ಕುಂದಾಪುರ: ವಿವಾಹಿತನೊಂದಿಗೆ ಯುವತಿ ಪರಾರಿ

ಕುಂದಾಪುರ: ವಿವಾಹಿತನೊಂದಿಗೆ ಯುವತಿಯೋರ್ವಳು ಪರಾರಿಯಾದ ಘಟನೆ ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದಿದೆ.

. Ad Widget . Ad Widget . Ad Widget

ಆಲೂರು ಗ್ರಾಮದ ಹಳ್ಳಿ ಹೆಬ್ಬಾಗಿಲು ನಿವಾಸಿ ಚಂದ್ರ (೪೨) ಹಾಗೂ ನೆರೆಮನೆಯಲ್ಲಿ ವಾಸಿಸುತ್ತಿದ್ದ ವನಜಾ (೨೯) ಎಂಬವರು ಒಂದ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಜೂನ್ ೭ರಂದು ಚಂದ್ರ ಪೇಟೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆ ಬಿಟ್ಟು ನಾಪತ್ತೆಯಾಗಿದ್ದಾರೆ. ಅದೇ ದಿನ ವನಜಾ ಕೂಡಾ ಪೇಟೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದು, ಇಬ್ಬರೂ ಕೂಡಾ ಇಲ್ಲಿಯವರೆಗೆ ಮನೆಗೆ ವಾಪಾಸ್ಸಾಗದೇ ನಾಪಾತ್ತೆಯಾಗಿದ್ದಾರೆ ಎಂದು ಚಂದ್ರ ಅವರ ಪತ್ನಿ ಬಾಬಿ ತಿಳಿಸಿದ್ದಾರೆ.

. Ad Widget .

ಘಟನೆ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಣೆಯಾದ ಜೋಡಿಯನ್ನು ಪತ್ತೆಹಚ್ಚುತ್ತಿದ್ದಾರೆ.

Leave a Comment

Your email address will not be published. Required fields are marked *