ಕಾರಿನ ಟಯರ್ ಸ್ಫೋಟ – ತಾಯಿ, ಮಗ ದುರ್ಮರಣ

Ad Widget ... ..

ಮೈಸೂರು: ಕಾರಿನ ಟಯರ್ ಸ್ಫೋಟಗೊಂಡು ತಾಯಿ, ಮಗ ಸಾವನ್ನಪ್ಪಿದ ಘಟನೆ ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯ ಬಳಿ ನಡೆದಿದೆ.

Ad Widget

ದೈವಿಕ್(12), ಗುಣಲಕ್ಷ್ಮಿ(35) ಮೃತಪಟ್ಟವರು. ನಿನ್ನೆ ಮುಂಜಾನೆ 4.30 ಸಮಯದಲ್ಲಿ ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯ ಬಳಿ ಕಾರಿನಲ್ಲಿ ಪತಿ ಜಗದೀಶ್ ಜೊತೆಗೆ ಗುಣಲಕ್ಷ್ಮಿ ಮತ್ತು ಮಗ ದೈವಿಕ್ ಸಂಚಾರಿಸುತ್ತಿದ್ದರು. ಈ ವೇಳೆ ಕಾರಿನ ಮುಂಭಾಗದ ಟೈಯರ್ ಗಳು ಸ್ಫೋಟ ಆಗಿದೆ. ಈ ಪರಿಣಾಮ ಕಾರು ಕಂಬಕ್ಕೆ ಗುದ್ದಿದೆ. ಕಾರು ಓಡಿಸುತ್ತಿದ್ದ ಜಗದೀಶ್ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಗುಣಲಕ್ಷ್ಮಿ ಮತ್ತು ದೈವಿಕ್ ಮಾತ್ರ ಕಾರಿನಲ್ಲಿ ಮೃತಪಟ್ಟಿದ್ದಾರೆ.

ಈ ಸಂಬಂಧ ಮೈಸೂರಿನ ಕುವೆಂಪು ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *