Uncategorized

ಯಡಿಯೂರಪ್ಪ ಕುಟುಂಬ ಸಮೇತ ಜೈಲುಪಾಲಾಗ್ತಾರೆ – ಹೆಚ್.ವಿಶ್ವನಾಥ್

ಮೈಸೂರು: ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದ್ದೆ ಅವರ ಪುತ್ರ ಬಿ.ವೈ. ವಿಜಯೇಂದ್ರ. ಸಿಎಂ ಯಡಿಯೂರಪ್ಪನವರ ನಕಲಿ ಸಹಿ ಮಾಡಿ ಯಡಿಯೂರಪ್ಪರನ್ನು ಜೈಲಿಗೆ ಕಳುಹಿಸಿದ್ದು, ಇದೀಗ ಇಡೀ ಕುಟುಂಬವನ್ನೇ ಜೈಲಿಗೆ ಕಳುಹಿಸುತ್ತಾರೆ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ವಿಜಯೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿ, ಸಿಎಂ ಪುತ್ರ ವಿಜಯೇಂದ್ರ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದು ಆರೋಪಿಸಿದ್ದಾರೆ. ಹಿಂದುಳಿದ ನಾಯಕರನ್ನು ತುಳಿಯುವ ಕೆಲಸ ನಡೆಯುತ್ತಿದೆ. ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ ಅವರನ್ನು […]

ಯಡಿಯೂರಪ್ಪ ಕುಟುಂಬ ಸಮೇತ ಜೈಲುಪಾಲಾಗ್ತಾರೆ – ಹೆಚ್.ವಿಶ್ವನಾಥ್ Read More »

ಕೆಆರ್’ಎಸ್ ಸೋರದಂತೆ ಸುಮಲತಾರನ್ನು ಅಡ್ಡ ಮಲಗಿಸಬೇಕು: ಎಚ್’ಡಿಕೆ

ಬೆಂಗಳೂರು: ಜಿಲ್ಲೆಯ ಜೀವನಾಡಿ ಕೆಆರ್’ಎಸ್ ಸೋರುತ್ತಿದ್ದರೆ ಮಂಡ್ಯ ಸಂಸದೆ ಸುಮಲತಾ ಅವರನ್ನು ಅಡ್ಡ ಮಲಗಿಸಿ ಸೋರಿಕೆ ತಡೆಯಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಕೆಆರ್’ಎಸ್ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಾಣಿಗಾರಿಕೆಯಿಂದ ಡ್ಯಾಮ್ ಬಿರುಕು ಬಿಟ್ಟಿದೆ. ತಜ್ಞರಿಂದ ಹೆಚ್ಚಿನ ತನಿಖೆ ನಡೆಸಲು ಪ್ರಭಾವಿ ರಾಜಕಾರಣಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಸಂಸದೆ ಸುಮಲತಾ ಆರೋಪಿಸಿದ್ದರು. ಇದಕ್ಕೆ ಎಚ್’ಡಿಕೆ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಡ್ಯ ಇಂತಹ ಸಂಸದರನ್ನು ಇದುವರೆಗೆ ಕಂಡಿಲ್ಲ. ಕಾಣೋದೂ ಇಲ್ಲ. ಕೆಆರ್’ಎಸ್ ನ್ನು ಇವರೇ

ಕೆಆರ್’ಎಸ್ ಸೋರದಂತೆ ಸುಮಲತಾರನ್ನು ಅಡ್ಡ ಮಲಗಿಸಬೇಕು: ಎಚ್’ಡಿಕೆ Read More »

ಅಪ್ರಾಪ್ತ ತಂಗಿಯನ್ನೇ ಹರಿದು‌ ಮುಕ್ಕಿದ ಪಾಪಿ‌ ಅಣ್ಣ…! ಗರ್ಭವತಿಯಾದ ಬಾಲಕಿ

ತಿರುಪತಿ​: ಸ್ವಂತ ತಂಗಿಯ ಮೇಲೆ ಅಣ್ಣನೊಬ್ಬ ನಿರಂತರ ಅತ್ಯಾಚಾರವೆಸಗಿ, ಆಕೆಯನ್ನು ಗರ್ಭವತಿಯನ್ನಾಗಿಸಿದ ಘಟನೆ ತಿರುಪತಿ ಅಲಿಪಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕ ತನ್ನ ತಂಗಿಯನ್ನು ಹೆದರಿಸಿ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದನಂತೆ. ಪರಿಣಾಮ ಬಾಲಕಿ ಗರ್ಭವತಿಯಾಗಿದ್ದಾಳೆ. ಇವರ ತಂದೆ 20 ವರ್ಷಗಳ ಹಿಂದೆ ಮದುವೆಯಾಗಿದ್ದ. ಈತನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಈತನ ಮೊದಲನೇ ಹೆಂಡತಿ ಮನೆ ಬಿಟ್ಟು ಹೋಗಿದ್ದು ಎರಡನೇ ಮದುವೆಯಾಗಿದ್ದ. ಎರಡನೇ ಹೆಂಡತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು.ಮೊದಲನೇ ಹೆಂಡತಿಯ ಮಗ

ಅಪ್ರಾಪ್ತ ತಂಗಿಯನ್ನೇ ಹರಿದು‌ ಮುಕ್ಕಿದ ಪಾಪಿ‌ ಅಣ್ಣ…! ಗರ್ಭವತಿಯಾದ ಬಾಲಕಿ Read More »

ನಮ್ಮವರು ನಮ್ಮ ಗಲ್ಲಿಗಳಲ್ಲಿ ಮಾತ್ರ ಸಿಂಹ – ಸಿದ್ದು ವ್ಯಂಗ್ಯ

ಬೆಂಗಳೂರು; ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಕೇಳಲು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಧೈರ್ಯವಿಲ್ಲ. ಯಡಿಯೂರಪ್ಪ ಹಮಾರಾ ಕುತ್ತಾ, ಹಮಾರಾ ಗಲ್ಲಿ ಮೇ ಶೇರ್ ( ನಮ್ಮ ನಾಯಿ, ನಮ್ಮ ಬೀದಿಲಿ ಸಿಂಹ) ನಂತೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನ ಶ್ರೀನಗರದಲ್ಲಿಂದು ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, 15ನೇ ಹಣಕಾಸು ಆಯೋಗವೇ ಕರ್ನಾಟಕಕ್ಕೆ 5495 ಕೋಟಿ ರೂ. ವಿಶೇಷ ಅನುದಾನಕ್ಕೆ ಶಿಫಾರಸ್ಸು ಮಾಡಿದೆ. ಆದರೆ ಈ ಅನುದಾನವನ್ನು ರಾಜ್ಯಕ್ಕೆ

ನಮ್ಮವರು ನಮ್ಮ ಗಲ್ಲಿಗಳಲ್ಲಿ ಮಾತ್ರ ಸಿಂಹ – ಸಿದ್ದು ವ್ಯಂಗ್ಯ Read More »

ಜು.8ರವರೆಗೆ ರಾಜ್ಯಾದ್ಯಂತ ವ್ಯಾಪಕ ಮಳೆ ಸಾಧ್ಯತೆ, ಕೆಲವೆಡೆ ಎಲ್ಲೋ ಅಲರ್ಟ್

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಜುಲೈ 8 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಶ್ರೀಲಂಕಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಇಂದಿನಿಂದ ನಾಲ್ಕು ದಿನ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯಾದ್ಯಂತ ಇಂದಿನಿಂದ ಮಳೆಯ ಪ್ರಮಾಣ ಏರಿಕೆಯಾಗಲಿದ್ದು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಜುಲೈ 7 ಮತ್ತು

ಜು.8ರವರೆಗೆ ರಾಜ್ಯಾದ್ಯಂತ ವ್ಯಾಪಕ ಮಳೆ ಸಾಧ್ಯತೆ, ಕೆಲವೆಡೆ ಎಲ್ಲೋ ಅಲರ್ಟ್ Read More »

ಪುತ್ತೂರು: ಹನಿಟ್ರ್ಯಾಪ್ ಯುವತಿ ಬಂಧನ

ಪುತ್ತೂರು: ಹನಿಟ್ರ್ಯಾಪ್‌ಗೊಳಗಾಗಿ ಲಕ್ಷಾಂತರ ರೂ. ಕಳೆದುಕೊಂಡಿರುವುದಾಗಿ ನೆಟ್ಟಣಿಗೆ ಮುಡ್ನೂರು ನಿವಾಸಿ ಯುವಕನೋರ್ವ 7 ಮಂದಿ ವಿರುದ್ಧ ಪೊಲೀಸ್ ದೂರು ನೀಡಿದ್ದು, ಆರೋಪಿಗಳ ಪೈಕಿ ಯುವತಿಯೋರ್ವಳನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಚೀಚಗದ್ದೆ ನಿವಾಸಿ, ವೃತ್ತಿಯಲ್ಲಿ ಸೇಲ್ಸ್‌ಮ್ಯಾನ್ ಆಗಿರುವ ಅಬ್ದುಲ್ ನಾಸಿರ್ (25) ಹನಿಟ್ರ್ಯಾಪ್‌ಗೆ ಒಳಗಾಗಿ 30 ಲಕ್ಷ ರೂ. ಕಳೆದುಕೊಂಡವರು. ಈ ಬಗ್ಗೆ ನೆಟ್ಟಣಿಗೆ ಮುಡ್ನೂರು ಚೀಚಗದ್ದೆಯ ಹನೀಫ್ ಯಾನೆ ಕೆಎಂವೈ ಹನೀಫ್, ಕೊಟ್ಯಾಡಿಯ ಮುಹಮ್ಮದ್ ಕುಂಞಿ, ಕೊಟ್ಯಾಡಿಯ ಶಾಫಿ, ಸವಣೂರಿನ ಅಝರ್,

ಪುತ್ತೂರು: ಹನಿಟ್ರ್ಯಾಪ್ ಯುವತಿ ಬಂಧನ Read More »

ಕೊಡಗಿನಲ್ಲಿ ಜು.19ರವರೆಗೆ ಲಾಕ್ ಡೌನ್ ಕಂಟಿನ್ಯೂ, ಸೀಮಿತ ಸೇವೆಗಳಿಗಷ್ಟೇ ಅವಕಾಶ, ಪ್ರವಾಸಿಗರಿಗೆ‌ ನಿಷೇಧ

ಕೊಡಗು ವರದಿ: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ರೇಟ್ ಕಡಿಮೆಯಾಗದ ಹಿನ್ನೆಲೆ ಕೆಲವು ಸಡಿಲಿಕೆಯೊಂದಿಗೆ ಲಾಕ್‌ಡೌನ್ ಜು19ರವರೆಗೆ ಮುಂದುವರೆಸಲಾಗಿದೆ.ಈ ಹಿಂದೆ ವಾರದ ಮೂರು ದಿನ ಬೆಳಿಗ್ಗೆ 6ರಿಂದ 1ಗಂಟೆಯವರೆಗೆ ಅಗತ್ಯ ಸಾಮಗ್ರಿ ಖರೀದಿಗೆ ಅವಕಾಶ ನೀಡಲಾಗಿತ್ತು. ಸಡಿಲಿಕೆ ಆದೇಶದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 6 ರಿಂದ 2 ಗಂಟೆಯವರೆಗೆ ಅಗತ್ಯ ಸಾಮಗ್ರಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.ಕಂಟೈನ್ಮೇಂಟ್ ವಲಯದಲ್ಲಿ ಯಾವುದೇ ಚಟುವಟಿಕೆ ನಡೆಸಲು ಅವಕಾಶವಿಲ್ಲ. ಅತ್ಯವಶ್ಯಕ ಸೇವೆಗಳಡಿ ಬರುವ ತರಕಾರಿ, ಹಣ್ಣು-ಹಂಪಲು, ದಿನಸಿ, ಕೃಷಿಗೆ ಸಂಬಂಧಿಸಿದ ಅಂಗಡಿ ಮಳಿಗೆ ಮತ್ತು

ಕೊಡಗಿನಲ್ಲಿ ಜು.19ರವರೆಗೆ ಲಾಕ್ ಡೌನ್ ಕಂಟಿನ್ಯೂ, ಸೀಮಿತ ಸೇವೆಗಳಿಗಷ್ಟೇ ಅವಕಾಶ, ಪ್ರವಾಸಿಗರಿಗೆ‌ ನಿಷೇಧ Read More »

ಮಡಿಕೇರಿ: ಎರಡು ಕಾಡಾನೆಗಳ ಕಳೇಬರ ಪತ್ತೆ, ಹುಲಿ ದಾಳಿಯ ಶಂಕೆ

ಮಡಿಕೇರಿ: ಪ್ರತ್ಯೇಕ ಪ್ರಕರಣಗಳಲ್ಲಿ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಮತ್ತು ವಡ್ಡರಮಾಡು ಎಂಬಲ್ಲಿ ಎರಡು ಕಾಡಾನೆಗಳ ಕಳೇಬರ ಪತ್ತೆಯಾಗಿದೆ. ಕುಟ್ಟ ಗ್ರಾಮದ ಪೂಜೆಕಲ್ ಎಂಬಲ್ಲಿ ಕಾಕೇರ ಕಾಳಪ್ಪ ಎಂಬುವವರಿಗೆ ಸೇರಿದ ಕಾಫಿ ತೋಟದಲ್ಲಿ ಸುಮಾರು 12 ವರ್ಷದ ಗಂಡು ಕಾಡಾನೆ ಕಳೇಬರ ಭಾನುವಾರ ಮುಂಜಾನೆ ಪತ್ತೆಯಾಗಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಶನಿವಾರ ರಾತ್ರಿ ಸಾವಿಗೀಡಾಗಿರಬಹುದು ಎಂದು ಅಂದಾಜಿಸಲಾಗಿದೆ. ನಾಗರಹೊಳೆ ಉದ್ಯಾನವನ ವ್ಯಾಪ್ತಿಯ ವಡ್ಡರಮಾಡು ಎಂಬಲ್ಲಿ ಹುಲಿ ದಾಳಿಗೆ 1 ತಿಂಗಳು ಪ್ರಾಯದ ಕಾಡಾನೆ ಮರಿ

ಮಡಿಕೇರಿ: ಎರಡು ಕಾಡಾನೆಗಳ ಕಳೇಬರ ಪತ್ತೆ, ಹುಲಿ ದಾಳಿಯ ಶಂಕೆ Read More »

ಸಿಡಿ ಇದೆಯೆಂದು ಗೌಡರು ಸ್ವತಃ ಒಪ್ಪಿಕೊಂಡಂತಾಗಿದೆ | “ಕಳ್ಳನ ಮನಸ್ಸು ಹುಳ್ಳುಳ್ಳಗೆ” |ಕಂಡವರ ಬೆಡ್’ರೂಮ್’ಲ್ಲಿ ಕ್ಯಾಮರಾ ಇಡುವ ಚಾಳಿ ಇವರದ್ದು | “ಸಿಡಿ ಪಾರ್ಟಿ ಬಿಜೆಪಿ” : ಕಾಂಗ್ರೆಸ್ ಲೇವಡಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಸಿ.ಡಿ ಇತ್ತೀಚೆಗೆ ಬಿಡುಗಡೆಯಾಗಿದ್ದು, ರಾಜಕೀಯ ವಲಯದಲ್ಲಿ ಭಾರೀ ದೊಡ್ಡ ಸದ್ದು ಮಾಡಿತ್ತು. ಸಿಡಿ ವಿಷಯ ಹಿಡಿದುಕೊಂಡು ವಿರೋಧ ಪಕ್ಷ ಬಿಜೆಪಿಯ ವಿರುದ್ಧ ಟೀಕೆಗಳ ಸುರಿಮಳೆಗೈದಿತ್ತು. ಅಲ್ಲದೆ, ರಾಷ್ಟ್ರಾದ್ಯಂತ ಬ್ಯೂಜೆಪಿ ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡ್ ಸೃಷ್ಟಿಯಾಗಿತ್ತು. ಇದರ ಬೆನ್ನಿಗೆ ಆರೋಗ್ಯ ಸಚಿವ ಡಾ. ಸುಧಾಕರ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಶಾಸಕರು ತಮ್ಮ ಸಿಡಿ ಬಿಡುಗಡೆಯಾಗದಂತೆ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದರು. ಈ ವಿಚಾರ ಸಹ ದೊಡ್ಡ ಮಟ್ಟದ ಸುದ್ದಿಗೆ

ಸಿಡಿ ಇದೆಯೆಂದು ಗೌಡರು ಸ್ವತಃ ಒಪ್ಪಿಕೊಂಡಂತಾಗಿದೆ | “ಕಳ್ಳನ ಮನಸ್ಸು ಹುಳ್ಳುಳ್ಳಗೆ” |ಕಂಡವರ ಬೆಡ್’ರೂಮ್’ಲ್ಲಿ ಕ್ಯಾಮರಾ ಇಡುವ ಚಾಳಿ ಇವರದ್ದು | “ಸಿಡಿ ಪಾರ್ಟಿ ಬಿಜೆಪಿ” : ಕಾಂಗ್ರೆಸ್ ಲೇವಡಿ Read More »

ಮಾಜಿ ವಿಜ್ಞಾನಿ, ಬರಹಗಾರ ಹಾಲ್ದೊಡ್ಡೇರಿ ಸುಧೀಂದ್ರ ಇನ್ನಿಲ್ಲ

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ DRDO ಮಾಜಿ ವಿಜ್ಞಾನಿ, HAL ಹಿರಿಯ ನಿವೃತ್ತ ಇಂಜಿನಿಯರ್ ಹಾಗೂ ಸುಪ್ರಸಿದ್ಧ ವಿಜ್ಞಾನ ಬರಹಗಾರ​ ಸುಧೀಂದ್ರ ಹಾಲ್ದೊಡ್ಡೇರಿ ವಿಧಿವಶರಾಗಿದ್ದಾರೆ. ಕಳೆದ ಹತ್ತು ದಿನಗಳ ಹಿಂದೆ ತೀವ್ರ ಹೃದಯಾಘಾತಕ್ಕೀಡಾಗಿದ್ದ ಅವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸುಧೀಂದ್ರ ಹಾಲ್ದೊಡ್ಡೇರಿ ಕನ್ನಡಪ್ರಭ ಸೇರಿದಂತೆ ಅನೇಕ ಪತ್ರಿಕೆಗಳಿಗೆ ವಿಜ್ಞಾನ ಬರಹಗಾರರಾಗಿದ್ದರು. ಸುಧೀಂದ್ರ ಅವರು ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿರುವುದರಿಂದ ಅವರ ದೇಹದಾನಕ್ಕೆ ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ. ಬೆಂಗಳೂರಿನ ಮೆಡಿಕಲ್ ಕಾಲೇಜಿಗೆ ಅಂಗಾಂಗ ದಾನ ಮಾಡಲಿದ್ದಾರೆ.ಖಾಸಗಿ ಆಸ್ಪತ್ರೆಯಲ್ಲಿ

ಮಾಜಿ ವಿಜ್ಞಾನಿ, ಬರಹಗಾರ ಹಾಲ್ದೊಡ್ಡೇರಿ ಸುಧೀಂದ್ರ ಇನ್ನಿಲ್ಲ Read More »