Death news

ಹಿರಿಯ ಪತ್ರಕರ್ತ, ಸಾಹಿತಿ ಉದಯ ಧರ್ಮಸ್ಥಳ ಇನ್ನಿಲ್ಲ

ಸಮಗ್ರ ನ್ಯೂಸ್: ಹಿರಿಯ ಪತ್ರಕರ್ತ, ಸಾಹಿತಿ ಉದಯ ಧರ್ಮಸ್ಥಳ (64) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ಮೂಲತಃ ಧರ್ಮಸ್ಥಳದವರಾದ ಅವರು ಬೆಂಗಳೂರಿನ ಮಾರತಹಳ್ಳಿಯಲ್ಲಿ ನೆಲೆಸಿದ್ದರು. ಸನಾತನ ಸಾರಥಿ ಪತ್ರಿಕೆಯ ಸಂಪಾದಕರಾಗಿದ್ದ ಅವರು ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದ ಸಾಹಿತ್ಯ ಕೃಷಿಯಲ್ಲೂ ತೊಡಗಿಸಿಕೊಂಡಿದ್ದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ತುಳುವನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರ್ಪಡೆ ಮಾಡುವುದಕ್ಕೆ ಸಂಬಂಧಿಸಿದ ಹೋರಾಟದಲ್ಲೂ ಸಕ್ರಿಯರಾಗಿದ್ದರು. ಉದಯ್ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಹಿರಿಯ ಪತ್ರಕರ್ತ, ಸಾಹಿತಿ ಉದಯ ಧರ್ಮಸ್ಥಳ ಇನ್ನಿಲ್ಲ Read More »

ರಾಷ್ಟ್ರಧ್ವಜ ಹಾರಿಸುವ ವೇಳೆ ಜಾರಿಬಿದ್ದು, ಸುಳ್ಯ ಮೂಲದ ಟೆಕ್ಕಿ ಸಾವು

ಸಮಗ್ರ ನ್ಯೂಸ್: ವಾಸಿಸುತ್ತಿದ್ದ ಕಟ್ಟಡದ ಎರಡನೇ ಮಹಡಿಯ ಟೆರೇಸ್‍ನಲ್ಲಿ ರಾಷ್ಟ್ರಧ್ವಜ ಹಾರಿಸುವ ವೇಳೆ ಜಾರಿ ಬಿದ್ದು ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಮೃತಪಟ್ಟ ಘಟನೆ ನಗರದ ಹೆಣ್ಣೂರಿನಲ್ಲಿ ರವಿವಾರ ನಡೆದಿದೆ. ಮೂಲತಃ ಸುಳ್ಯದವರಾದ ಅರ್ಚಕ ನಾರಾಯಣ ಭಟ್ ಎಂಬವರ ಪುತ್ರ ವಿಶ್ವಾಸ್ ಕುಮಾರ್ (33) ಮೃತಪಟ್ಟ ಟೆಕ್ಕಿ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ವಿಶ್ವಾಸ್, ಹೆಣ್ಣೂರು ಎಚ್‍ಬಿಆರ್ ಲೇಔಟ್ 5ನೇ ಬ್ಲಾಕ್‍ನಲ್ಲಿ ತಮ್ಮ ಕಟ್ಟಡದ ಟೆರೇಸ್‍ಗೆ ರಾಷ್ಟ್ರಧ್ವಜ ಹಾರಿಸುವ ಸಲುವಾಗಿ ಹೋಗಿದ್ದರು. ಎರಡು ಮಹಡಿಯ ಕಟ್ಟಡದ ನೆಲಮಹಡಿಯಲ್ಲಿ ಇವರು ವಾಸವಿದ್ದರು.

ರಾಷ್ಟ್ರಧ್ವಜ ಹಾರಿಸುವ ವೇಳೆ ಜಾರಿಬಿದ್ದು, ಸುಳ್ಯ ಮೂಲದ ಟೆಕ್ಕಿ ಸಾವು Read More »

ಭೀಕರ ರಸ್ತೆ ಅಪಘಾತ ಮಹಾರಾಷ್ಟ್ರದ ಮಾಜಿ ಸಚಿವ ನಿಧನ

ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಶಿವಸಂಗ್ರಾಮ್ ಮುಖ್ಯಸ್ಥ ಹಾಗೂ ಮಾಜಿ ಸಚಿವ ವಿನಾಯಕ್ ಮೇಟೆ ಮೃತಪಟ್ಟಿದ್ದಾರೆ. ರವಿವಾರ ಮುಂಜಾನೆ ಮಡಪ್ ಸುರಂಗದ ಬಳಿ ಕಾರು ಅಪಘಾತಗೊಂಡಿದ್ದು ಕಾರಿನಲ್ಲಿದ್ದ ಮಾಜಿ ಸಚಿವ ಸೇರಿ ಭದ್ರತಾ ಸಿಬ್ಬಂದಿಗಳೂ ಗಾಯಗೊಂಡಿದ್ದಾರೆ. ವಿನಾಯಕ್ ಅವರಿಗೆ ತಲೆ , ಕೈ, ಕಾಲು ಸೇರಿದಂತೆ ಹಲವೆಡೆ ತೀವ್ರ ಗಾಯಗೊಂಡ ಹಿನ್ನೆಲೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ನಿಧನರಾದ ವಿನಾಯಕ್ ಅವರು ಮರಾಠ ಮೀಸಲಾತಿ ವಿಚಾರಕ್ಕೆ ಸಂಬಂಧಪಟ್ಟಂತೆ ಚರ್ಚಿಸಲು ಮುಂಬೈಗೆ

ಭೀಕರ ರಸ್ತೆ ಅಪಘಾತ ಮಹಾರಾಷ್ಟ್ರದ ಮಾಜಿ ಸಚಿವ ನಿಧನ Read More »

ಮಂಗಳೂರು:ಹಿಟ್ ಆಂಡ್ ರನ್, ಯುವಕ ಸಾವು

ಸಮಗ್ರ ನ್ಯೂಸ್: ಅಪರಿಚಿತ ವಾಹನವೊಂದು ಹುಲ್ಲುಗಳನ್ನು ಕಟಾವು ನಡೆಸುತ್ತಿದ್ದ ಇಬ್ಬರು ಕಾರ್ಮಿಕರಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು ಇನ್ನೋರ್ವ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಜೆಪ್ಪಿನಮೊಗರು ಬಳಿ ನಡೆದಿದೆ. ಬಿಹಾರ ಮೂಲದ ವಿಕ್ಕಿ ಖಾನ್ (23)ಮೃತ ಕಾರ್ಮಿಕ. ಘಟನೆಯಲ್ಲಿ ಗೋಪಾಲ್ ಪೂಜಾರಿ ಎಂಬವರು ಗಾಯಗೊಂಡಿದ್ದಾರೆ‌. ಇವರು ಹೆದ್ದಾರಿ ಬಳಿ ಬೆಳಿಗ್ಗೆ ಹುಲ್ಲುಗಳನ್ನು ಕಟಾವು ನಡೆಸುತ್ತಿದ್ದಾಗ, ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ವಾಹನ ಢಿಕ್ಕಿ ಹೊಡೆದಿದೆ.ಪಿಕಪ್ ವಾಹನದ ಮೇಲೆ ಸಂಶಯ ವ್ಯಕ್ತಪಡಿಸಿರುವ ಪೊಲೀಸರು

ಮಂಗಳೂರು:ಹಿಟ್ ಆಂಡ್ ರನ್, ಯುವಕ ಸಾವು Read More »