ಸಿಎ ಪರೀಕ್ಷೆ‌: ಹೊಸ ಕೋರ್ಸ್ ನಲ್ಲಿ ನಂದಿನಿ ದೇಶಕ್ಕೆ ಟಾಪರ್| ಅಣ್ಣನಿಗೂ 18ನೇ ಸ್ಥಾನ

ಭೋಪಾಲ್: ಇನ್ಸಿಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟ್ಸ್‌ ಆಫ್‌ ಇಂಡಿಯಾದ ಅಖಿಲ ಭಾರತ ಮಟ್ಟದ ಚಾರ್ಟರ್ಡ್‌ ಅಕೌಂಟ್ಸ್‌ (ಸಿಎ) ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಮಂಗಳೂರಿನ ರುಥ್‌ ಕ್ಲೇರ್‌ ಡಿಸಿಲ್ವ ಅವರು ದೇಶಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ.

Ad Widget ... .. Ad Widget .

ಈ ಬಾರಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಇನ್ನು ಹೊಸ ಕೋರ್ಸ್​​ನಲ್ಲಿ ಮಧ್ಯಪ್ರದೇಶದ ಮೊರಿನಾದ ನಂದಿನಿ ಅಗರ್​ವಾಲ್​ ದೇಶಕ್ಕೇ ಟಾಪರ್ ಆಗಿದ್ದಾರೆ​. 800ಕ್ಕೆ 614 ಅಂಕ ಗಳಿಸಿದ ನಂದಿನಿ ಮೊದಲ ಸ್ಥಾನ ಗಳಿಸಿದ್ದರೆ, ಆಕೆಯ 21 ವರ್ಷದ ಅಣ್ಣ ಸಚಿನ್ ಅಗರ್ವಾಲ್ 18ನೇ ಸ್ಥಾನ ಗಳಿಸಿದ್ದಾರೆ. ಈ ಮೂಲಕ ಅಣ್ಣ ತಂಗಿಯ ಈ ಜೋಡಿ ಇಡೀ ದೇಶಕ್ಕೆ ಸ್ಫೂರ್ತಿಯಾಗಿದೆ.

Ad Widget

ಇನ್ನು ಈ ಸಹೋದರ ಸಹೋದರಿಗೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿ ಶುಭ ಕೋರಿದ್ದು, ನಿಮ್ಮಿಬ್ಬರ ಬಗ್ಗೆ ಹೆಮ್ಮೆ ಇದೆ. ನಿಮ್ಮ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ ಎಂದಿದ್ದಾರೆ.

ಈ ಅಣ್ಣ-ತಂಗಿಯ ಜೋಡಿ ಯಾವತ್ತೂ ಒಟ್ಟಿಗೆ ಟಾಪರ್ ಆಗುವ ದಾಖಲೆ ಹೊಂದಿದೆ. ಮೊರೆನಾ ಜಿಲ್ಲೆಯ ವಿಕ್ಟರ್ ಕಾನ್ವೆಂಟ್‌ ಸ್ಕೂಲ್‌ನಲ್ಲಿ ಕಲಿಯುತ್ತಿದ್ದ ಈ ಜೋಡಿ, 2017ರಲ್ಲಿ 12ನೇ ತರಗತಿಯಲ್ಲಿ ಶೇ. 94.5 ರಷ್ಟು ಅಂಕ ಗಳಿಸಿ ಟಾಪರ್ ಆಗಿತ್ತು.

Leave a Comment

Your email address will not be published. Required fields are marked *