Karavali

Mangaluru : ಪೊಲೀಸರಿಗೆ ಕಾರು ಡಿಕ್ಕಿ, ಓರ್ವ ಗಂಭೀರ 

ಸಮಗ್ರ ನ್ಯೂಸ್ : ನಗರದ ಮಣ್ಣಗುಡ್ಡದ ಗೋದಾಮು ಸಮೀಪ ಮೇ. 27ರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಸಂಚಾರ ಪೊಲೀಸರು ಗಾಯಗೊಂಡಿದ್ದು, ಓರ್ವರ ಸ್ಥಿತಿ ಗಂಭೀರವಾಗಿದೆ. ಮಂಗಳೂರು ನಗರ ಸಂಚಾರ ಪಶ್ಚಿಮ ಠಾಣೆಯ ಹೆಡ್ ಕಾನ್‌ಸ್ಟೆಬಲ್ ವಿಠಲ್ ದಾಸ್ ಹಾಗೂ ಕಾನ್‌ಸ್ಟೆಬಲ್ ಕುಮಾರ್ ಗಾಯಗೊಂಡವರು. ಇವರಲ್ಲಿ ವಿಠಲ್ ದಾಸ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರ ಮಾಹಿತಿ ಪ್ರಕಾರ, ಮಂಗಳವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಮತ್ತೊಂದು […]

Mangaluru : ಪೊಲೀಸರಿಗೆ ಕಾರು ಡಿಕ್ಕಿ, ಓರ್ವ ಗಂಭೀರ  Read More »

ಪುತ್ತೂರು: ವಿದ್ಯುತ್ ಶಾಕ್‌ನಿಂದ ಯುವಕ ಮೃತ್ಯು

ಸಮಗ್ರ ನ್ಯೂಸ್ : ವಿದ್ಯುತ್ ಶಾಕ್‌ನಿಂದ ಯುವಕ ಮೃತಪಟ್ಟ ಘಟನೆ  ನಿಡಳ್ಳಿ ಗ್ರಾಮದ ಬೋಳುಂಬುಡೆಯಲ್ಲಿ ಘಟನೆ ಮೇ 24ರ ರಾತ್ರಿ ಸಂಭವಿಸಿದೆ. ಬೇಲೂರಿನ ಅಂಕಿಹಳ್ಳಿ ನಿವಾಸಿ ಜೋಕಿಂ ಪಿಂಟೋ ಅವರ ಪುತ್ರ ರೋಶನ್ ಪಿಂಟೋ (29) ಮೃತಪಟ್ಟ ಯುವಕ.ಜೋಕಿಂ ಅವರು ಪತ್ನಿ ಇಬ್ಬರು ಮಕ್ಕಳೊಂದಿಗೆ ಅವರ ಮಾವನ ಮನೆ ನಿಡಳ್ಳಿಯ ಬೋಳುಂಬುಡೆಗೆ ಬಂದಿದ್ದರು. ರೋಶನ್ ರಾತ್ರಿ ಸ್ಥಾನ ಮುಗಿಸಿ ಬಟ್ಟೆ ಒಗೆಯುವ ಸ್ಥಳಕ್ಕೆ ಹೋದಾಗ ಅಲ್ಲಿದ್ದ ವಿದ್ಯುತ್ ವಯರ್ ನಿಂದ ಶಾಕ್ ಹೊಡೆದು ನೆಲಕ್ಕೆ ಬಿದ್ದಿರುವುದಾಗಿ ತಿಳಿದುಬಂದಿದೆ. ಗಂಭೀರ ಗಾಯಗೊಂಡ

ಪುತ್ತೂರು: ವಿದ್ಯುತ್ ಶಾಕ್‌ನಿಂದ ಯುವಕ ಮೃತ್ಯು Read More »

ದುಬೈನಲ್ಲಿ ರಸ್ತೆ ಅಪಘಾತ: ಕೋಮಾದಲ್ಲಿದ್ದ ಮಂಗಳೂರಿನ ಯುವತಿ ಸಾವು

ಸಮಗ್ರ ನ್ಯೂಸ್ : ದುಬೈನಲ್ಲಿ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಕೆಲವು ತಿಂಗಳುಗಳಿಂದ ಕೋಮಾದಲ್ಲಿದ್ದ ಯುವತಿಯೊಬ್ಬರು ಮೇ 24 ರಂದು ನಿಧನರಾಗಿದ್ದಾರೆ. ಮೃತರನ್ನು ಕಿನ್ನಿಗೋಳಿಯ ಪುನರೂರಿನ ವಾಸುದೇವ ಅಗ್ರಹಾರ ನಿವಾಸಿ ಶ್ರೀಲತಾ ತಂತ್ರಿ (26) ಎಂದು ಗುರುತಿಸಲಾಗಿದೆ. ಇವರು ಭರತನಾಟ್ಯ ಹಾಗೂ ಯಕ್ಷಗಾನ ಕಲಾವಿದೆಯಾಗಿದ್ದು, ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದರು. ದುಬೈನಲ್ಲಿ ಉದ್ಯೋಗದಲ್ಲಿದ್ದ ಶ್ರೀಲತಾ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಅಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದರು. ಪ್ರಾರಂಭದಲ್ಲಿ ಅವರಿಗೆ ದುಬೈನಲ್ಲೇ ಚಿಕಿತ್ಸೆ ನೀಡಲಾಗಿತ್ತು.

ದುಬೈನಲ್ಲಿ ರಸ್ತೆ ಅಪಘಾತ: ಕೋಮಾದಲ್ಲಿದ್ದ ಮಂಗಳೂರಿನ ಯುವತಿ ಸಾವು Read More »

ಬೆಳ್ತಂಗಡಿ: ಜೂ.1ರಿಂದ ಚಾರಣಿಗರ ನಿರ್ಬಂಧ ತೆರವು

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ಚಾರಣ ಸ್ಥಳ, ಪ್ರಮುಖ ಜಲಪಾತ ಜೂನ್‌ 1 ರಿಂದ ಪ್ರವಾಸಿಗರ ವೀಕ್ಷಣೆಗೆ ತೆರೆದುಕೊಳ್ಳಲಿದೆ. ಕಳೆದ ಜನವರಿಯಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದಿಂದ ನೇತ್ರಾವತಿ ಪೀಕ್‌, ಬಂಡಾಜೆ ಜಲಪಾತ, ಗಡಾಯಿಕಲ್ಲು ಮೊದಲಾದ ಸ್ಥಳಗಳಿಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು. ಬೇಸಿಗೆಯಲ್ಲಿ ಬೆಂಕಿ ಪ್ರಕರಣ, ಕಾಡ್ಗಿಚ್ಚು ಇತ್ಯಾದಿ ಅನಾಹುತಗಳು ನಡೆಯದಂತೆ ಹಾಗೂ ಹುಲಿಗಣತಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ತಾಲೂಕಿನ ಮಲವಂತಿಗೆ ಗ್ರಾಮ ಅತೀ ಹೆಚ್ಚು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಇದು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ

ಬೆಳ್ತಂಗಡಿ: ಜೂ.1ರಿಂದ ಚಾರಣಿಗರ ನಿರ್ಬಂಧ ತೆರವು Read More »

ಮಂಗಳೂರು: ಮತಾಂತರಗೊಳಿಸಿ ಲೈಂಗಿಕ ಕಿರುಕುಳ| ಮುಸ್ಲಿಂ ಯುವಕನ ವಿರುದ್ದ ದೂರಿತ್ತ ಯುವತಿ

ಸಮಗ್ರ ನ್ಯೂಸ್: ಮತಾಂತರಗೊಳಿಸಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಯುವತಿಯೋರ್ವಳು ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಬಿಕರ್ನಕಟ್ಟೆಯಲ್ಲಿರುವ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾಗ ಬಿಕರ್ನಕಟ್ಟೆಯ ಕೈಕಂಬದಲ್ಲಿರುವ ಖಲೀಲ್‌ನ ಮೊಬೈಲ್‌ ಶಾಪ್‌ನಲ್ಲೇ ಮೊಬೈಲ್‌ ರಿಚಾರ್ಜ್‌ ಮಾಡುತ್ತಿದ್ದೆ.ಆಗ ಖಲೀಲ್‌ನ ಪರಿಚಯವಾಗಿತ್ತು. 2021ರ ಜ.14ರಂದು ಖಲೀಲ್‌ ಒಳ್ಳೆಯ ಕೆಲಸ ಮತ್ತು ಹಣ ಕೊಡುವುದಾಗಿ ಆಮಿಷವೊಡ್ಡಿ ಪುಸಲಾಯಿಸಿ ಆತನ ಕುಟುಂಬದ ಮನೆಯಾದ ಕಲ್ಲಾಪುಗೆ ಕರೆದುಕೊಂಡು ಹೋಗಿ ಅಲ್ಲಿದ್ದ ಮಹಿಳೆಯರಿಗೆ ಪರಿಚಯಿಸಿದ. ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು, ಕುರಾನ್‌ ಓದಲು ಒತ್ತಾಯ ಮಾಡಿ ನಮಾಝ್ ಮಾಡಿಸಿದ್ದ.

ಮಂಗಳೂರು: ಮತಾಂತರಗೊಳಿಸಿ ಲೈಂಗಿಕ ಕಿರುಕುಳ| ಮುಸ್ಲಿಂ ಯುವಕನ ವಿರುದ್ದ ದೂರಿತ್ತ ಯುವತಿ Read More »

ಮೀನುಗಾರಿಕೆಗೆ ಈ ವರ್ಷವೂ ಆರಂಭದಲ್ಲೇ ಅಡ್ಡಿ| ಕಡಲಿಗಿಳಿಯದೆ ದಡದಲ್ಲೇ ಉಳಿದ ಬೋಟುಗಳು|ಹೋದ ದೋಣಿಗಳೂ ಬರಿಗೈಯಲ್ಲಿ ವಾಪಸ್‌

ಉಡುಪಿ: ಮಳೆ, ಗಾಳಿಯಿಂದಾಗಿ ಸಮುದ್ರ ಪ್ರಕ್ಷುಬ್ಧವಾಗಿದ್ದು, ಯಾಂತ್ರಿಕ ಮೀನುಗಾರಿಕೆ ಆರಂಭದ ದಿನದಲ್ಲೇ ಅಡಚಣೆ ಉಂಟಾಗಿದೆ. 61 ದಿನಗಳ ರಜೆಯ ಬಳಿಕ ಬಹು ನಿರೀಕ್ಷೆಯೊಂದಿಗೆ ಆ. 1ರಿಂದ ಕಡಲಿಗಿಳಿಯಬೇಕಿದ್ದ ಮೀನುಗಾರರಿಗೆ ನಿರಾಶೆಯಾಗಿದೆ. ದೋಣಿಗಳನ್ನು ಕಡಲಿಗೆ ಇಳಿಸುವುದು ವಿಳಂಬವಾಗುತ್ತಿರುವುದರಿಂದ ಮಂಜುಗಡ್ಡೆ ವ್ಯವಹಾರ, ಮೀನು ಸಾಗಾಟ ವ್ಯವಸ್ಥೆ, ಮಾರಾಟಗಾರರು ಸೇರಿದಂತೆ ಮೀನುಗಾರಿಕೆಗೆ ಅವಲಂಬಿತ ಕ್ಷೇತ್ರಗಳೆಲ್ಲವೂ ಹಿನ್ನೆಡೆ ಕಂಡಿವೆ. ಕಳೆದ ಋತುವಿನಲ್ಲಿ ಮೀನಿನ ಕ್ಷಾಮದ ಜತೆಗೆ ಚಂಡಮಾರುತದಿಂದಾಗಿ ಪದೇಪದೆ ಸಮುದ್ರ ಪ್ರಕ್ಷುಬ್ಧವಾಗಿದ್ದು ಮೀನುಗಾರರು ಸಂಕಷ್ಟ ಎದುರಿಸಿದ್ದರು. ಈ ಋತುವಿನ ಆರಂಭವೂ ಅದೇ ರೀತಿ

ಮೀನುಗಾರಿಕೆಗೆ ಈ ವರ್ಷವೂ ಆರಂಭದಲ್ಲೇ ಅಡ್ಡಿ| ಕಡಲಿಗಿಳಿಯದೆ ದಡದಲ್ಲೇ ಉಳಿದ ಬೋಟುಗಳು|ಹೋದ ದೋಣಿಗಳೂ ಬರಿಗೈಯಲ್ಲಿ ವಾಪಸ್‌ Read More »