ರಾಜಕೀಯ

ಸದನದ ಕಲಾಪಕ್ಕೂ ಮೊದಲು ಉಭಯ ಪಕ್ಷಗಳ ನಾಯಕರಿಂದ ಮಾತುಕತೆ

ಸಮಗ್ರ ನ್ಯೂಸ್: ಸದನದ ಕಲಾಪ ಪ್ರಾರಂಭವಾಗುವುದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪೀಕರ್ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.‌ ಈ ಸಂದರ್ಭ ಮಾಜಿ ಸಚಿವ ಸುನಿಲ್ ಕುಮಾರ್, ಸ್ಪೀಕರ್ ಯು.ಟಿ ಖಾದರ್ ಕೂಡಾ ಉಪಸ್ಥಿತರಿದ್ದರು.

ಸದನದ ಕಲಾಪಕ್ಕೂ ಮೊದಲು ಉಭಯ ಪಕ್ಷಗಳ ನಾಯಕರಿಂದ ಮಾತುಕತೆ Read More »

ಬೇನಾಮಿ ಆಸ್ತಿ ಹೊಂದಿದ್ದ ಅಜಿತ್ ರೈ ಗ್ರೇಡ್ 2 ತಹಶಿಲ್ದಾರ್ ಆಗಿ ಸಿರಿವಾರಕ್ಕೆ ನಿಯೋಜನೆ| ಸರ್ಕಾರದ ನಡೆಗೆ ವ್ಯಾಪಕ ಆಕ್ರೋಶ

ಸಮಗ್ರ ವಾರ್ತೆ: 500 ಕೋಟಿಗೂ ಅಧಿಕ ಬೇನಾಮಿ ಆಸ್ತಿ ಸಂಪಾದಿಸಿದ ಆರೋಪ ಹೊತ್ತಿರುವ ಬೆಂಗಳೂರಿನ ಕೆಆರ್ ಪುರ ತಹಶೀಲ್ದಾರ್ ಗೆ ಅಜಿತ್ ಕುಮಾರ್ ರೈ ಅವರನ್ನು ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ಗ್ರೇಡ್ -2 ತಹಶೀಲ್ದಾರ್ ಹುದ್ದೆಗೆ ಸರ್ಕಾರ ನೇಮಕ ಮಾಡಿದ್ದು, ಸರ್ಕಾರದ ಈ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ಆದಾಯಕ್ಕಿಂತ ಭಾರಿ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಅಜಿತ್ ರೈ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದೆ. ಸಿರವಾರದಲ್ಲಿ ಗ್ರೇಡ್ 2 ತಹಶೀಲ್ದಾರ್ ಆಗಿದ್ದ ಪರಶುರಾಮ 500

ಬೇನಾಮಿ ಆಸ್ತಿ ಹೊಂದಿದ್ದ ಅಜಿತ್ ರೈ ಗ್ರೇಡ್ 2 ತಹಶಿಲ್ದಾರ್ ಆಗಿ ಸಿರಿವಾರಕ್ಕೆ ನಿಯೋಜನೆ| ಸರ್ಕಾರದ ನಡೆಗೆ ವ್ಯಾಪಕ ಆಕ್ರೋಶ Read More »

ಬಿಜೆಪಿ ”ವಾಷಿಂಗ್ ಮೆಷಿನ್”; ತನಿಖಾ ಸಂಸ್ಥೆಗಳು “ಡಿಟರ್ಜೆಂಟ್”| ಬಂದಿದೆ ಮೋದಿ ವಾಶಿಂಗ್ ಪೌಡರ್!!

ಸಮಗ್ರ ನ್ಯೂಸ್: ಬಿಜೆಪಿಯನ್ನು “ವಾಷಿಂಗ್ ಮೆಷಿನ್” ಎಂದು ಕರೆದಿರುವ ಕಾಂಗ್ರೆಸ್, ಕೇಂದ್ರೀಯ ತನಿಖಾ ಸಂಸ್ಥೆಗಳನ್ನು “ಡಿಟರ್ಜೆಂಟ್” ಗಳಾಗಿ ಬಳಸಿಕೊಳ್ಳುತ್ತದೆ ಎಂದು ಬಣ್ಣಿಸಿದೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಬಂಡಾಯವನ್ನು ಉಲ್ಲೇಖಿಸಿ ಕಾಂಗ್ರೆಸ್‌ನ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ. “ನಿನ್ನೆ ಮುಂಬೈನಲ್ಲಿ ಬಿಜೆಪಿ ವಾಷಿಂಗ್ ಮೆಷಿನ್ ತನ್ನ ಐಸಿಇ (ಆದಾಯ ತೆರಿಗೆ, ಸಿಬಿಐ, ಇಡಿ) ಡಿಟರ್ಜೆಂಟ್‌ನೊಂದಿಗೆ ಮರುಪ್ರಾರಂಭ ಮಾಡಿತು. ಪ್ರತಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಬಿಜೆಪಿ ಪ್ರೇರಿತ ಸಂಸ್ಕಾರವನ್ನು ಹಾಕಲಾಯಿತು. ಜೂನ್ 23 ರಂದು ಪಾಟ್ನಾದಲ್ಲಿ ಸಭೆ ಸೇರಿದ

ಬಿಜೆಪಿ ”ವಾಷಿಂಗ್ ಮೆಷಿನ್”; ತನಿಖಾ ಸಂಸ್ಥೆಗಳು “ಡಿಟರ್ಜೆಂಟ್”| ಬಂದಿದೆ ಮೋದಿ ವಾಶಿಂಗ್ ಪೌಡರ್!! Read More »

ಇಂದಿನಿಂದ ರಾಜ್ಯ ವಿಧಾನಮಂಡಲ ಬಜೆಟ್ ಅಧಿವೇಶನ| ಭಾರೀ ವಾಗ್ಯುದ್ಧಕ್ಕೆ ಸಾಕ್ಷಿಯಾಗಲಿದೆ ವಿಧಾನಸೌಧ

ಸಮಗ್ರ ನ್ಯೂಸ್: ನೂತನ ಕಾಂಗ್ರೆಸ್ ಸರ್ಕಾರದ ಮೊದಲ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. 10 ದಿನಗಳ ಕಾಲ ಕಲಾಪ ನಡೆಯಲಿದ್ದು, ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರಿ ವಾಗ್ಯುದ್ಧ ನಡೆಯುವ ಸಾಧ್ಯತೆ ಇದೆ. ಹಿಂದಿನ ಸರ್ಕಾರದ ಹಗರಣ, ಗ್ಯಾರಂಟಿ ಯೋಜನೆ, ಅಕ್ಕಿ ಬದಲು ಹಣ, ಗ್ಯಾರಂಟಿ ಯೋಜನೆಗಳಿಗೆ ಷರತ್ತು, ವರ್ಗಾವಣೆ ದಂಧೆ, ಮತಾಂತರ ನಿಷೇಧ, ಗೋಹತ್ಯೆ ನಿಷೇಧ, ಎಪಿಎಂಸಿ ಕಾಯ್ದೆ ಮೊದಲಾದ ವಿಚಾರಗಳ ಬಗ್ಗೆ ಆಡಳಿತ, ಪ್ರತಿಪಕ್ಷಗಳ

ಇಂದಿನಿಂದ ರಾಜ್ಯ ವಿಧಾನಮಂಡಲ ಬಜೆಟ್ ಅಧಿವೇಶನ| ಭಾರೀ ವಾಗ್ಯುದ್ಧಕ್ಕೆ ಸಾಕ್ಷಿಯಾಗಲಿದೆ ವಿಧಾನಸೌಧ Read More »

ಸುಳ್ಯ: ಇಂದಿರಾ ಕ್ಯಾಂಟೀನ್‌ಗೆ ಕಾಂಗ್ರೆಸ್ ಮುಖಂಡರ ಭೇಟಿ | ಸದ್ಯದಲ್ಲಿಯೇ ಹೊಸ ಮೆನು ನಿರೀಕ್ಷೆ

ಸಮಗ್ರ ನ್ಯೂಸ್: ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಸ್ವಾದಿಷ್ಟ ಆಹಾರ ನೀಡಬೇಕು ಎಂದು ಈ ಹಿಂದಿನ ಸಿದ್ದರಾಮಯ್ಯ ಸರಕಾರ ರಾಜ್ಯದಾದ್ಯಂತ ಇಂದಿರಾ ಕ್ಯಾಂಟೀನ್ ಆರಂಭಿಸಿತ್ತು. ಅದರಂತೆ ಸುಳ್ಯದಲ್ಲಿಯೂ ಇಂದಿರಾ ಕ್ಯಾಂಟೀನ್ ಕಾರ್ಯಾರಂಭ ಮಾಡಿತ್ತು. ಸುಳ್ಯ ಮಿನಿವಿಧಾನ ಸೌಧದ ಬಳಿ ಇರುವ ಇಂದಿರಾ ಕ್ಯಾಂಟೀನ್ ಕಳೆದ ಹಲವು ವರ್ಷಗಳಿಂದ ಅನ್ನ ದಾಸೋಹ ಮಾಡುತ್ತಿದೆ. ಇದೀಗ ಸಿದ್ದರಾಮಯ್ಯ ನೇತೃತ್ವದ ಸರಕಾರ ಮತ್ತೆ ಅಧಿಕಾರಕ್ಕೆ ಬಂದಿರುವ ಹಿನ್ನಲೆಯಲ್ಲಿ ಈ ಕ್ಯಾಂಟಿನ್‌‌ಗಳಿಗೆ ಇನ್ನಷ್ಟು ಕಾಯಕಲ್ಪ ನೀಡಿ ಕೆಲವೊಂದು ಬದಲಾವಣೆ ತರುವ ಸಾಧ್ಯತೆ ಇದೆ.

ಸುಳ್ಯ: ಇಂದಿರಾ ಕ್ಯಾಂಟೀನ್‌ಗೆ ಕಾಂಗ್ರೆಸ್ ಮುಖಂಡರ ಭೇಟಿ | ಸದ್ಯದಲ್ಲಿಯೇ ಹೊಸ ಮೆನು ನಿರೀಕ್ಷೆ Read More »

ಅನ್ನ ಭಾಗ್ಯದ ಬದಲು ಹಣದ ಭಾಗ್ಯ| ಪಡಿತರದಲ್ಲಿ 5 ಕೆ.ಜಿ ಅಕ್ಕಿ ಮತ್ತೈದು ಕೆ.ಜಿ ಯ ಹಣ ನೇರ ವರ್ಗಾವಣೆ – ಸಚಿವ ಮುನಿಯಪ್ಪ

ಸಮಗ್ರ ನ್ಯೂಸ್: ಅನ್ನ ಭಾಗ್ಯಕ್ಕಾಗಿ ಅಕ್ಕಿ ಸಿಗೋವರೆಗೂ ಪಡಿತರ ಚೀಟಿ ಹೊಂದಿದ ಮನೆಯೊಡಯನ ಖಾತೆಗೆ ಹತ್ತು ಕೆ.ಜಿ ಅಕ್ಕಿಯ ಹಣ ಹಾಕುವ ಚಿಂತನೆ ಇದೆ ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಅಕ್ಕಿ ಪೂರೈಕೆಯಲ್ಲಿ ರಾಜಕೀಯ ಮಾಡಲಾಗುತ್ತಿದೆ. ಇದರಿಂದ ಬಡವರಿಗೆ ಅಕ್ಕಿ ನೀಡಲು ಸಾಧ್ಯವಾಗುತ್ತಿಲ್ಲ. ಆದರೆ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಸದಾ ಸಿದ್ದವಾಗಿದ್ದು ಈವಾಗ ಅಕ್ಕಿ ಬದಲು ಅಕ್ಕಿಯ ಹಣವನ್ನು ವಿತರಿಸಲು ಯೋಜಿಸಲಾಗಿದೆ ಎಂದರು. ಪ್ರತೀ ಕೆ.ಜಿ ಅಕ್ಕಿಯ ಬೆಲೆ

ಅನ್ನ ಭಾಗ್ಯದ ಬದಲು ಹಣದ ಭಾಗ್ಯ| ಪಡಿತರದಲ್ಲಿ 5 ಕೆ.ಜಿ ಅಕ್ಕಿ ಮತ್ತೈದು ಕೆ.ಜಿ ಯ ಹಣ ನೇರ ವರ್ಗಾವಣೆ – ಸಚಿವ ಮುನಿಯಪ್ಪ Read More »

ಇಂದಿನಿಂದ (ಜೂ.27) ‘ಗೃಹಲಕ್ಷ್ಮಿ’ ಯೋಜನೆಗೆ ಅರ್ಜಿ ಸ್ವೀಕಾರ| ಅರ್ಜಿ ಸಲ್ಲಿಸುವ ‌ಸಂಪೂರ್ಣ ಮಾಹಿತಿ ಇಲ್ಲಿದೆ…

ಸಮಗ್ರ ನ್ಯೂಸ್: ಇಂದಿನಿಂದ (ಜೂನ್ 27) ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದ್ದು, ಆಗಸ್ಟ್ 17 ಅಥವಾ 18 ರಂದು ಮನೆ ಒಡತಿಯರ ಖಾತೆಗೆ 2 ಸಾವಿರ ರೂ ಹಣ ಜಮಾ ಮಾಡಲಾಗುತ್ತದೆ ಎಂದು ಈಗಾಗಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಗೃಹಲಕ್ಷ್ಮೀ ಯೋಜನೆಗೆ ಸರ್ಕಾರದ ಸೇವಾಸಿಂಧು ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಭೌತಿಕವಾಗಿ ಅರ್ಜಿ ಸಲ್ಲಿಸಬಹುದು. ಯಾವೆಲ್ಲಾ ದಾಖಲೆಗಳು ಬೇಕು..?1) ರೇಷನ್ ಕಾರ್ಡ್

ಇಂದಿನಿಂದ (ಜೂ.27) ‘ಗೃಹಲಕ್ಷ್ಮಿ’ ಯೋಜನೆಗೆ ಅರ್ಜಿ ಸ್ವೀಕಾರ| ಅರ್ಜಿ ಸಲ್ಲಿಸುವ ‌ಸಂಪೂರ್ಣ ಮಾಹಿತಿ ಇಲ್ಲಿದೆ… Read More »

ನಾರೀ’ಶಕ್ತಿ’ ಕಂಟ್ರೋಲ್ ಗೆ ಬರಲಿದೆ ಹೊಸ ರೂಲ್ಸ್| ವೀಕೆಂಡ್ ದರ್ಬಾರ್ ಗೆ ಬೀಳಲಿದೆ ಬ್ರೇಕ್

ಸಮಗ್ರ ನ್ಯೂಸ್: ಶಕ್ತಿ ಯೋಜನೆಯಲ್ಲಿ ಕೆಲ ಮಾರ್ಪಾಡು ತರಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಪ್ರತಿ ವೀಕೆಂಡ್ ನಲ್ಲಿಯೂ ನಾಲ್ಕು ಸಾರಿಗೆ ಬಸ್ ಗಳಲ್ಲಿ ಒತ್ತಡ ಹೆಚ್ಚಿದ್ದು, ಹೀಗಾಗಿ ವೀಕೆಂಡ್ ನಲ್ಲಿ ಮಹಿಳೆಯರ ಓಡಾಟಕ್ಕೆ ಶೀಘ್ರದಲ್ಲೇ ಲಗಾಮು ಬೀಳಲಿದೆ. ತಿಂಗಳಾಂತ್ಯದೊಳಗೆ ಶಕ್ತಿ ಯೋಜನೆಗೆ ಹೊಸ ರೂಲ್ಸ್ ಬರಲಿದ್ದು, ಶಕ್ತಿ ಯೋಜನೆಯಲ್ಲಿ ರೂಲ್ಸ್ ಮಾರ್ಪಾಡಿಗೆ ಸಾರಿಗೆ ನಿಗಮಗಳಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ವೀಕೆಂಡ್ ನಲ್ಲಿ ನಾಲ್ಕು ಸಾರಿಗೆ ನಿಗಮದ ಬಸ್ ಗಳ ಹೌಸ್ ಪುಲ್ ಗೆ ಕಡಿವಾಣ ಹಾಕಲು

ನಾರೀ’ಶಕ್ತಿ’ ಕಂಟ್ರೋಲ್ ಗೆ ಬರಲಿದೆ ಹೊಸ ರೂಲ್ಸ್| ವೀಕೆಂಡ್ ದರ್ಬಾರ್ ಗೆ ಬೀಳಲಿದೆ ಬ್ರೇಕ್ Read More »

ಕೇಂದ್ರ ಸರ್ಕಾರದಿಂದ ಹೊಸ ನಿಯಮ| ದೇಶವ್ಯಾಪ್ತಿ ಹಗಲು – ರಾತ್ರಿಗೆ ಬೇರೆ ಬೇರೆ ವಿದ್ಯುತ್ ಬಿಲ್

ಸಮಗ್ರ ನ್ಯೂಸ್: ಇಡೀ ದೇಶದಲ್ಲಿಯೇ ವಿದ್ಯುತ್ ಬಿಲ್ ಇನ್ನು ಮುಂದೆ ಹೆಚ್ಚಾಗುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರವು ಶಕ್ತಿ ತೆರಿಗೆಯಲ್ಲಿ ಮಾಡಿದ ಕೆಲವೊಂದು ಪರಿಷ್ಕರಣೆಗಳು ಅದಕ್ಕೆ ಕಾರಣವಾಗಿದೆ. ಪ್ರಮುಖವಾಗಿ ಬೇಸಿಗೆ ಕಾಲದಲ್ಲಿ ನೀವು ಈ ಹಿಂದೆ ಪಡೆಯುತ್ತಿದ್ದ ವಿದ್ಯುತ್ ಬಿಲ್‌ಗಿಂತ ಅಧಿಕ ವಿದ್ಯುತ್ ಬಿಲ್ ಬರುವ ಸಾಧ್ಯತೆ ಇದೆ. ಶಕ್ತಿ ತೆರಿಗೆ ನಿಯಮದಲ್ಲಿ ಕೇಂದ್ರ ಸರ್ಕಾರವು ಇತ್ತೀಚೆಗೆ ಕೆಲವೊಂದು ಬದಲಾವಣೆಗಳನ್ನು ಮಾಡಿದೆ. ಈ ಪರಿಷ್ಕರಣೆಯ ಬಳಿಕ ಬೇಸಿಗೆ ಕಾಲದಲ್ಲಿ ರಾತ್ರಿ ಹೊತ್ತಿನಲ್ಲಿ ಹವಾ ನಿಯಂತ್ರಕ (ಎಸಿ) ಮತ್ತು ಕೂಲರ್‌ಗಳನ್ನು

ಕೇಂದ್ರ ಸರ್ಕಾರದಿಂದ ಹೊಸ ನಿಯಮ| ದೇಶವ್ಯಾಪ್ತಿ ಹಗಲು – ರಾತ್ರಿಗೆ ಬೇರೆ ಬೇರೆ ವಿದ್ಯುತ್ ಬಿಲ್ Read More »

ಅಕ್ಕಿ ಬೆಲೆಯೂ ಗಗನಕ್ಕೆ| ಬೆಲೆ ಏರಿಕೆಯಿಂದ ಹೈರಾಣಾದ ಜನಸಾಮಾನ್ಯ

ಸಮಗ್ರ ನ್ಯೂಸ್: ಕಳೆದೊಂದು ತಿಂಗಳಿಂದ ಏರಿಕೆಯಾಗುತ್ತಿರುವ ಅಕ್ಕಿ, ಬೇಳೆಕಾಳುಗಳ ಬೆಲೆಯಿಂದ ಜನಸಾಮಾನ್ಯನ ಬದುಕು ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಿಂದ ಕೊಂಚ ನಿಟ್ಟುಸಿರು ಬಿಡುತ್ತಿದ್ದ ಜನರನ್ನು ಈಗ ಅಕ್ಕಿ, ಬೇಳೆಕಾಳುಗಳ ಬೆಲೆ ಏರಿಕೆ ಕಂಗಾಲಾಗುವಂತೆ ಮಾಡಿದೆ. ಬೇಳೆಕಾಳುಗಳ ಬೆಲೆ ಹದಿನೈದು ದಿನಗಳಿಂದ ದಿಢೀರ್‌ ಏರಿದ್ದರೆ, ಅಕ್ಕಿ 2 ರೂ.ನಿಂದ ಆರಂಭವಾಗಿ ಈಗ ಸುಮಾರು 10​​-12 ರು.ವರೆಗೆ ಹೆಚ್ಚಳವಾಗಿದೆ. ಒಂದು ತಿಂಗಳ ಅಂತರದಲ್ಲೇ ಬೇಳೆಕಾಳುಗಳ ಬೆಲೆ 20​-.30 ರವರೆಗೂ ಏರಿಕೆಯಾಗಿದೆ. ಏರಿಕೆಯಾಗುತ್ತಿರುವ ಅಕ್ಕಿ, ಬೇಳೆಕಾಳುಗಳ ಬೆಲೆ

ಅಕ್ಕಿ ಬೆಲೆಯೂ ಗಗನಕ್ಕೆ| ಬೆಲೆ ಏರಿಕೆಯಿಂದ ಹೈರಾಣಾದ ಜನಸಾಮಾನ್ಯ Read More »