ಮುಂದಿನ ಚುನಾವಣೆಯಲ್ಲಿ ಎಸ್.ಅಂಗಾರಗೆ ಗೇಟ್‌ಪಾಸ್!?
ಸಚಿವರಾಗಿಯೂ ಕ್ಷೇತ್ರದಲ್ಲಿ ಕೆಲಸ ಮಾಡ್ತಿಲ್ಲವಂತೆ ಸುಳ್ಯ ಶಾಸಕ!!
ಸಮಗ್ರ ನ್ಯೂಸ್: ಸುಳ್ಯ ವಿಧಾನಸಭಾ ಕ್ಷೇತದಲ್ಲಿ 6 ಬಾರಿಯ ಶಾಸಕರಾಗಿ ಇದೀಗ ಸಚಿವರಾಗಿರುವ ಎಸ್ ಅಂಗಾರರು ಮುಂದಿನ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುತ್ತಿಲ್ಲ ಎಂಬ ಸುದ್ದಿಗಳು ಸ್ವಪಕ್ಷದಲ್ಲೇ ಕೇಳಿ ಬರುತ್ತಿದೆ. ಹಾಗಿದ್ದರೆ ಮುಂದೆ ಬಿಜೆಪಿಯಿಂದ ಸುಳ್ಯ ಕ್ಷೇತ್ರದಲ್ಲಿ ಸ್ಷರ್ದಿಸುವವರು ಯಾರು? ಎಂಬ ಕುತೂಹಲ ಮೂಡಿದೆ. ೧೯೯೪ರಿಂದ ಸುಳ್ಯ ಕ್ಷೇತ್ರದ ಶಾಸಕರಾಗಿರುವ ಅಂಗಾರರು ಜನಾನುರಾಗಿ ಹಾಗೂ ಅಜಾತ ಶತ್ರು ಎಂದೇ ಖ್ಯಾತರು. ಸರಳ ಸಜ್ಜನಿಕೆಯ ಅವರ ವ್ಯಕ್ತಿತ್ವ ಅಲ್ಲಿನ ಜನಸ್ತೋಮಕ್ಕೆ ಮೆಚ್ಚುಗೆಯಾದುದರಿಂದಲೇ ಅವರು ಹೀಗೆ ಸತತವಾಗಿ ಗೆಲುವಿನ ನಗೆ […]










