ಕ್ರೀಡೆ

ಏಷ್ಯಾಕಪ್ ಕ್ರಿಕೆಟ್| ಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಸಮಗ್ರ ನ್ಯೂಸ್: 2023 ನೇ ಸಾಲಿನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ನಲ್ಲಿ ಶ್ರೀಲಂಕಾ ವಿರುದ್ಧ 10 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ 8 ನೇ ಬಾರಿಗೆ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶ್ರೀಲಂಕಾ ನೀಡಿದ 51 ರನ್ ಗಳ ಸುಲಭ ಗುರಿ ಬೆನ್ನತ್ತಿದ ಟೀಂ ಇಂಡಿಯಾ 6.1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ರನ್ ಗಳಿಸಿತು.ಇದರೊಂದಿಗೆ ಬಹಳ ದಿನಗಳ ನಂತರ ಬಹುರಾಷ್ಟ್ರಗಳ ಟೂರ್ನಿಯೊಂದರಲ್ಲಿ ಪ್ರಶಸ್ತಿ ಗೆಲ್ಲುವ ಬರ ನೀಗಿಸಿಕೊಂಡಿತು. ಇಂದು […]

ಏಷ್ಯಾಕಪ್ ಕ್ರಿಕೆಟ್| ಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು Read More »

ಏರ್ ರೈಫಲ್‌ನಲ್ಲಿ ಚಿನ್ನ ಗೆದ್ದ ಭಾರತದ ಇಳವೆನ್ನಿಲಾ ವಾಳರಿವನ್‌

ಸಮಗ್ರ ನ್ಯೂಸ್: ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್ 2023 ರಲ್ಲಿ ಭಾರತದ ಶೂಟರ್ ಇಳವೆನ್ನಿಲಾ ವಾಳರಿವನ್, ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಒಲಿಂಪಿಯನ್ ಇಳವೆನ್ನಿಲಾ ವಾಳರಿವನ್ (Elavenil Valarivan) ಫೈನಲ್‌ ಸುತ್ತಿನಲ್ಲಿ 24 ಪ್ರಯತ್ನಗಳಲ್ಲಿ 252.2 ಪಾಯಿಂಟ್ಸ್‌ಗಳೊಂದಿಗೆ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಫ್ರಾನ್ಸ್‌ನ ಓಸಿಯಾನ್ ಮುಲ್ಲರ್, 251.9 ಪಾಯಿಂಟ್ಸ್‌ಗಳೊಂದಿಗೆ ಬೆಳ್ಳಿ ಹಾಗೂ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಜಿಯಾಲೆ ಜಾಂಗ್, 229.0 ಪಾಯಿಂಟ್ಸ್‌ನೊಂದಿಗೆ ಕಂಚಿನ ಪದಕ ಗೆದ್ದಿದ್ದಾರೆ.

ಏರ್ ರೈಫಲ್‌ನಲ್ಲಿ ಚಿನ್ನ ಗೆದ್ದ ಭಾರತದ ಇಳವೆನ್ನಿಲಾ ವಾಳರಿವನ್‌ Read More »

ಏಷ್ಯಾಕಪ್ ಕ್ರಿಕೆಟ್| ಲಂಕಾದಿಂದ ಪಾಕ್ ದಹನ

ಸಮಗ್ರ ನ್ಯೂಸ್: ಕೊಲಂಬೊದಲ್ಲಿ ಗುರುವಾರ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ಪಂದ್ಯದ ಕೊನೆಯ ಎಸೆತದಲ್ಲಿ ವಿಶ್ವದ ಅಗ್ರ ಕ್ರಮಾಂಕದ ತಂಡವಾದ ಪಾಕಿಸ್ತಾನವನ್ನು 2 ವಿಕೆಟ್ ಅಂತರದಿಂದ ಸೋಲಿಸಿದ ಶ್ರೀಲಂಕಾ ತಂಡ ಫೈನಲ್ ತಲುಪಿದೆ. ಮಳೆಯಿಂದ ಬಾಧಿತವಾದ ಪಂದ್ಯದಲ್ಲಿ 87 ಎಸೆತಗಳಲ್ಲಿ 91 ರನ್ ಸಾಧಿಸಿದ ಕುಶಾಲ್ ಮೆಂಡಿಸ್ ವಿಜಯದ ರೂವಾರಿ ಎನಿಸಿದರು. ಇವರ ಜತೆಗೆ ಸದೀರ ಸಮರ ವಿಕ್ರಮ ಮತ್ತು ಚರಿತ್ ಅಸಲಂಕಾ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಲು ಗಣನೀಯ

ಏಷ್ಯಾಕಪ್ ಕ್ರಿಕೆಟ್| ಲಂಕಾದಿಂದ ಪಾಕ್ ದಹನ Read More »

ಏಷ್ಯಾಕಪ್ ಕ್ರಿಕೆಟ್| ಲಂಕಾ ವಿರುದ್ಧ ಗೆದ್ದು ಫೈನಲ್ ತಲುಪಿದ ಭಾರತ

ಸಮಗ್ರ ನ್ಯೂಸ್: ಏಷ್ಯಾಕಪ್ ಸೂಪರ್ -4 ಹಂತದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಜಯಗಳಿಸಿದ ಭಾರತ ಫೈನಲ್ ತಲುಪಿದೆ. ಮಂಗಳವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ 41 ರನ್ ಗೆಲುವು ಸಾಧಿಸಿದೆ. ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಟೂರ್ನಿಯಲ್ಲಿ ಫೈನಲ್ ಗೆ ಎಂಟ್ರಿ ಕೊಟ್ಟ ಮೊದಲ ತಂಡವಾಗಿದೆ. ಕಳೆದು ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ ಜಯಗಳಿಸಿದ ಭಾರತ ಮಂಗಳವಾರದ ಪಂದ್ಯದಲ್ಲಿ ಶ್ರೀಲಂಕಾ ಮಣಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಶ್ರೀಲಂಕಾ ಸ್ಪಿನ್ನರ್ ಗಳ ದಾಳಿಗೆ ತತ್ತರಿಸಿ 49.1

ಏಷ್ಯಾಕಪ್ ಕ್ರಿಕೆಟ್| ಲಂಕಾ ವಿರುದ್ಧ ಗೆದ್ದು ಫೈನಲ್ ತಲುಪಿದ ಭಾರತ Read More »

ಏಷ್ಯಾ ಕಪ್ ಕ್ರಿಕೆಟ್| ಇಂದು ಭಾರತ – ಶ್ರೀಲಂಕಾ ನಡುವೆ ಪಂದ್ಯ

ಸಮಗ್ರ ನ್ಯೂಸ್: ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾಕೂಟದಲ್ಲಿ ಇಂದು ಭಾರತ ಮತ್ತು ಶ್ರೀಲಂಕಾದ ನಡುವೆ ಪಂದ್ಯಾಟ ಶ್ರೀಲಂಕಾದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ತಂಡವು ಕಳೆದ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಿ, ಭರ್ಜರಿ ಜಯ ಗಳಿಸಿದ್ದು ಇಂದು‌ ಕೂಡ ಅದೇ ಪ್ರದರ್ಶನವನ್ನು ತೋರಿಸುವ ಹುಮ್ಮಸ್ಸಿನಲ್ಲಿ ಇದೆ. ರೋಹಿತ್, ಗಿಲ್, ಕೊಹ್ಲಿ, ರಾಹುಲ್ ಒಳಗೊಂಡ ಅತ್ಯುತ್ತಮ ಬ್ಯಾಟಿಂಗ್ ವಿಭಾಗವನ್ನು ಭಾರತ ಹೊಂದಿದ್ದು, ಗೆಲುವನ್ನು ಸಾಧಿಸುವ ಕನಸು ಕಾಣುತ್ತಿದೆ. ಅದೇ ರೀತಿ ಶ್ರೀಲಂಕಾ ಕೂಡ ಹಿಂದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ

ಏಷ್ಯಾ ಕಪ್ ಕ್ರಿಕೆಟ್| ಇಂದು ಭಾರತ – ಶ್ರೀಲಂಕಾ ನಡುವೆ ಪಂದ್ಯ Read More »

ಏಷ್ಯಾಕಪ್ ಕ್ರಿಕೆಟ್| ಪಾಕಿಸ್ತಾನ ವಿರುದ್ದ ಚಾರಿತ್ರಿಕ ಗೆಲುವು ದಾಖಲಿಸಿದ ಟೀಂ ಭಾರತ

ಸಮಗ್ರ ನ್ಯೂಸ್: ಕೊಲಂಬೋದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ ಕ್ರಿಕೆಟ್ ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಪರಾಕ್ರಮ ಸಾಧಿಸಿದ ಭಾರತ ತಂಡ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್​ ಸೂಪರ್​-4 ಹಂತದ ಪಂದ್ಯದಲ್ಲಿ 228 ರನ್​ಗಳ ಭರ್ಜರಿ ವಿಜಯ ಸಾಧಿಸಿದೆ. ಭಾರತ ತಂಡದ ಪರ ವಿರಾಟ್ ಕೊಹ್ಲಿ ( ಅಜೇಯ 122 ರನ್​), ಕೆ. ಎಲ್​ ರಾಹುಲ್​ (ಅಜೇಯ 111 ರನ್​) ಅವರ ಸ್ಫೋಟಕ ಬ್ಯಾಟಿಂಗ್ ​ ನಡೆಸಿ ಮಿಂಚಿದರೆ. ಸ್ಪಿನ್ನರ್​ ಕುಲ್ದೀಪ್​ ಯಾದವ್​ (25 ರನ್​ಗಳಿಗೆ 5 ವಿಕೆಟ್​​)

ಏಷ್ಯಾಕಪ್ ಕ್ರಿಕೆಟ್| ಪಾಕಿಸ್ತಾನ ವಿರುದ್ದ ಚಾರಿತ್ರಿಕ ಗೆಲುವು ದಾಖಲಿಸಿದ ಟೀಂ ಭಾರತ Read More »

ಪುತ್ತೂರು:ಗ್ರಾ.ಪಂನ ಮಾಜಿ ಸದಸ್ಯನ ಮನೆಗೆ ನುಗ್ಗಿದ ದರೋಡೆಕೋರರ ಗುಂಪು

ಸಮಗ್ರ ನ್ಯೂಸ್:‌ ದರೋಡೆಕೋರರ ಗುಂಪು ಬಡಗನ್ನೂರು ಗ್ರಾ.ಪಂ ನ ಮಾಜಿ ಸದಸ್ಯ ಗುರುಪ್ರಸಾದ್‌ ರೈ ಕುಡ್ಕಾಡಿ ಅವರ ಮನೆಗೆ ನುಗ್ಗಿ ಚಿನ್ನ ಮತ್ತು ನಗದು ಹಣ ದೋಚಿ ಪರಾರಿಯಾದ ಘಟನೆ ಸೆ.5ರ ತಡರಾತ್ರಿ ನಡೆದಿದೆ. ತೋಟದ ನಡುವೆ ಒಂಟಿಯಾಗಿರುವ ಮನೆಯಲ್ಲಿ ಗುರುಪ್ರಸಾದ್ ರೈ ಮತ್ತು ಅವರ ತಾಯಿ ಕಸ್ತೂರಿ ರೈ ಮಾತ್ರವಿದ್ದು 7 ರಿಂದ 8 ಜನರಿದ್ದ ದರೋಡೆಕೋರರ ಗುಂಪು ಕೈಯಲ್ಲಿ ತಲವಾರು ಮತ್ತು ರಾಡ್ ನಂತಹ ಮಾರಕಾಸ್ತ್ರ ಹಿಡಿದು ಮನೆಗೆ ನುಗ್ಗಿ, ಜೀವಬೆದರಿಕೆಯೊಡ್ಡಿ ತಾಯಿ ಮಗನನ್ನು

ಪುತ್ತೂರು:ಗ್ರಾ.ಪಂನ ಮಾಜಿ ಸದಸ್ಯನ ಮನೆಗೆ ನುಗ್ಗಿದ ದರೋಡೆಕೋರರ ಗುಂಪು Read More »

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್| ಚಿನ್ನದ ಪದಕಕ್ಕೆ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್ ಛೋಪ್ರಾ

ಸಮಗ್ರ ನ್ಯೂಸ್: ಹಂಗೇರಿಯಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ ಜಾವೆಲಿನ್ ಥ್ರೋ ಫೈನಲ್​ನಲ್ಲಿ ಗೆದ್ದು ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದಾರೆ. 12 ಆಟಗಾರರನ್ನು ಒಳಗೊಂಡ ಅಂತಿಮ ಹಣಾಹಣಿಯಲ್ಲಿ 88.17 ಮೀಟರ್ ದೂರಕ್ಕೆ ಭರ್ಜಿ ಎಸೆದು ಚೋಪ್ರಾ ಸ್ವರ್ಣ ಪದಕ ತಮ್ಮದಾಗಿಸಿಕೊಂಡರು. ಈ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟು ಹೊಸ ಇತಿಹಾಸ ನಿರ್ಮಿಸಿದರು. 6 ಸುತ್ತಿನ ಈ ಸ್ಪರ್ಧೆಯ ಮೊದಲ ರೌಂಡ್​ನಲ್ಲೇ ನೀರಜ್ ಚೋಪ್ರಾ ಫೌಲ್ ಮಾಡಿದ್ದರು. ಆದರೆ ಅತ್ತ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್| ಚಿನ್ನದ ಪದಕಕ್ಕೆ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್ ಛೋಪ್ರಾ Read More »

ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಚಿನ್ನದ ಹುಡುಗ ನೀರಜ್ ಚೋಪ್ರಾ

ಸಮಗ್ರ ನ್ಯೂಸ್: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ಮತ್ತು 2020 ರ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಬುಡಾಪೆಸ್ಟ್ ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಅರ್ಹತಾ ಸುತ್ತುಗಳಲ್ಲಿ ಶುಕ್ರವಾರ (ಆಗಸ್ಟ್ 25) ತಮ್ಮ ಮೊದಲ ಪ್ರಯತ್ನದಲ್ಲಿ 88.77 ಮೀಟರ್ ಎಸೆಯುವ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2023 ರ ಫೈನಲ್ಗೆ ಅರ್ಹತೆ ಪಡೆದಿದ್ದಾರೆ. ನೀರಜ್ ಚೋಪ್ರಾ ಸೇರಿದಂತೆ ವಿಶ್ವದಾದ್ಯಂತದ 37 ಜಾವೆಲಿನ್ ಎಸೆತಗಾರರು ಈ

ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಚಿನ್ನದ ಹುಡುಗ ನೀರಜ್ ಚೋಪ್ರಾ Read More »

ಕ್ರಿಕೆಟ್ ದಂತಕಥೆ ಹೀತ್ ಸ್ಟ್ರೀಕ್ ಇನ್ನಿಲ್ಲ| ಕ್ಯಾನ್ಸರ್ ಗೆ ಬಲಿಯಾದ ಜಿಂಬಾಬ್ವೆ ಲೆಜೆಂಡ್

ಸಮಗ್ರ ನ್ಯೂಸ್: ಬಾಂಗ್ಲಾದೇಶದ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿದ್ದ ಝಿಂಬಾಬ್ವೆಯ ಲೆಜೆಂಡರಿ ಕ್ರಿಕೆಟಿಗ ಹೀತ್ ಸ್ಟ್ರೀಕ್ ಕ್ಯಾನ್ಸರ್ ವಿರುದ್ಧ ದೀರ್ಘಕಾಲದ ಹೋರಾಟದ ನಂತರ 49 ನೇ ವಯಸ್ಸಿನಲ್ಲಿ ನಿಧನರಾದರು. 65 ಟೆಸ್ಟ್ ಗಳು ಹಾಗೂ 189 ಏಕದಿನ ಪಂದ್ಯಗಳಲ್ಲಿ ಝಿಂಬಾಬ್ವೆಯನ್ನು ಪ್ರತಿನಿಧಿಸುವ ಮೂಲಕ 4,933 ರನ್ ಗಳನ್ನು ಗಳಿಸಿ , 455 ವಿಕೆಟ್ ಗಳನ್ನು ಕಬಳಿಸಿದ್ದ ಸ್ಟ್ರೀಕ್ ಖ್ಯಾತ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದರು. ಸ್ಟ್ರೀಕ್ ಟೆಸ್ಟ್ ನಲ್ಲಿ 1,000 ರನ್ ಹಾಗೂ 100 ವಿಕೆಟ್ ಗಳ

ಕ್ರಿಕೆಟ್ ದಂತಕಥೆ ಹೀತ್ ಸ್ಟ್ರೀಕ್ ಇನ್ನಿಲ್ಲ| ಕ್ಯಾನ್ಸರ್ ಗೆ ಬಲಿಯಾದ ಜಿಂಬಾಬ್ವೆ ಲೆಜೆಂಡ್ Read More »