ಸುಳ್ಯ: ಪ್ರಾಜೆಕ್ಟ್ ವರ್ಕ್ ನೆಪದಲ್ಲಿ ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗುತಿದ್ದ ಕಾಮುಕ ಶಿಕ್ಷಕ ಹಾಗೂ ಗಂಡನ ಕೃತ್ಯಕ್ಕೆ ಆತನ ಪತ್ನಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಠಾಣೆಯಲ್ಲಿ ವಿಧ್ಯಾರ್ಥಿನಿಯ ತಾಯಿಯಿಂದ ದೂರು ದಾಖಲಾಗಿದೆ .
ಶಿಕ್ಷಕ ಗುರುರಾಜ್ ಪ್ರಾಜೆಕ್ಟ್ ವರ್ಕ್ ನೆಪದಲ್ಲಿ ಸುಮಾರು ಮೂರು ವರ್ಷಗಳಿಂದ ವಿಧ್ಯಾರ್ಥಿನಿಯನ್ನು ತನ್ನ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದು ಅವನ ಕಾಮುಕ ಕೃತ್ಯಕ್ಕೆ ಹೆಂಡತಿಯು ಸಾಥ್ ನೀಡುತ್ತಿದ್ದಳು.
ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿ ಮೊಬೈಲ್ ಮೂಲಕ ಫೋಟೋ ತೆಗೆಯುತ್ತಿದ್ದು ಬಳಿಕ ಫೋಟೋ ತೋರಿಸಿ ಬೆದರಿಸಿ ಮನೆಯಿಂದ ಹಣ ತರುವಂತೆ ಒತ್ತಡ ಹೇರುತ್ತಿದ್ದುದಾಗಿ ಹೇಳಲಾಗಿದೆ. 2018 ರಿಂದ ನಿರಂತರವಾಗಿ ಅತ್ಯಾಚಾರ ಎಸಗಿ ಬೆದರಿಕೆಯನ್ನು ಹಾಕಿ ಹಣಕ್ಕಾಗಿ ಪಿಡಿಸುತ್ತಿದ್ದರೆನ್ನಲಾಗಿದ್ದು
ಈ ಬಗ್ಗೆ ವಿದ್ಯಾರ್ಥಿನಿ ತನ್ನ ಅಮ್ಮನ ಮೂಲಕ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ರಾಯಚೂರು ಮೂಲದ ಗುರುರಾಜ್ ಹಾಗೂ ಅತನ ಪತ್ನಿಯನ್ನು ಸುಬ್ರಹ್ಮಣ್ಯ ಪೋಲಿಸರು ವಶಕ್ಕೆ ಪಡೆದು ಸುಳ್ಯ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.






