ ಸರಣಿ ಅಪಘಾತ

. Ad Widget . Ad Widget . Ad Widget

ಸಮಗ್ರ ನ್ಯೂಸ್ ಡೆಸ್ಕ್: ಕಾರಿನ ಬ್ರೇಕ್ ಪೆಡಲ್ ಗೆ ನೀರಿನ ಬಾಟಲ್ ಸಿಕ್ಕಿ ಹಾಕಿಕೊಂಡ ಕಾರಣ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ದ್ವಿಚಕ್ರ ವಾಹನ ಹಾಗೂ ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ಉರ್ವಾದ ಚಿಲಿಂಬಿ- ಮಠದಕಣಿ ಕ್ರಾಸ್ ರೋಡ್ ನಲ್ಲಿ ನಡೆದಿದೆ.

. Ad Widget .

ವಿವೇಕಾನಂದ ಶೆಣೈ (63) ಎಂಬವರು ಈ ಕಾರನ್ನು ಚಲಾಯಿಸುತ್ತಿದ್ದು, ಕೋಟೆಕಣಿಯಿಂದ ಇಳಿಜಾರಿನ ರಸ್ತೆಯಲ್ಲಿ ತೆರಳುತ್ತಿರುವ ವೇಳೆ, ಲೇಡಿಹಿಲ್‌ನಿಂದ ಉರ್ವಾ ಸ್ಟೋರ್ಸ್ ಕಡೆಗೆ ಹೋಗುತ್ತಿದ್ದ ಹೋಂಡಾ ಆಕ್ಟಿವಾಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಆಕ್ಟಿವಾದಲ್ಲಿದ್ದ ಇಬ್ಬರು ಸವಾರರು ರಸ್ತೆ ಬದಿಗೆ ಬಿದ್ದಿದ್ದಾರೆ. ನೀರಿನ ಬಾಟಲ್ ಕಾರಿನ ಬ್ರೇಕ್ ಪೆಡಲ್ ಅಡಿ ಹೋದ ಕಾರಣ ಕಾರಿನ ನಿಯಂತ್ರಣ ಸಿಗದೆ ದಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಲ್ಲದೆ ಅಲ್ಲೆ ನಿಂತಿದ್ದ ಎರಡು ಕಾರುಗಳಿಗೆ ಈ ಕಾರು ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ದ್ವಿಚಕ್ರ ವಾಹನ ಚಾಲಕನಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ 2 ಕಾರು ಹಾಗು ದ್ಬಿಚಕ್ರ ವಾಹನ ಜಖಂಗೊಂಡಿದ್ದು, ಕಾರು ಚಾಲಕ ವಿವೇಕಾನಂದ ಶೆಣೈ ಮೇಲೆ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *