July 2021

ಮೋದಿ ಸಂಪುಟ 2.0: ಯಾರಿಗೆ ಯಾವ ಖಾತೆ? ಇಲ್ಲಿದೆ ಡೀಟೈಲ್ ವರದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟಕ್ಕೆ ನೂತನ 15 ಸಾರಥಿಗಳು ಸೇರ್ಪಡೆಯಾಗಿದ್ದಾರೆ. ಇಂತಹ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಯಾರಿಗೆ ಯಾವ ಖಾತೆ ನೀಡಲಾಗಿದೆ ಎಂಬುದರ ಡೀಟೈಲ್ ಇಲ್ಲಿದೆ. ಉನ್ನತ ವರದಿಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಮೇಲೆ ನಿಗಾ ಇಡಲಿದ್ದು, ಅಮಿತ್ ಶಾ ಅವರು ಗೃಹ ಸಚಿವಾಲಯದ ಜೊತೆಗೆ ಸಹಕಾರ ಸಚಿವಾಲಯದ ಮೇಲೆ ನಿಗಾ ಇಡಲಿದ್ದಾರೆ. ಮನ್ಸುಖ್ ಮಾಂಡವಿಯಾ ಅವರು ಕೇಂದ್ರ […]

ಮೋದಿ ಸಂಪುಟ 2.0: ಯಾರಿಗೆ ಯಾವ ಖಾತೆ? ಇಲ್ಲಿದೆ ಡೀಟೈಲ್ ವರದಿ Read More »

ಐಎಂಎ ವಂಚನೆ ಪ್ರಕರಣ: ರೋಷನ್ ಬೇಗ್ ಆಸ್ತಿ‌ ಮುಟ್ಟುಗೋಲು

ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ‌ ಸಚಿವ ರೋಷನ್ ಬೇಗ್ ಆಸ್ತಿಯನ್ನು ಸರ್ಕಾರ ಬುಧವಾರ ಜಪ್ತಿ‌ ಮಾಡಿದೆ. ಪ್ರಕರಣದಲ್ಲಿ 36ನೇ ಆರೋಪಿಯಾಗಿರುವ ರೋಷನ್ ಬೇಗ್ ರ ಬ್ಯಾಂಕ್ ಖಾತೆ ಹಾಗೂ‌ ಸ್ಥಿರಾಸ್ತಿಯನ್ನ ಜಪ್ತಿ‌ ಮಾಡಲಾಗಿದ್ದು, ಎಷ್ಟು ಮೊತ್ತದ ಆಸ್ತಿ ಜಪ್ತಿಯಾಗಿದೆ ಎಂಬುದು ತಿಳಿದುಬಂದಿಲ್ಲ. ಐಎನ್ಎ ಸಂಸ್ಥಾಪಕ ಹಾಗೂ ಪ್ರಕರಣದ ಪ್ರಮುಖ ‌ಆರೋಪಿ ಮನ್ಸೂರ್ ಅಲಿಖಾನ್ ನಿಂದ ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದಾರೆ ಅನ್ನೋದು‌ ಸಾಬೀತಾದ ಬಳಿಕ ಕೋರ್ಟ್ ಆಸ್ತಿ ಜಪ್ತಿಗೆ ಆದೇಶಿಸಿತ್ತು. ಅದರಂತೆ ಇದೀಗ

ಐಎಂಎ ವಂಚನೆ ಪ್ರಕರಣ: ರೋಷನ್ ಬೇಗ್ ಆಸ್ತಿ‌ ಮುಟ್ಟುಗೋಲು Read More »

ಮಡಿಕೇರಿ: ಅಕ್ರಮ‌ ಗಾಂಜಾ ಬೆಳೆ ಪತ್ತೆ, ಆರೋಪಿ ‌ವಶಕ್ಕೆ

ಮಡಿಕೇರಿ: ಮನೆಗೆ ಸಮೀಪದಲ್ಲಿರುವ ತೋಟದಲ್ಲಿ ಗಾಂಜಾ ಗಿಡ ಬೆಳೆದಿರುವದನ್ನು ಪತ್ತೆ ಹಚ್ಚಿದ ಮಡಿಕೇರಿ ಗ್ರಾಮಾಂತರ ಪೋಲಿಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮೂರ್ನಾಡು ಸಮೀಪದ ಕಟ್ಟೆಮಾಡು ಗ್ರಾಮದ ಕೊಪ್ಪಂಗೇರಿ ಪೈಸಾರಿ ನಿವಾಸಿ ಎಚ್.ಎಸ್.ಲೋಕೇಶ್ ಅಣ್ಣಯ್ಯ ಬಂಧಿತ ಆರೋಪಿ.ಲೋಕೇಶ್ ತನ್ನ ಮನೆಯ ಸಮೀಪವಿರುವ ತೋಟದಲ್ಲಿ ಗಾಂಜಾ ಗಿಡ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೋಲಿಸರು ದಾಳಿ ಮಾಡಿದ್ದಾರೆ. ಈ ಸಂದರ್ಭ ತೋಟದಲ್ಲಿ ಎರಡು ಬೆಳೆದು ಕಟಾವಿಗೆ ಬಂದಿರುವ ಗಿಡಗಳು ಪತ್ತೆಯಾಗಿವೆ. ಗಿಡಗಳನ್ನು ವಶಪಡಿಸಿಕೊಂಡ ಪೋಲಿಸರು, ಆರೋಪಿ ಲೋಕೇಶ್‌ನನ್ನು ಬಂಧಿಸಿ ಮುಂದಿನ

ಮಡಿಕೇರಿ: ಅಕ್ರಮ‌ ಗಾಂಜಾ ಬೆಳೆ ಪತ್ತೆ, ಆರೋಪಿ ‌ವಶಕ್ಕೆ Read More »

ರಾಜ್ಯ ರಾಜಕಾರಣಕ್ಕೆ ವಾಪಾಸ್ಸಾಗ್ತಾರಾ‌ ಡಿ.ವಿ.ಎಸ್?ರಾಜೀನಾಮೆ ಬೆನ್ನಲ್ಲೇ ಗರಿಗೆದರಿದ ರಾಜ್ಯ ರಾಜಕೀಯ.

ಬೆಂಗಳೂರು. ಕೇಂದ್ರ ಸಚಿವ ಸಂಪುಟಕ್ಕೆ ಡಿ.ವಿ ಸದಾನಂದ ಗೌಡ ರಾಜೀನಾಮೆ ನೀಡಿರುವ‌ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಬೆಳವಣಿಗೆಗಳು ಗರಿಗೆದರಿವೆ. ಕೇಂದ್ರ. ಮಂತ್ರಿಯಾಗಿದ್ದ ಸದಾನಂದ ಗೌಡರು ರಾಜೀನಾಮೆ ನೀಡಿದ್ದು, ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಾರೆ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ಈಗಾಗಲೇ ಯಡಿಯೂರಪ್ಪರವರನ್ನು ಕೆಳಗಿಳಿಸುವ ಕುರಿತಂತೆ ಹಲವು ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿದ್ದು, ಈ ಬೆಳವಣಿಗೆಗಳನ್ನು ಬಿಜೆಪಿ ದೆಹಲಿ ಹೈಕಮಾಂಡ್ ಕೂಲಂಕುಷವಾಗಿ ಪರಿಶೀಲಿಸುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ನಾಯಕರು ಹಲವು ಬಾರಿ‌ ಬೆಂಗಳೂರಿಗೂ, ರಾಜ್ಯನಾಯಕರು ದೆಹಲಿಗೂ‌ ಪರೇಡ್ ನಡೆಸಿರುವುದು ಗೊತ್ತೇ

ರಾಜ್ಯ ರಾಜಕಾರಣಕ್ಕೆ ವಾಪಾಸ್ಸಾಗ್ತಾರಾ‌ ಡಿ.ವಿ.ಎಸ್?ರಾಜೀನಾಮೆ ಬೆನ್ನಲ್ಲೇ ಗರಿಗೆದರಿದ ರಾಜ್ಯ ರಾಜಕೀಯ. Read More »

ಕೇಂದ್ರ ಸಚಿವ ಸ್ಥಾನಕ್ಕೆ ಸದಾನಂದ ಗೌಡರು ಸೇರಿದಂತೆ ನಾಲ್ಕು ಸಚಿವರು ರಾಜೀನಾಮೆ; ಕರ್ನಾಟಕದಿಂದ ಇಬ್ಬರೂ ಸಚಿವ ಸಂಪುಟಕ್ಕೆ ಸೇರ್ಪಡೆ; ಇಂದು ನೂತನ ಸಚಿವರ ಪ್ರಮಾಣ ವಚನ

ನವದೆಹಲಿ: ಕೇಂದ್ರ ಸಚಿವ ಸ್ಥಾನಕ್ಕೆ ಸದಾನಂದ ಗೌಡ, ರಮೇಶ್ ಪೋಖ್ರಿಯಾಲ್ ನಿಶಾಂಕ್ ರಾಜೀನಾಮೆ ನೀಡಿದ್ದಾರೆ. ಸಚಿವ ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಇವರಿಬ್ಬರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅನಾರೋಗ್ಯ ಸಮಸ್ಯೆ ಹಿನ್ನೆಲೆ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರನ್ನು ಕೈಬಿಡಲು ಯೋಚಿಸಲಾಗಿದೆ ಎಂಬ ಸುದ್ದಿ ಈ ಹಿಂದೆಯೇ ಹೊರಬಿದ್ದಿತ್ತು. ಅದಕ್ಕೆ ಪೂರಕವಾಗಿ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೇವೇಳೆ, ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಸ್ಥಾನಕ್ಕೆ

ಕೇಂದ್ರ ಸಚಿವ ಸ್ಥಾನಕ್ಕೆ ಸದಾನಂದ ಗೌಡರು ಸೇರಿದಂತೆ ನಾಲ್ಕು ಸಚಿವರು ರಾಜೀನಾಮೆ; ಕರ್ನಾಟಕದಿಂದ ಇಬ್ಬರೂ ಸಚಿವ ಸಂಪುಟಕ್ಕೆ ಸೇರ್ಪಡೆ; ಇಂದು ನೂತನ ಸಚಿವರ ಪ್ರಮಾಣ ವಚನ Read More »

ಮಾಜಿ ಕೇಂದ್ರ ಸಚಿವರ‌ ಪತ್ನಿ‌ ಬರ್ಬರ ಹತ್ಯೆ. ಮನೆ ದರೋಡೆ

ನವದೆಹಲಿ: ಕೇಂದ್ರದ ಮಾಜಿ ಸಚಿವ, ಬಿಜೆಪಿ ನಾಯಕ ದಿವಂಗತ ಪಿ.ರಂಗರಾಜನ್ ಕುಮಾರಮಂಗಲಂ ಅವರ ಪತ್ನಿಯನ್ನು ಮಂಗಳವಾರ ರಾತ್ರಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಿಟ್ಟಿ ಕುಮಾರಮಂಗಲಂ ಮೃತರು. 2000ರ ಆಗಸ್ಟ್​ 23ರಂದು ಪಿ.ರಂಗರಾಜನ್ ಮೃತಪಟ್ಟಿದ್ದರು. ಕಿಟ್ಟಿ ಕುಮಾರಮಂಗಲಂ ಅವರು ವೃತ್ತಿಯಲ್ಲಿ ವಕೀಲರಾಗಿದ್ದರು. ದೆಹಲಿಯ ವಸಂತ ವಿಹಾರದಲ್ಲಿರುವ ಅವರ ನಿವಾಸದಲ್ಲಿ ಕಳೆದ ರಾತ್ರಿ ಹತ್ಯೆಗೀಡಾಗಿದ್ದು, ಇದುವರೆಗೆ ಓರ್ವ ಶಂಕಿತನನ್ನು ಬಂಧಿಸಿ ಮತ್ತಿಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ನೈರುತ್ಯ ವಲಯ ಡಿಸಿಪಿ ತಿಳಿಸಿದ್ದಾರೆ. ನಿನ್ನೆ ರಾತ್ರಿ 8.30ರ ಸುಮಾರಿಗೆ ಲಾಂಡ್ರಿಮ್ಯಾನ್

ಮಾಜಿ ಕೇಂದ್ರ ಸಚಿವರ‌ ಪತ್ನಿ‌ ಬರ್ಬರ ಹತ್ಯೆ. ಮನೆ ದರೋಡೆ Read More »

ಕೇಂದ್ರ ಸಚಿವೆಯಾಗಿ ಶೋಭಾ ಕರಂದ್ಲಾಜೆ ?ಪ್ರಧಾನಿ ನಿವಾಸಕ್ಕೆ ಶೋಭಾ ಸ್ಮೈಲ್ ಗೌಡರಿಗೆ ಗೇಟ್ ಪಾಸ್? ಸಿ.ಡಿ ತಂದಿತೇ ಕಂಠಕ?

ಮಂಗಳೂರು : ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮೋದಿ ಸಂಪುಟಕ್ಕೆ ಸೇರುವುದು ಬಹುತೇಕ ಖಚಿತವಾಗಿದೆ. ಮೂಲತ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕರಂದ್ಲಾಜೆ ದಿ. ಮೋನಪ್ಪ ಗೌಡ ಹಾಗೂ ಪೂವಕ್ಕ ದಂಪತಿಯ ಪುತ್ರಿಯಾದ ಕರಂದ್ಲಾಜೆ ಮೊದಲ ಭಾರಿಗೆ ಎಂಎಲ್‌ಸಿಯಾಗಿ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದರು. ಇದೀಗ ರಾಜಕೀಯದಲ್ಲಿ ಹೋರಾಟದ ಮೂಲಕ ಹಂತ ಹಂತವಾಗಿ ಮೇಲೇರಿದರು. ಯಶವಂತಪುರದ ಶಾಸಕಿಯಾಗಿ ಯಡಿಯೂರಪ್ಪ ಸರ್ಕಾರದಲ್ಲಿ ಮೊದಲ ಬಾರಿ ಸಚಿವೆಯಾದರು. ಗ್ರಾಮೀಣಾಭಿವೃದ್ಧಿ, ಇಂಧನ ಸಚಿವೆಯಾಗಿ ಕರ್ತವ್ಯ ನಿರ್ವಹಿಸಿದರು. ನಂತರ ರಾಜಕೀಯ ಅಸ್ಥಿರತೆ ಎದುರಾದಾಗ ಯಡಿಯೂರಪ್ಪರ

ಕೇಂದ್ರ ಸಚಿವೆಯಾಗಿ ಶೋಭಾ ಕರಂದ್ಲಾಜೆ ?ಪ್ರಧಾನಿ ನಿವಾಸಕ್ಕೆ ಶೋಭಾ ಸ್ಮೈಲ್ ಗೌಡರಿಗೆ ಗೇಟ್ ಪಾಸ್? ಸಿ.ಡಿ ತಂದಿತೇ ಕಂಠಕ? Read More »

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ

ಮಂಗಳೂರು : ನಿನ್ನೆ ತಡರಾತ್ರಿ ಹಳೆಯ ವಿಮಾನ ನಿಲ್ದಾಣದ ಎಟಿಎಸ್ ವಿಭಾಗದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ಅಕ್ರಮ ಪ್ರವೇಶ ಆರೋಪದಡಿ ಪ್ರಕರಣ ದಾಖಲಾಗಿದೆ. ವಶಕ್ಕೊಳಗಾದ ವ್ಯಕ್ತಿಯನ್ನು ಪಶ್ಚಿಮ ಬಂಗಾಳದ ಮುರ್ಸಿದಾಬಾದ್‌ನ ಬಧುಹಾ ಗ್ರಾಮದ ರಾಕೇಶ್ ಎಂದು ಗುರುತಿಸಲಾಗಿದೆ. ರಾತ್ರಿ ಸಿಐಎಸ್‌ಎಫ್ ಸಿಬ್ಬಂದಿಯು ಗಸ್ತು ತಿರುಗುತ್ತಿದ್ದಾಗ ರನ್‌ವೇ ಕಾಮಗಾರಿ ನಡೆಯುತ್ತಿದ್ದ ಹಳೆಯ ವಿಮಾನ ನಿಲ್ದಾಣದ ಎಟಿಎಸ್ ವಿಭಾಗದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕಂಡುಬAದಿದ್ದನು. ಕೂಡಲೇ ಆತನನ್ನು ಹಿಡಿದು ವಿಚಾರಿಸಿದಾಗ ತಾನು ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ Read More »

ಪುತ್ತೂರು: ಬಿನ್ನ ಕೋಮಿನ ಯುವಕರ ನಡುವೆ ಜಗಳ- ತಲವಾರು ದಾಳಿ

ಪುತ್ತೂರು: ಬಿನ್ನ ಕೋಮಿನ ಯುವಕರ ನಡುವೆ ಜಗಳ ನಡೆದು ಬಳಿಕ ಸ್ಥಳೀಯ ಅಂಗಡಿಯಲ್ಲಿದ್ದ ಯುವಕರ ಮೇಲೆ ಇಬ್ಬರು ಯುವಕರು ತಲವಾರಿನಿಂದ ಹಲ್ಲೆಗೆ ಯತ್ನಿಸಿದ ಘಟನೆ ಜು.6ರಂದು ಪುತ್ತೂರಿನ ಹೊರವಲಯ ಬನ್ನೂರು ಜೈನರಗುರಿ ಸಮೀಪ ನಡೆದಿದೆ. ಫಯಾಝ್ ಎಂಬವರು ದೂರು ನೀಡಿದ್ದೂ ಅಭಿಜಿತ್ ಮತ್ತು ಶರತ್ ತಲವಾರು ಪ್ರದರ್ಶಿಸುತ್ತಾ ಬೆದರಿಕೆಯೊಡ್ಡಿದ್ದಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ದೂರು ಸ್ವೀಕರಿಸಿರುವ ಪುತ್ತೂರು ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ನಿನ್ನೆ ರಾತ್ರಿ ಒಂದು ಕೋಮಿಗೆ ಸೇರಿದ ಯುವಕರ ಗುಂಪೊAದು ಬನ್ನೂರು

ಪುತ್ತೂರು: ಬಿನ್ನ ಕೋಮಿನ ಯುವಕರ ನಡುವೆ ಜಗಳ- ತಲವಾರು ದಾಳಿ Read More »

ದ.ಕ.: ಮೊದಲ ಕೊರೊನಾ `ಮಿಸ್ – ಸಿ’ ಪ್ರಕರಣ: ಬಾಲಕಿಗೆ ಯಶಸ್ವಿ ಚಿಕಿತ್ಸೆ

ಮಂಗಳೂರು: ಕೊರೊನಾ ಭಾದಿತ ಮಕ್ಕಳಲ್ಲಿ ಕಾಣಿಸಿಕೊಳ್ಳುವಂತಹ ಬರುವ ಮಿಸ್- ಸಿ (ಮಲ್ಟಿ ಸಿಸ್ಟಂ ಇನ್ ಪ್ಲೋ ಮ್ಯಾಟರಿ ಸಿಂಡ್ರೋಮ್ ) ಪ್ರಕರಣದ ಕಾಣಿಸಿಕೊಂಡ ೧೬ ವರ್ಷದ ಬಾಲಕಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ಜಿಲ್ಲೆಯಲ್ಲಿ ಕಾಣಿಸಿಕೊಂಡ ಮಿಸ್ – ಸಿ ಮೊದಲ ಪ್ರಕರಣವಿದು ಎನ್ನಲಾಗಿದೆ. ಬಾಲಕಿ ಶ್ವಾಸಕೋಶದ ಸಮಸ್ಯೆಯಿಂದಾಗಿ ಜೂ.16 ರಂದು ವೆನ್ಲಾಕ್‌ಗೆ ದಾಖಲಾಗಿದ್ದಳು. ಕೋವೀಡ್ ಚಿಕಿತ್ಸೆ ನೀಡಿದ ಅನಂತರ ನ್ಯುಮೋನಿಯ, ಶ್ವಾಸಕೋಶದ ಸಮಸ್ಯೆ, ಮೆದುಳಿನಲ್ಲಿ ಸಮಸ್ಯೆ, ಹಿಮೋಗ್ಲೋಬೀನ್ ಸಮಸ್ಯೆ ಸೇರಿದಂತೆ ಕೆಲವೊಂದು ಸಮಸ್ಯೆ ಕಾಣಿಸಿಕೊಂಡಿತ್ತು.

ದ.ಕ.: ಮೊದಲ ಕೊರೊನಾ `ಮಿಸ್ – ಸಿ’ ಪ್ರಕರಣ: ಬಾಲಕಿಗೆ ಯಶಸ್ವಿ ಚಿಕಿತ್ಸೆ Read More »