ಇಂದು ವಿಶ್ವಕಪ್ ಫೈನಲ್ ಪಂದ್ಯ| ಎದೆಬಡಿತ ಜೋರಾಗಿದೆ…
ಸಮಗ್ರ ನ್ಯೂಸ್: ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣ ಇಂದು ನಡೆಯಲಿರುವ ಐಸಿಸಿ ವಿಶ್ವಕಪ್ ಕ್ರಿಕೆಟ್ ಫೈನಲ್ಸ್ಗೆ ವರ್ಣಮಯವಾಗಿ ಸಜ್ಜಾಗಿದೆ. ಪಂದ್ಯಾವಳಿಯ ಎಲ್ಲ ಸವಾಲಿನ ಪಂದ್ಯಗಳನ್ನು ಸಮರ್ಥವಾಗಿ ಎದುರಿಸಿ ಅಂತಿಮ ಹಂತಕ್ಕೆ ತಲುಪಿರುವ ಎರಡು ಬಲಿಷ್ಠ ತಂಡಗಳಾದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯವೀಕ್ಷಣೆಗೆ ಇಡೀ ದೇಶವೇ ಕಾತುರದಿಂದ ಎದುರು ನೋಡುತ್ತಿದೆ. ಅಹ್ಮದಾಬಾದ್ ಕ್ರೀಡಾಂಗಣದಲ್ಲಿ ಅಂದಾಜು 1 ಲಕ್ಷದ 30 ಸಾವಿರ ಕ್ರೀಡಾಭಿಮಾನಿಗಳು ಹಾಗೂ ವಿಶ್ವಾದ್ಯಂತ ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳು ನಾಳೆ ನಡೆಯುವ ಐತಿಹಾಸಿಕ ಪಂದ್ಯವನ್ನು ವೀಕ್ಷಿಸಲಿದ್ದಾರೆ.
ಇಂದು ವಿಶ್ವಕಪ್ ಫೈನಲ್ ಪಂದ್ಯ| ಎದೆಬಡಿತ ಜೋರಾಗಿದೆ… Read More »










