ಕೋವಿಡ್ ಸೋಂಕು| ಬೆಂಗಳೂರನ್ನೇ ಮೀರಿಸಿದ ದ.ಕನ್ನಡ|

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1598 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 20 ಸೋಂಕಿತರು ಮೃತಪಟ್ಟಿದ್ದಾರೆ. 1914 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸೋಂಕಿತರ ಪೈಕಿ ದ.ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, ರಾಜಧಾನಿಯನ್ನು ಜಿಲ್ಲೆ ಮೀರಿಸಿದೆ.

Ad Widget ... .. Ad Widget .

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 29,18,525 ಕ್ಕೆ ಏರಿಕೆಯಾಗಿದೆ. ಇದುವರೆಗೆ 36,793 ಸೋಂಕಿತರು ಸಾವನ್ನಪ್ಪಿದ್ದಾರೆ. 28,57,776 ಜನ ಇದುವರೆಗೆ ಗುಣಮುಖರಾಗಿದ್ದಾರೆ. 23,930 ಸಕ್ರಿಯ ಪ್ರಕರಣಗಳು ಇವೆ.ಪಾಸಿಟಿವಿಟಿ ದರ ಶೇಕಡಾ 1.09ರಷ್ಟಿದೆ.

Ad Widget

ರಾಜಧಾನಿ ಬೆಂಗಳೂರಿನಲ್ಲಿ 348 ಜನರಿಗೆ ಸೋಂಕು ತಗುಲಿದೆ. ಒಬ್ಬರು ಮೃತಪಟ್ಟಿದ್ದು, 366 ಜನ ಗುಣಮುಖರಾಗಿ ಬಿಡುಗಡೆ ಯಾಗಿದ್ದಾರೆ. 8493 ಸಕ್ರಿಯ ಪ್ರಕರಣಗಳು ಇವೆ. ಉಡುಪಿ 129, ಮೈಸೂರು 98, ಕೊಡಗು 83, ಹಾಸನ 80, ದಕ್ಷಿಣ ಕನ್ನಡ 438, ಬೆಂಗಳೂರು ನಗರ 348 ಪ್ರಕರಣಗಳು ಪತ್ತೆಯಾಗಿವೆ.

ಜಿಲ್ಲಾವಾರು‌ ನೋಡುವುದಾದರೆ ಬಾನುವಾರ ಬಾಗಲಕೋಟೆ 2, ಬೀದರ್ 2, ಧಾರವಾಡ 7, ಗದಗ 1, ಹಾವೇರಿ 2, ಕಲಬುರ್ಗಿ 5, ಕೊಪ್ಪಳ 7, ರಾಯಚೂರು 4, ರಾಮನಗರ 0, ವಿಜಯಪುರ 1, ಯಾದಗಿರಿ ಜಿಲ್ಲೆಯಲ್ಲಿ 1 ಪ್ರಕರಣ ವರದಿಯಾಗಿದೆ.

ಒಟ್ಟು ಸಾವಿನ ಪೈಕಿ ಬೆಳಗಾವಿ 1, ಬೆಂಗಳೂರು ನಗರ 1, ದಕ್ಷಿಣಕನ್ನಡ 6, ದಾವಣಗೆರೆ 1, ಧಾರವಾಡ 2, ಹಾಸನ 3, ಕೋಲಾರ 3, ಮೈಸೂರು 1, ಹಾಗೂ ಉತ್ತರಕನ್ನಡದಲ್ಲಿ 2 ವರದಿಯಾಗಿವೆ.

Leave a Comment

Your email address will not be published. Required fields are marked *